ಗಿಲ್ಲಿ ಪರ ಹೆಚ್ಚಿನ ಮತಗಳು, ಬಿಗ್‌ಬಾಸ್ ಸೀನ್ 12 ಗೆಲ್ಲೋದು ಗ್ಯಾರಂಟಿ ಅಂದ್ರು ಫ್ಯಾನ್ಸ್! Gilli Nata
ಗಿಲ್ಲಿ ನಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಿಗ್‌ಬಾಸ್ ಸೀಸನ್ 12 ಗೆಲ್ಲೋದು ಗ್ಯಾರಂಟಿ ಅಂತಾನೇ ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮಾತ್ರವಲ್ಲ ಹಳ್ಳಿ ಹಳ್ಳಿಗಳಲ್ಲಿ ಕೂಡ ಗಿಲ್ಲಿ ನಟ ಅಭಿಮಾನಿಗಳು ಇದೀಗ ಬೆನ್ನಿಗೆ ನಿಂತು ಬೆಂಬಲ ಕೊಡುತ್ತಿದ್ದು, ಗಿಲ್ಲಿ ಗೆಲ್ಲಬೇಕು ಎಂಬ ಕೂಗು ಹಾಕುತ್ತಿದ್ದಾರೆ. ಅಲ್ಲದೆ ಈ ಬಾರಿಯ ಕಪ್ ನಮ್ಮ ಗಿಲ್ಲಿಗೆ ಗ್ಯಾರಂಟಿ ಅಂತಿದ್ದಾರೆ. ಈ ಸಮಯದಲ್ಲೇ ಹೆಚ್ಚಿನ ಪ್ರಮಾಣದ ಮತಗಳು ಗಿಲ್ಲಿಗೆ ಹಾಕಲು ಮಾಸ್ಟರ್ ಪ್ಲಾನ್ ಕೂಡ ಮಾಡಿದ್ದಾರೆ ಫ್ಯಾನ್ಸ್.
ಗಿಲ್ಲಿ ಪರವಾಗಿ ವೋಟ್ ಮಾಡಿದರೆ ಉಡುಗೊರೆ ಕೊಡುವುದು ಸೇರಿದಂತೆ ಹಲವು ರೀತಿಯ ಆಫರ್ಸ್ ಘೋಷಣೆ ಮಾಡುತ್ತಿದ್ದಾರೆ ಅಭಿಮಾನಿಗಳು. ಅದರಲ್ಲೂ ಗಿಲ್ಲಿ ನಟಗೆ 99 ವೋಟ್ ಹಾಕಿದರೆ ಟೀ ಫ್ರೀ ಎಂಬ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದು, ಗಿಲ್ಲಿಗೆ ಇನ್ನಷ್ಟು ಬೆಂಬಲ ಕೊಡಲು ಮುಂದಾಗಿದ್ದಾರೆ. ಇನ್ನೇನು ಫೈನಲ್ ಬರುತ್ತಿರುವ ಸಮಯದಲ್ಲೇ ಗಿಲ್ಲಿ ಪರ ಕ್ರೇಜ್ ಕೂಡ ಹೆಚ್ಚಾಗುತ್ತಾ ಇದೆ. ಹೀಗಾಗಿ ಅಭಿಮಾನಿ ಬಳಗ ಸಂಭ್ರಮಕ್ಕೆ ಸಜ್ಜಾಗಿದೆ.

ಕೆಲವೇ ದಿನಗಳಲ್ಲಿ ಬರಲಿದೆ ಫಿನಾಲೆ!
ಮಂಡ್ಯ ಮೂಲದ ಗಿಲ್ಲಿ ಪರವಾಗಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಹವಾ ಹೆಚ್ಚಾಗಿ, ಬೆಂಬಲ ಕೂಡ ಸಿಗುತ್ತಾ ಇದೆ. ಗಿಲ್ಲಿ ನಟ ಬಡವರ ಮನೆ ಹುಡುಗ ಅನ್ನೋ ವಿಚಾರವು ಕೂಡ ಈ ಬಾರಿ ದೊಡ್ಡ ಸೌಂಡ್ ಮಾಡಿ, ಗಿಲ್ಲಿ ಗೆಲ್ಲಬೇಕು ಎಂಬ ಕೂಗು ಹೆಚ್ಚಾಗುತ್ತಿದೆ. ಅದರಲ್ಲೂ ಗಿಲ್ಲಿ ಪರ ಬ್ಯಾನರ್ ಹಾಕುವುದು & ಆ ಮೂಲಕ ಬೆಂಬಲ ವ್ಯಕ್ತಪಡಿಸುವ ಘಟನೆಗಳ ನಡುವೆ ಇದೀಗ ವೋಟ್ ಮಾಡಿದರೆ, ಉಚಿತವಾಗಿ ವಸ್ತುಗಳನ್ನ ಹಂಚುವುದಕ್ಕೂ ಅಭಿಮಾನಿಗಳು ಮುಂದೆ ಬರುತ್ತಿರುವ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ. ಈ ಮೂಲಕ ಗಿಲ್ಲಿ ಹವಾ ಮತ್ತಷ್ಟು ಜೋರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ ಬರಲಿದೆ.
ಎಲ್ಲಾ ಕಡೆ ಗಿಲ್ಲಿ ಹವಾ
ಒಟ್ನಲ್ಲಿ ಗಿಲ್ಲಿ... ಗಿಲ್ಲಿ... ಗಿಲ್ಲಿ... ಎಲ್ಲಿ ನೋಡಿದರೂ ಗಿಲ್ಲಿ ನಟ ಹವಾ ಜೋರಾಗಿದೆ. ಭರ್ಜರಿ ದೊಡ್ಡ ಮಟ್ಟದಲ್ಲಿ ಗಿಲ್ಲಿಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಗಿಲ್ಲಿ ನಟ ಬಿಗ್‌ಬಾಸ್ ಗೆದ್ದರೆ ಈ ಹಿಂದಿನ ಎಲ್ಲಾ ದಾಖಲೆ ಪುಡಿ ಪುಡಿ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಹಾಗೇ ಎಲ್ಲಾ ರೀತಿಯಲ್ಲೂ ಗಿಲ್ಲಿಗೆ ಸಹಕಾರ ನೀಡುತ್ತಿರುವ ಅಭಿಮಾನಿಗಳು, ಬಿಗ್‌ಬಾಸ್ ಗೆದ್ದು ಬಾ ಎಂದು ಹಾರೈಸುತ್ತಿದ್ದಾರೆ. ಆ ಮೂಲಕ ಮತ್ತೊಂದು ಮೈಲಿಗಲ್ಲು ತಲುಪಲು ಗಿಲ್ಲಿ ನಟ ಸಜ್ಜಾಗಿದ್ದಾರೆ.












Click it and Unblock the Notifications