IMD Weather: ಚಂಡಮಾರುತ ಪರಿಚಲನೆ, 3 ದಿನ ಈ ಭಾಗಗಳಲ್ಲಿ ಜೋರು ಮಳೆ, ಶೀತ ಅಲೆ ಎಚ್ಚರಿಕೆ
ನವದೆಹಲಿ: ದೇಶದಲ್ಲಿ ಬದಲಾದ ಹವಾಮಾನ ವೈಪರೀತ್ಯಗಳ ಕಾರಣದಿಂದ ಶೀತ ಅಲೆ ಜೊತೆಗೆ ವಿವಿಧ ರಾಜ್ಯಗಳಲ್ಲಿ ಜೋರು ಮಳೆ ಸುರಿಸುವ ಮಾತುಗಳು ಸಕ್ರಿಯವಾಗಿವೆ. ಮುಂದಿನ ಮೂರು ದಿನಗಳ ಕಾಲ ರಾಜಸ್ಥಾನ ಮತ್ತು ಮಧ್ಯ ಪ್ರದೇಶ, ಹಿಮಾಲಯದ ಪಶ್ಚಿಮ ಭಾಗ ಹಾಗೂ ವಾಯುವ್ಯ ಭಾರತದ ಹಲವೆಡೆ ಮಳೆ ಆಗಲಿದೆ. ದಕ್ಷಿಣ ಭಾರತದ ಕರಾವಳಿ ರಾಜ್ಯಗಳಿಗೂ ಗಾಳಿ, ಗುಡುಗು ಸಹಿತ ಜೋರು ಮಳೆ ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಪೂರ್ಣ ಹವಾಮಾನ ಮುನ್ಸೂಚನೆ ಮುನ್ನ ಎಲ್ಲೆಲ್ಲಿ ವೈಪರೀತ್ಯಗಳು ಸಂಭವಿಸಿವೆ ಎಂಬ ಮಾಹಿತಿ ಇಲ್ಲಿದೆ.
ತಮಿಳುನಾಡು ಕರಾವಳಿ ಭಾಗ ಕೊಮೊರಿನ್ ಪ್ರದೇಶ ಹಾಗೂ ಅದರ ಸುತ್ತಮುತ್ತ ಸಮುದ್ರ ಮೇಲ್ಮೈನಲ್ಲಿ ವಾಯು ಚಂಡಮಾರುತದ ಪರಿಚಲನೆ ಉಂಟಾಗಿದೆ. ಇದು ಮನ್ನಾರ್ ಕೊಲ್ಲಿಯ ಭಾಗದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ 0.9 ಕಿಲೋಮೀಟರ್ ಎತ್ತರದಲ್ಲಿದೆ. ಇದರಿಂದಾಗಿ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಗಾಳಿಯ ವೇಗ ಹೆಚ್ಚಾಗಲಿದೆ. ಇನ್ನೂ ಹಿಮಾಚಲ ಪ್ರದೇಶ ಮತ್ತದರ ಸುತ್ತಮುತ್ತಲಿನ ನೆರೆ ಹೊರೆಗಳ ಪ್ರದೇಶಗಳ ಮೇಲೆ ಟ್ರಫ್ ಸೃಷ್ಟಿಯಾಗಿದೆ. ಇದರ ಬಿರುಗಾಳಿ ಎತ್ತರವು ಸಮುದ್ರ ಮಟ್ಟದಿಂದ 3.1 ಕಿಲೋಮೀಟರ್ ಎತ್ತರದಲ್ಲಿದೆ. ಹರಿಯಾಣದ ದಕ್ಷಿಣ ಭಾಗ, ವಾಯುವ್ಯ ಉತ್ತರ ಪ್ರದೇಶದ ಮೇಲೂ 0.9 ಕಿಲೋಮೀಟರ್ ಎತ್ತರದಲ್ಲಿದ ಚಂಡಮಾರುತ ಪರಿಚಲನೆ ಉಂಟಾಗಿದೆ.

ಉತ್ತರ ಭಾರತದ ಭೂ ಮೇಲ್ಮೈನಲ್ಲಿ ವೈಪರೀತ್ಯ ಉಂಟಾಗಿದೆ. ಗಾಳಿ ಬೀಸುವಿಕೆಯಲ್ಲಿ ಭಾರೀ ಬದಲಾವಣೆ ಆಗಿದೆ. ಇದು ಸಮುದ್ರ ಮಟ್ಟದಿಂದ 12.6 ಕಿಲೋಮೀಟರ್ ಎತ್ತರದಲ್ಲಿ ನೆಲೆಸಿದೆ. ಮತ್ತೊಂದು 5.8 ಕಿಲೋಮೀಟರ್ ಎತ್ತರದ ಸುಳಿಗಾಳಿಯು 27 ಡಿಗ್ರಿ ಉತ್ತರ ಅಕ್ಷಾಂಶದ ಉತ್ತರ ಭಾಗದಿಂದ 15 ಡಿಗ್ರಿ ಉತ್ತರ ಅಕ್ಷಾಂಶದವರೆಗೆ ವಿಸ್ತರಿಸಿದೆ. ಈ ಎಲ್ಲ ಬದಲಾವಣೆಗಳ ಪ್ರಭಾವದಿಂದಾಗಿ 2026ರ ಜನವರಿ 15 ರಂದು ರಾತ್ರಿ ಪಶ್ಚಿಮ ಹಿಮಾಲಯದಲ್ಲಿ ಹಲವೆಡೆ ಹಿಮಪಾತ, ಅಕ್ಕಪಕ್ಕದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ.
ಗುಡುಗು ಮಿಂಚು ಸಹಿತ ಮಳೆ
ಬಂಗಾಳಕೊಲ್ಲಿ ಭಾಗದಲ್ಲಿ ಉಂಟಾದ ಬದಲಾವಣೆಗಳ ತೀವ್ರತೆಯಿಂದ ಮುಂದಿನ ಮೂರು ದಿನ (ಜನವರಿ 16ರವರೆಗೆ) ಕೇರಳದ ದಕ್ಷಿಣ ಭಾಗ, ಲಕ್ಷದ್ವೀಪ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರತ್ಯೇಕ ಕಡೆಗಳಲ್ಲಿ ಜೋರು ಮಳೆ ಆಗಲಿದೆ. ಕೇರಳ ಜೊತೆಗೆ ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌ನ ಕೆಲವು ಸ್ಥಳಗಳಲ್ಲಿ ಗುಡುಗು- ಮಿಂಚು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿವಿಧೆಡೆ ಶೀತ ಅಲೆ, ದಟ್ಟ ಮಂಜು ಎಚ್ಚರಿಕೆ
ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ತೀವ್ರ ಚಳಿ, ಶೀತ ಅಲೆ ಹಾಗೂ ದಟ್ಟ ಮಂಜಿನ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಭಾಗಗಳಲ್ಲಿ ಶೀತ ಅಲೆ ಬೀಸುವ ಸಾಧ್ಯತೆ ಇದೆ. ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಂಜಾಬ್‌ನಲ್ಲಿ ಶೀತ ಅಲೆ ತೀವ್ರ ಶೀತ ಅಲೆ ಪ್ರಭಾವ ಕಂಡು ಬರಲಿದೆ. ಬಿಹಾರ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಒಡಿಶಾ ಮತ್ತು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಕೇರಳ, ತಮಿಳುನಾಡು, ಚೆನ್ನೈ ಕರಾವಳಿ ಭಾಗಗಳಲ್ಲಿ ಗಾಳಿ ಬೀಸುವ ವೇಗ ಹೆಚ್ಚಾಗಲಿದೆ. ಪ್ರತಿ ಗಂಟೆಗೆ 35 ಕಿಲೋ ಮೀಟರ್‌ನಿಂದ 45 ಕಿಲೋಮೀಟರ್‌ವರೆಗೆ ಗಾಳಿಯ ಬೀಸಲಿದೆ. ಹೀಗಾಗಿ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಮುನ್ಸೂಚನೆ ನೀಡಲಾಗಿದೆ.












Click it and Unblock the Notifications