ಉಕ್ರೇನ್‌ಗೆ ಭರ್ಜರಿ ಸಾಲ, 90 ಬಿಲಿಯನ್ ಯುರೋ ಕೊಡಲು ಯುರೋಪಿಯನ್ ಒಕ್ಕೂಟ ಒಪ್ಪಿಗೆ!
ಉಕ್ರೇನ್ ಇದೀಗ ರಷ್ಯಾ ಜೊತೆಗಿನ ಯುದ್ಧದಲ್ಲಿ ಭಾರಿ ಒದ್ದಾಡುತ್ತಾ ಇದ್ದು, ಕೈಯಲ್ಲಿ ಕಾಸು ಇಲ್ಲ ಎಂಬ ಕಾರಣಕ್ಕೆ ನರಳುತ್ತಿದೆ. ಒಂದು ಕಡೆ ರಷ್ಯಾ ಸೇನೆ ಉಕ್ರೇನ್‌ನ ಭಾಗಶಃ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದ್ದು, ಇನ್ನೊಂದು ಕಡೆ ಯುದ್ಧ ಮಾಡಲು ಸರಿಯಾದ ಅಸ್ತ್ರಗಳು ಇಲ್ಲದೆ ನರಳುತ್ತಿರುವ ಉಕ್ರೇನ್ ಸೈನಿಕರು ಪ್ರಾಣ ಬಿಡುತ್ತಿದ್ದಾರೆ. ಇದೇ ಸಮಯದಲ್ಲಿ ಉಕ್ರೇನ್ ಜನರಿಗೆ ಸರಿಯಾಗಿ ಊಟ ಮತ್ತು ನೀರು ಕೂಡ ಸಿಗುತ್ತಿಲ್ಲ. ಹೀಗಿದ್ದಾಗ ಯುರೋಪ್ ಒಕ್ಕೂಟ ಸಹಾಯಕ್ಕೆ ಧಾವಿಸಿದೆ, ಭರ್ಜರಿ ಸಾಲ ವ್ಯವಸ್ಥೆ ಮಾಡಲಾಗಿದೆ. ಉಕ್ರೇನ್‌ಗೆ ಭರ್ಜರಿ 90 ಬಿಲಿಯನ್ ಯುರೋ ನೀಡಲು ಯುರೋಪಿಯನ್ ಒಕ್ಕೂಟ ಒಪ್ಪಿಗೆ ಸೂಚಿಸಿದೆ.
ಯುರೋಪಿಯನ್ ಒಕ್ಕೂಟ ಎರಡು ವರ್ಷದಲ್ಲಿ ಉಕ್ರೇನ್‌ನ ಮಿಲಿಟರಿ ಅಗತ್ಯಕ್ಕೆ ಬೃಹತ್ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಯುದ್ಧದಿಂದ ಹಾನಿಗೀಡಾದ ಆರ್ಥಿಕತೆಗೆ ಲಕ್ಷಾಂತರ ಕೋಟಿ ರೂಪಾಯಿ ಹಣ ನೀಡಲು ಮುಂದಾಗಿದೆ. ಈ ಮೂಲಕ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಗೆ ಚೈತನ್ಯವನ್ನು ತುಂಬಲು ಯುರೋಪ್ ಒಕ್ಕೂಟ ಮುಂದಾಗಿದೆ. ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಷ್ಟದಲ್ಲಿ ಉಕ್ರೇನ್ ನಿರಾಳವಾಗಿದೆ. 2026 ಮತ್ತು 2027 ರಲ್ಲಿ ಉಕ್ರೇನ್ ಅಗತ್ಯ ಪೂರೈಸಲು 90 ಬಿಲಿಯನ್ ಯುರೋ ನೀಡಲು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದು ಅಮೆರಿಕದ ಸುಮಾರು 105 ಬಿಲಿಯನ್ ಡಾಲರ್‌ಗೆ ಸಮವಾಗಲಿದೆ.

2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಯುದ್ಧ
ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ಯುದ್ಧ ಸಾರಿತ್ತೋ ಅಲ್ಲಿಂದ ಮುಂದೆ ದೊಡ್ಡ ಗಲಭೆ ಶುರುವಾಯ್ತು ಉಕ್ರೇನ್ ದೇಶ ನಡುಗಿಸಲು ಮುಂದೆ ನುಗ್ಗಿದ್ದ ರಷ್ಯಾ ಸೇನೆ ಜಾಗತಿಕವಾಗಿ ಕೂಡ ಕೆಟ್ಟ ಹೆಸರು ಪಡೆದು, ಜೋ ಬೈಡನ್ ಆಡಳಿತದಲ್ಲಿ ಇದ್ದಾಗ ಹಲವು ನಿರ್ಬಂಧ ಎದುರಿಸಿ ನಿಲ್ಲಬೇಕಾದ ಸ್ಥಿತಿಗೆ ಬಂದಿತ್ತು. 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಕದನ ಇನ್ನೇನು 4 ವರ್ಷ ಪೂರೈಸುವ ಸನಿಹದಲ್ಲೇ ಇದೆ. ಇಷ್ಟೆಲ್ಲಾ ಕಠಿಣ ಸ್ಥಿತಿ ಇದ್ದರೂ ಉಕ್ರೇನ್ ಮಾತ್ರ ಈ ಸಮಯದಲ್ಲಿ ರಷ್ಯಾ ಜೊತೆ ಶಾಂತಿ ಮಾತುಕತೆಗೆ ಸಿದ್ಧವಾಗಿಲ್ಲ. ಇದೇ ಸಮಯದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಯುರೋಪಿಯನ್ ಒಕ್ಕೂಟ ಉಕ್ರೇನ್‌ಗೆ ಸಹಾಯ ಮಾಡಲು ಮುಂದಾಗಿದೆ.












Click it and Unblock the Notifications