Student Scholarship: ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ, ಅರ್ಹತೆ-ವಿವರ
ಬೆಂಗಳೂರು: ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ (ದೀಪಿಕಾ ವಿದ್ಯಾರ್ಥಿವೇತನ)ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ-ವಿವರಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಇದೀಗ ಮೊದಲ ವರ್ಷದ ಸರ್ಕಾರಿ ಅಥವಾ ಖಾಸಗಿ ಖಾಲೇಜುಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅರ್ಹರಿಗೆ ಎಷ್ಟು ಆರ್ಥಿಕ ಸಹಾಯ ಸಿಗಲಿದೆ. ಅರ್ಜಿ ಸಲ್ಲಿಕೆ ಹೇಗೆ, ದಾಖಲೆಗಳೇನೇನು ಬೇಕು?
ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ (ದೀಪಿಕಾ ವಿದ್ಯಾರ್ಥಿವೇತನ) ಎಂದರೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ನೀಡಲಾಗುವ ಆರ್ಥಿಕ ಸಹಾಯ ಯೋಜನೆಯಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿರುವ ಹಿಂದುಳಿದ ವಿದ್ಯಾರ್ಥಿನಿಯರಿಗೆ ಪದವಿ ಕೋರ್ಸ್ ಪೂರ್ಣಗೊಳಿಸಲು ಅನುವು ಮಾಡಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಅರ್ಹರಾದ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 30,000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಅವರ ಪದವಿ ಕೋರ್ಸ್ ಪೂರ್ಣಗೊಳಿಸಲು ಪ್ರೋತ್ಸಾಹ ಮತ್ತು ನೆರವು ನೀಡುವ ಗುರಿ ಫೌಂಡೇಶನ್ ಹೊಂದಿದೆ. ಇದಕ್ಕೆ ಅರ್ಹರು ಸೂಕ್ತ ದಾಖಲೆಗಳ ಸಮೇತ 2026 ಜೂನ್ 31ರ ಒಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಎರಡು ಕಂತುಗಳಲ್ಲಿ ಆರ್ಥಿಕ ನೆರವು
1. ಅರ್ಹ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 30,000 ರೂಗಳನ್ನು ವಿದ್ಯಾರ್ಥಿ ವೇತನ ವಿತರಣೆ
2. ಪದವಿ ಅವಧಿ (3 ವರ್ಷ) ದಲ್ಲಿ ಒಟ್ಟು 90,000 ಹಣ ಸಹಾಯವಾಗಿ ನೀಡಲಾಗುವುದು. ಪ್ರತಿ ವರ್ಷ 2 ಕಂತುಗಳಲ್ಲಿ (₹15,000 + ₹15,000) ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಲು ಅರ್ಹರು
1. 10ನೇ ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆಯಿಂದ ಪೂರ್ಣಗೊಳಿಸಿರಬೇಕು.
2. ಮಾನ್ಯತೆ ಪಡೆದ ಸರ್ಕಾರಿ ಅಥವಾ ಖಾಸಗಿ ಕಾಲೇಜಿನಲ್ಲಿ ಪದವಿ ಕೋರ್ಸ್‌ನ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು.
ಬೇಕಾಗುವ ದಾಖಲಾತಿಗಳೇನು?
1.ಅರ್ಹ ವಿದ್ಯಾರ್ಥಿನಿಯರು ಭಾವಚಿತ್ರ ಮತ್ತು ಸಹಿ
2. ಆಧಾರ್ ಕಾರ್ಡ್
3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4. 10ನೇ ತರಗತಿ ಮಾರ್ಕ್ಸ್ ಕಾರ್ಡ್
5. 12ನೇ ತರಗತಿ ಮಾರ್ಕ್ಸ್ ಕಾರ್ಡ್
6. ಬ್ಯಾಂಕ್ ಪಾಸ್ ಬುಕ್
7. ಕಾಲೇಜು ಶುಲ್ಕ ಪಾವತಿಸಿದ ರಶೀದಿ.
ಅರ್ಜಿ ಸಲ್ಲಿಕೆ ಲಿಂಕ್: ಇಲ್ಲಿ ನೀಡಲಾಗಿರುವ ಅಧಿಕೃತ ಜಾಲತಾಣದ ಮೂಲಕ https://azimpremjifoundation.org/ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ.ಇಲ್ಲವೇ ಹತ್ತಿರದ ಗ್ರಾಮ್ ಒನ್, ಬೆಂಗಳೂರು ಒನ್‌ಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ: ಈ ವಿದ್ಯಾರ್ಥಿ ವೇತನಕ್ಕೆ ಇದೀಗ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಕಡ್ಡಾಯವಾಗಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರಲೇಬೇಕು. ಅಂತವರು ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ.












Click it and Unblock the Notifications