ಕಾಲೇಜು ಹುಡುಗಿ ಪ್ರೇಮ ಪಾಶದಲ್ಲಿ ಬಿದ್ದಿದ್ದರು ಮುಖ್ಯಮಂತ್ರಿ, ಯಾವ ಸಿನಿಮಾಗೂ ಕಮ್ಮಿ ಇಲ್ಲ ಲವ್ ಸ್ಟೋರಿ! Love Story
ರಾಜಕೀಯ ನಾಯಕರಿಗೆ ಕೂಡ ಲವ್ ಸ್ಟೋರಿ ಇದ್ದೇ ಇರುತ್ತದೆ, ಅದರಲ್ಲೂ ತಮ್ಮ ಐಷಾರಾಮಿ ಜೀವನ ಮೂಲಕ ಸಾಕಷ್ಟು ಸದ್ದು ಮಾಡುವ ರಾಜಕೀಯ ನಾಯಕರು ಪ್ರೇಮದಲ್ಲಿ ಬಿದ್ದು ಅವರನ್ನೇ ಮದುವೆ ಆಗಿರುವ ಘಟನೆಗಳು ಮತ್ತು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಅದರಲ್ಲೂ ಕಾಲೇಜು ಹುಡುಗಿ ಪ್ರೇಮ ಪಾಶದಲ್ಲಿ ಬಿದ್ದಿದ್ದರು ಈ ಮುಖ್ಯಮಂತ್ರಿ, ಯಾವುದೇ ಸಿನಿಮಾಗೂ ಕಮ್ಮಿ ಇಲ್ಲ ಇವರ ಲವ್ ಸ್ಟೋರಿ. ಹಾಗಾದರೆ ಯಾರು ಆ ಮುಖ್ಯಮಂತ್ರಿ? ಇದೀಗ ಯಾಕೆ ಸೌಂಡ್ ಮಾಡುತ್ತಿದೆ? ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮುಖ್ಯಮಂತ್ರಿ ಎಂಬುದು ಅತ್ಯಂತ ದೊಡ್ಡ ಸ್ಥಾನ, ಹಾಗಂತಾ ಅವರು ಕೂಡ ಮನುಷ್ಯರೇ ಅಲ್ಲವಾ? ಅವರಿಗೂ ಸಂಸಾರ & ಸಾಮಾನ್ಯರಂತೆ ಬದುಕುವ ಆಸೆ ಇರುತ್ತದೆ. ಹೀಗಿದ್ದಾಗ ಮುಖ್ಯಮಂತ್ರಿ ಒಬ್ಬರ ಕಾಲೇಜು ಹುಡುಗಿ ಲವ್ ಸ್ಟೋರಿ ಈಗ ಸೌಂಡ್ ಮಾಡುತ್ತಿದೆ. ಅದು ಬೇರೆ ಯಾರೂ ಅಲ್ಲ, ಅಸ್ಸಾಂ ಮುಖ್ಯಮಂತ್ರಿ ಆಗಿರುವ ಹಿಮಂತ ಬಿಸ್ವಾ ಶರ್ಮಾ ಅವರ ಪ್ರೇಮಕಥೆ ಇದೀಗ ಎಲ್ಲೆಲ್ಲೂ ವೈರಲ್ ಆಗಿ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಯಾಕಂದ್ರೆ ಅವರು ಪ್ರೀತಿ ಮಾಡಿದ್ದು ಕಾಲೇಜು ಹುಡುಗಿಯನ್ನು. ಹಾಗೇ ಅವರ ಈ ಲವ್ ಸ್ಟೋರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಅರೆರೆ ಲವ್ ಮಾಡಿದ ಮಾತ್ರಕ್ಕೆ ಚರ್ಚೆ ಏಕೆ ಅಂದ್ರಾ? ಬನ್ನಿ ತಿಳಿಯೋಣ.

ಮುಖ್ಯಮಂತ್ರಿ ಲವ್ ಸ್ಟೋರಿ ವೈರಲ್
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪದೇ ಪದೇ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ನೀಡಿ ಸೌಂಡ್ ಆಗುವುದೇ ಹೆಚ್ಚು ಹಿಮಂತ ಬಿಸ್ವಾ ಶರ್ಮಾ. ಮಂಗಳವಾರ ಚುನಾವಣೆ ಗೆಲುವಿನ ಬಗ್ಗೆ ಮಾತನಾಡುತ್ತಾ, 'ರಾಹುಲ್ ಗಾಂಧಿ ಇರುವವರೆಗೆ, ಬಿಜೆಪಿ ಸುಲಭವಾಗಿ ಚುನಾವಣೆಗಳನ್ನ ಗೆಲ್ಲುತ್ತೆ' ಎಂದಿದ್ದರು. ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು, ಇದೇ ಕಾರಣಕ್ಕೆ ಶರ್ಮಾ ಹೇಳಿಕೆ ಗುರಿಯಾಗಿಸಿಕೊಂಡು ಭರ್ಜರಿ ವಾಗ್ದಾಳಿ ಮಾಡುತ್ತಿದ್ದಾರೆ ಕಾಂಗ್ರೆಸ್ ಲೀಡರ್ಸ್. ಈ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಲವ್ ಸ್ಟೋರಿ ಸಖತ್ ಸೌಂಡ್ ಮಾಡುತ್ತಿದೆ.
ಹಿಮಂತ ಮತ್ತು ರಿನಿಕಿ ಲವ್ ಸ್ಟೋರಿ
ರಾಹುಲ್ ಗಾಂಧಿ ಮಾತ್ರವಲ್ಲದೆ ವಿರೋಧ ಪಕ್ಷಗಳ ನಾಯಕರ ಬಗ್ಗೆ ಪದೇ ಪದೇ ಕಮೆಂಟ್ ಮಾಡುವ ಮೂಲಕ ಹಿಮಂತ ಬಿಸ್ವಾ ಶರ್ಮಾ ಹವಾ ಎಬ್ಬಿಸಿದ್ದಾರೆ. ಹೀಗಿದ್ದಾಗ ಖುದ್ದಾಗಿ ಅವರ ಹೆಂಡತಿಯೇ ಶರ್ಮಾ ಅವರ ಲವ್ ಸ್ಟೋರಿ ಅಂದ್ರೆ ಪ್ರೇಮಕಥೆ ಬಗ್ಗೆ ರಿವೀಲ್ ಮಾಡಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಅವರ ಹೆಂಡತಿ ರಿನಿಕಿ ಭುಯಾನ್ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ತಮ್ಮ ಜೀವನದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ರಿನಿಕಿ ಭುಯಾನ್ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮೊದಲು ಭೇಟಿ ಮಾಡಿದ್ದು ಕಾಲೇಜಿನಲ್ಲಿ ಓದುವಾಗ ಅಂತೆ. ಆಗ ರಿನಿಕಿ ಭುಯಾನ್ ಅವರಿಗೆ ಕೇವಲ 17 ವರ್ಷ ವಯಸ್ಸು. ಹೀಗಿದ್ದಾಗ ರಿನಿಕಿ ಭುಯಾನ್ ಅವರ ಕಾಲೇಜಿನಲ್ಲೇ ಓದಿದ್ದ ಶರ್ಮಾ ಅವರಿಗೆ ಮೊದಲು ಸ್ನೇಹ ಶುರುವಾಗಿತ್ತಂತೆ.

ಸ್ನೇಹದಿಂದ ಪ್ರೇಮಕಥೆ ಶುರು!
ತಮ್ಮ ಸಹೋದರಿ ಜೊತೆಗೆ ಕಾಲೇಜಿಗೆ ಹೋಗಿದ್ದಾಗ ಮೊದಲ ಬಾರಿಗೆ ಹಿಮಂತ ಬಿಸ್ವಾ ಶರ್ಮಾ ಅವರ ಭೇಟಿ ಮಾಡಿದೆ. ನಾನು ಕಾಟನ್ ಕಾಲೇಜಿನಲ್ಲಿ ಓದುವ ಸಮಯದಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದೆ, ನಂತರ ನಮ್ಮ ಮತ್ತು ಅವರ ನಡುವೆ ಸ್ನೇಹ ಗಾಢವಾಗಿ ಪ್ರೇಮಕ್ಕೆ ತಿರುಗಿತ್ತು ಎಂದಿದ್ದಾರೆ. ಹೀಗಿದ್ದಾಗ ರಿನಿಕಿ ಭುಯಾನ್ ಅವರು 17 ವರ್ಷ ವಯಸ್ಸಿನಲ್ಲಿ ಇದ್ದಾಗ ಮೊದಲು ಭೇಟಿ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಂದೆ ಅವರನ್ನೇ ಮದುವೆ ಆದರು. ಈ ಕುರಿತು ಅವರ ಹೆಂಡತಿ ನೀಡಿರುವ ಖಾಸಗಿ ಸಂದರ್ಶನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗೇ ಪರ & ವಿರೋಧದ ಚರ್ಚೆ ಕೂಡ ನಡೆಯುತ್ತಿದ್ದು, ಯಾವುದೇ ಸಿನಿಮಾ ಸ್ಟೋರಿಗೆ ಇದು ಕಮ್ಮಿ ಇಲ್ಲ ಅಂತಿದ್ದಾರೆ ನೆಟ್ಟಿಗರು.












Click it and Unblock the Notifications