Strike: ಸಾರಿಗೆ ಮುಷ್ಕರ ಎಚ್ಚರಿಕೆ ನೀಡಿದ ಬಿಜೆಪಿ: ₹224 ಕೋಟಿ ಪಾವತಿಸಿದ್ದೇವೆ ಎಂದ ರಾಮಲಿಂಗಾ ರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನೌಕರರ 38 ತಿಂಗಳ ಹಿಂಬಾಕಿ ವೇತನ ನೀಡಬೇಕಿದೆ. ಶಕ್ತಿ ಯೋಜನೆ ಜಾರಿ ಬಳಿಕವು ಸಾರಿಗೆ ಇಲಾಖೆ ಲಾಭದಲ್ಲಿದ್ದಿದ್ದೇ ಆದಲ್ಲಿ ನಿವೃತ್ತ ನೌಕರರ ಬಾಕಿ ಹಣವನ್ನು ನೀಡುತ್ತಿಲ್ಲವೇಕೆ?. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡುವ ಪರಿಸ್ಥಿತಿದೆ ಇದೆ ಎಂದು ಬಿಜೆಪಿ ಪ್ರಸ್ತಾಪಿಸಿದೆ. ಇದಕ್ಕೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಸಾರಿಗೆ ನಿವೃತ್ತ ನೌಕರರ ಹಿಂಬಾಕಿ, ಮುಷ್ಕರ ಬಗ್ಗೆ ಮಾತನಾಡಿ ಬಿಜೆಪಿ ಟ್ವಿಟ್ ಮಾಡಿತ್ತು. '2020 ರ ಜನವರಿ1 ರಿಂದ 2023 ರ ಫೆಬ್ರವರಿ 28 ರ ನಡುವೆ ನಿವೃತ್ತರಾದ ನೌಕರರಿಗೆ 2020 ರ ಜನವರಿ 1 ರಿಂದ ಜಾರಿಗೆ ಬಂದಿರುವ ಶೇಕಡಾ 15 ರಷ್ಟು ವೇತನ ಹೆಚ್ಚಳದ ಹಿಂಬಾಕಿಯನ್ನು ಸರ್ಕಾರ ಈವರೆಗೂ ನೀಡಿಲ್ಲ. 38 ತಿಂಗಳ ವೇತನ ಬಾಕಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನಿವೃತ್ತ ನೌಕರರು ಪ್ರತಿಭಟಿಸುವ ಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿ ಮಾಡಿದೆ' ಎಂದು ದೂರಿತ್ತು.

'ಶಕ್ತಿ ಯೋಜನೆಯಿಂದ ಲಾಭವಾಗಿದೆಯೆಂದು ಪುಂಗುವ ರಾಮಲಿಂಗಾ ರೆಡ್ಡಿ ಅವರೇ ಇಲಾಖೆ ಲಾಭದಲ್ಲಿದ್ದರೆ ಸಾರಿಗೆ ಸಂಸ್ಥೆಗಳ ನಿವೃತ್ತ ನೌಕರರ ಬಾಕಿ ಹಣವನ್ನು ನೀಡುತ್ತಿಲ್ಲವೇಕೆ?. ವೇತನ ಹೆಚ್ಚಳದ ಬಾಕಿ ಪಾವತಿಸದಷ್ಟು ಹೀನಾಯ ಸ್ಥಿತಿಗೆ ನಿಮ್ಮ ಸರ್ಕಾರ ತಲುಪಿದ್ಯಾಕೆ?. ನಿವೃತ್ತ ಚಾಲಕ-ನಿರ್ವಾಹಕರ ಬದುಕನ್ನು ಕತ್ತಲು ಮಾಡಿದ್ಯಾಕೆ? ಉತ್ತರಿಸಿ' ಬಿಜೆಪಿ ಖಾರವಾಗಿ ಪ್ರಶ್ನಿಸಿತ್ತು.
ಬಿಜೆಪಿಗೆ ತಿರುಗೇಟು ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ವೇತನ ಪರಿಷ್ಕರಣೆ ಸಂಬಂಧ ಮೊದಲ ಬಾರಿಗೆ ಮುಷ್ಕರ ಮಾಡಿದ್ದು ನಿಮ್ಮ ಬಿ.ಜೆ.ಪಿ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ?. ತಮ್ಮ ಬಿ.ಜೆ.ಪಿ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ವೇತನಕ್ಕಾಗಿ15 ದಿವಸಗಳ ಸುದೀರ್ಘ ಮುಷ್ಕರ ನಡೆದಿತ್ತು ಎಂಬುದನ್ನು ಅವರು ನೆನಪಿಸಿದರು.
ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು 3000 ನೌಕರರ ವಜಾ/ ಅಮಾನತು/ ವರ್ಗಾವಣೆ ಮಾಡಿ ಹಲವು ಸಿಬ್ಬಂದಿಗಳ ಮೇಲೆ FIR ಹಾಕಿಸಿ, ಇಂದಿಗೂ ಕೋರ್ಟ್/ಕಛೇರಿ ಅಂತ ಅಲೆಯುತ್ತಿದ್ದಾರೆ ಅದನ್ನು ಮರೆತು ಬಿಟ್ಟಿರಾ?. ಬಿ.ಜೆ.ಪಿಯ ಅವಧಿಯಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ 38 ತಿಂಗಳುಗಳ ಬಾಕಿ ಹಣ ಪಾವತಿ ಮಾಡಿರಲಿಲ್ಲ. ಅದಕ್ಕಾಗಿ ಯಾವುದೇ ಹಣ ಮೀಸಲಿರಿಸದೆ ಸಾರಿಗೆ ನೌಕರರನ್ನು ಬೀದಿಗೆ ತಂದು ಅವರು ಮುಷ್ಕರವನ್ನು ಮಾಡುವ ಹಂತಕ್ಕೆ ತಂದಿದ್ದು ಬಿ.ಜೆ.ಪಿ ಆಡಳಿತ ಎಂದು ತಿರುಗೇಟು ಕೊಟ್ಟರು.
ರೂ.224 ಕೋಟಿ ಹಣ ಪಾವತಿಸಿದ್ದೇವೆ: ಸಚಿವ
2023 ರಲ್ಲಿ ವೇತನ ಹೆಚ್ಚಳ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ನೀಡದೆ ಹೋಗಿದ್ದು ತಾವು ಎಂಬುದನ್ನು ಮರೆತಿದ್ದೀರಿ. ನಿವೃತ್ತ ನೌಕರರಿಗೆ ನೀವು ಪಾವತಿ ಮಾಡದೇ ಹೋಗಿದ್ದ ರೂ.224 ಕೋಟಿ ಹಣವನ್ನು ನಾವು ನಿವೃತ್ತ ನೌಕರರಿಗೆ ಪಾವತಿ ಮಾಡಿದ್ದೇವೆ. ಯಾವ ಮುಖ ಇಟ್ಟುಕೊಂಡು ನಿವೃತ್ತಿ ಹೊಂದಿದ ನೌಕರರ ಬಗ್ಗೆ ಟ್ಟೀಟ್ ಮಾಡುತ್ತೀರಿ?
2020 ರ ಜನವರಿ1 ರಿಂದ 2023 ರ ಫೆಬ್ರವರಿ 28 ರ ನಡುವೆ ನಿವೃತ್ತರಾದ ನೌಕರರಿಗೆ 2020 ರ ಜನವರಿ 1 ರಿಂದ ಜಾರಿಗೆ ಬಂದಿರುವ ಶೇ. 15 ರಷ್ಟು ವೇತನ ಹೆಚ್ಚಳದ ಹಿಂಬಾಕಿಯನ್ನು ಸರ್ಕಾರ ಈವರೆಗೂ ನೀಡಿಲ್ಲ. 38 ತಿಂಗಳ ವೇತನ ಬಾಕಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನಿವೃತ್ತ ನೌಕರರು ಪ್ರತಿಭಟಿಸುವ ಸ್ಥಿತಿಯನ್ನು… pic.twitter.com/hvuxRqMs4N
— BJP Karnataka (@BJP4Karnataka) January 14, 2026
ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಬೆಳೆಸುವ ಯಾವುದೇ ಒಂದೇ ಒಂದು ಉಪಕ್ರಮ ಜಾರಿಯಾಗಿದೆ. ನೇಮಕಾತಿಯು ನಡೆದಿಲ್ಲ. ನಿಗಮಗಳಿಗೆ ಹೊಸ ಬಸ್ಸುಗಳ ಸೇರ್ಪಡೆ ಮಾಡಲಿಲ್ಲ. ಡಕೋಟಾ ಬಸ್ಸುಗಳು, ನೌಕರರಿಗೆ ಅರ್ಧ ವೇತನ/ ಕೆಲವೊಮ್ಮೆ ಈ ತಿಂಗಳ ವೇತನ ಮುಂದಿನ ತಿಂಗಳು, ಹೀಗೆ ಹತ್ತು ಹಲವು ತಮ್ಮ ದುರಾಡಳಿತದ ಉದಾಹರಣೆಗಳು ಸಾಕಷ್ಟುವೆ ಎಂದರು.
@BJP4Karnataka
— Ramalinga Reddy (@RLR_BTM) January 14, 2026
✅ ವೇತನ ಪರಿಷ್ಕರಣೆ ಸಂಬಂಧ ಮೊದಲ ಬಾರಿಗೆ ಮುಷ್ಕರ ಮಾಡಿದ್ದು ನಿಮ್ಮ ಬಿ.ಜೆ.ಪಿ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ?
✅ತಮ್ಮ ಬಿ.ಜೆ.ಪಿ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ವೇತನಕ್ಕಾಗಿ15 ದಿವಸಗಳ ಸುದೀರ್ಘ ಮುಷ್ಕರ ನಡೆದಿದ್ದು ಮರೆತು ಬಿಟ್ಟಿರಾ?
✅ ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು 3000 ನೌಕರರ ವಜಾ/… pic.twitter.com/s9qD43FsZX
10,000 ನೇಮಕಾತಿ, 7800 ಹೊಸ ಬಸ್ ಸೇರ್ಪಡೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬರೋಬ್ಬರಿ 10,000 ನೇಮಕಾತಿ, 7800 ಹೊಸ ಬಸ್‌ಗಳು, ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದು ಪೂರ್ತಿ ಸಂಬಳ ಪಾವತಿ, ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಮ್ಮ ಸರ್ಕಾರ ಮಾಡಿದೆ. ಆದರೆ ನೀವಿದ್ದಾಗ ಸಾರಿಗೆ ನೌಕರರ ಬಗ್ಗೆ ಕಾಳಜಿವಹಿಸದೆ ಈಗ ಟ್ವೀಟ್ ಮೂಲಕ ಕಾಳಜಿ ವಹಿಸುವ ನಾಟಕ ಆಡಲು ತಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಬಿಜೆಪಿ ನಡೆಯನ್ನು ಸಚಿವರು ಟೀಕಿಸಿದರು. ರಾಜ್ಯ ಸರ್ಕಾರ ಸಾರಿಗೆ ಇಲಾಖೆ ನೌಕರರ ಬಗ್ಗೆ ವಹಿಸಿಕೊಂಡಿರುವ ನಿರ್ಧಾರ, ನಡೆಯನ್ನು ಸಮರ್ಥಿಸಿಕೊಂಡರು.












Click it and Unblock the Notifications