KID Capsule Satellite: ಇಸ್ರೋ PSLV-C62 ಕಾರ್ಯಾಚರಣೆಯಲ್ಲಿ ಅಚ್ಚರಿ ಬೆಳವಣಿಗೆ: ಬದುಕುಳಿದ ಉಪಗ್ರಹ
ಬೆಂಗಳೂರು: ಈ ವರ್ಷ 2026ರಲ್ಲಿ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಭೂ ಸರ್ವೇಕ್ಷಣ ಉಪಗ್ರಹ ಒಳಗೊಂಡಂತೆ 14 ಉಪಗ್ರಹ ಹೊತ್ತ ಮೊದಲ 'ಪಿಎಸ್‌ಎಲ್‌ವಿ-ಸಿ62' ಮಿಷನ್ ಕಕ್ಷೆಗೆ ಸೇರುತ್ತಿದ್ದಂತೆ ವಿಫಲಗೊಂಡಿತು. ಇದಾಗಿ ಮರುದಿನವೇ ಮಹತ್ವದ ಬೆಳವಣಿಗೆ ನಡೆದಿದ್ದು, ಅದರಲ್ಲಿನ ಉಪಗ್ರಹವೊಂದು ಬದುಕುಳಿದಿದ್ದು ಇಸ್ರೋ ಗೆ ಮಾಹಿತಿ ರವಾನಿಸಿದೆ ಎಂದು ಆಬಿಟೈಲ್ ಪ್ಯಾರಾಡೈಮ್ ತಿಳಿಸಿದೆ.
ರಾಕೇಟ್ ಉಡಾವಣೆ ವೈಫಲ್ಯವಾದಾಗ ಅದರಲ್ಲಿನ ಉಪಗ್ರಹಗಳು ನಾಶವಾಗುತ್ತವೆ. ಉತ್ತಮ ಸ್ಥಿತಿ ಅಲ್ಲದ ಹಂತಕ್ಕೆ ತಲುಪುತ್ತವೆ. ಭೂಮಿಯೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತವೆ. ಆದರೆ ಈ ಉಡಾವಣೆಯು ವೈಫಲ್ಯವಾದರೂ ಸಹಿತ ಆಶ್ಚರ್ಯಕರ ರೀತಿಯಲ್ಲಿ 'ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್‌ಸ್ಟ್ರೇಟರ್' (KID) ಉಪಗ್ರಹ ಉಳಿದಿದೆ. ಸ್ಯಾಟಲೈಟ್ ಬೇರ್ಪಟ್ಟು ಬದುಕಿದ್ದರ ಬಗ್ಗೆ ಡೇಟಾವನ್ನು ಭೂಮಿಗೆ ರವಾನಿಸಿದೆ ಎಂದು ಆಬಿಟೈಲ್ ಪ್ಯಾರಾಡೈಮ್ ಎಕ್ಸ್ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

25 ಕೆಜಿ ತೂಕದ ಫುಟ್‌ಬಾಲ್ ಗಾತ್ರದ ಈ ಪ್ರೊಟೊಟೈಪ್ ಅನ್ನು ಜನವರಿ 12 ರಂದು ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಎರಡು ಕಕ್ಷೆಯನ್ನು ಸುಸೂತ್ರವಾಗಿ ದಾಟಿದ್ದ ರಾಕೇಟ್ ನಂತರ ಮೂರನೇ ಹಂತದಲ್ಲಿ ವೈಫಲ್ಯಗೊಂಡಿತು. ಸಂಪರ್ಕ ಕಡೆದುಕೊಂಡಿತು. ಕಾರ್ಯಾಚರಣೆಯಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಅದಾಗಿ ಒಂದು ದಿನದಲ್ಲಿ ಕಿಡ್ ಕ್ಯಾಪ್ಸುಲ್ ಪಿಎಸ್‌ಎಲ್‌ವಿ-ಸಿ62 ನಿಂದ ಬೇರ್ಪಟ್ಟು ಬದುಕುಳಿದಿದೆ. 3ಕ್ಕೂ ಅಧಿಕ ನಿಮಿಷಗಳ ಮಾಹಿತಿಯನ್ನು ರವಾನಿಸಿದೆ.
ಶೀಘ್ರವೇ ಇನ್ನಷ್ಟು ಮಾಹಿತಿ ಸಿಗುವ ವಿಶ್ವಾಸ
ಈ ಮಾಹಿತಿ ಆಧಾರದಲ್ಲಿ ನಾವು ಅದರ ಪಥವನ್ನು ಮರು ನಿರ್ಮಾಣ ಮಾಡಬಹುದಾಗಿದೆ. ಉಚ್ಚ ತಾಪಮಾನ ಮತ್ತು ಉಚ್ಚ G-ಲೋಡ್ ಆಧಾರದಲ್ಲಿ ಆಂತರಿಕ ತಾಪಮಾನದ ಮಾಹಿತಿ ಪಡೆದಿದ್ದೇವೆ. ಶೀಘ್ರವೇ ಪೂರ್ಣ ಡೇಟಾ ಸಿಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡುವ ಉದ್ದೇಶದಿಂದ ಮರು ಪ್ರವೇಶ ಪರೀಕ್ಷೆಗಾಗಿ ವಿನ್ಯಾಸಗೊಳಿಸಲಾದ ಈ ಕ್ಯಾಪ್ಸುಲ್ ಪ್ರಾಯೋಗಿಕ ಯಂತ್ರಾಂಶ ಹಾಗೂ ನಿಧಾನಗತಿಯ ಶಕ್ತಿಯ ಒತ್ತಡ ಸಹಿಸಿಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Our KID capsule, against all odds, separated from PSLV C62, switched on, and transmitted data. We're reconstructing trajectory. Full report will come. [Edited from previous version]
— Orbital Paradigm (@OrbitalParadigm) January 13, 2026
ಇಸ್ರೋದ ಪಿಎಸ್‌ಎಲ್‌ವಿ-ಸಿ62 ಇದು ಡಿಆರ್‌ಡಿಓ ಕಾರ್ಯತಂತ್ರದ ಇಮೇಜಿಂಗ್ ಉಪಗ್ರಹವಾದ EOS-N1 (ಅನ್ವೇಶ) ಜೊತೆಗೆ ಆನ್-ಆರ್ಬಿಟ್ ಇಂಧನ ತುಂಬಲು AayulSAT ಮತ್ತು ಮಾರಿಷಸ್, ನೇಪಾಳ ಮತ್ತು ಇತರ ದೇಶಗಳ ಅಂತಾರಾಷ್ಟ್ರೀಯ ಪೇಲೋಡ್‌ಗಳು ಸೇರಿದಂತೆ 16 ಉಪಗ್ರಹಗಳ ಸಹಿತ ನಭಕ್ಕೆ ಹೊತ್ತೊಯ್ದಿತ್ತು. ಮೂರನೇ ಹಂತದಲ್ಲಿ ತಾಂತ್ರಿಕ ದೋಷದಿಂದ ಕಾರ್ಯಾಚರಣೆ ವೈಫಲ್ಯವಾಯಿತು. ಇದರಿಂದಾಗಿ ಕಕ್ಷೆ ತಲುಪಬೇಕಿದ್ದ ಎಲ್ಲ 16 ಉಪಗ್ರಹಗಳು ನಾಶವಾಗುವಂತೆ ಮಾಡಿತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರೇ ಇದನ್ನು ದೃಢಪಡಿಸಿದ್ದರು. ಅದರ ಬೆನ್ನಲ್ಲೆ ಬುದುಕುಳಿದ ಕಿಡ್ ಕ್ಯಾಪ್ಸುಲ್ ಜೊತೆಗೆ ಇಸ್ರೋ ವಿಜ್ಞಾನಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ವೈಫಲ್ಯದ ತನಿಖೆ ಜೊತೆಗೆ ಉಪಗ್ರಹದ ನಿರ್ವಹಣೆ, ಮಾಹಿತಿ ಸಂಗ್ರಹಿಸುವಿಕೆ ಸಹ ಮಾಡಲಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications