Get Updates
Get notified of breaking news, exclusive insights, and must-see stories!

Gilli: ನಲ್ಲಿ ಮೂಳೆ ತಿಂದು ಚೆನ್ನಾಗಿ ನಿದ್ದೆ ಮಾಡ್ಬೇಕು: ಬಿಗ್‌ಬಾಸ್‌ಗೆ ಮುಂದೆ 3 ಬಯಕೆ ಹೇಳಿಕೊಂಡ ಗಿಲ್ಲಿ

ಕನ್ನಡ ಬಿಗ್‌ಬಾಸ್ ಸೀಸನ್‌ 12 ಫಿನಾಲೆಗೆ ಕೆಲವೇ ದಿನ ಬಾಕಿ ಇದೆ. ಬಿಗ್‌ಬಾಸ್‌ ಮನೆಯೊಳಗೆ ದಿನದಿಂದ ದಿನಕ್ಕೆ ಭಾವನಾತ್ಮಕ ಕ್ಷಣಗಳು ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ಮಾತುಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಸ್ಪರ್ಧಿಗಳು ಬಿಗ್‌ಬಾಸ್‌ ಮುಂದೆ ಬಯಕೆಗಳನ್ನು ಹೇಳಿಕೊಳ್ಳುತ್ತಿದ್ದು, ಕೆಲವು ಈಡೇರುತ್ತಲೂ ಇವೆ. ಅದರಂತೆ ಗಿಲ್ಲಿ ಕೂಡ ತನ್ನ ಕುತೂಹಲಕಾರಿ ಮೂರು ಬಯಕೆಗಳನ್ನು ಬಿಗ್‌ಬಾಸ್ ಮುಂದೆ ಹೇಳಿಕೊಂಡಿದ್ದಾರೆ. ಗಿಲ್ಲಿಯ ಮಾತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಬಿಗ್‌ಬಾಸ್ ನೀಡಿದ ಒಂದು ಟಾಸ್ಕ್‌ ವೇಳೆ ಗಿಲ್ಲಿ ತನ್ನ ಮನದಾಳದ ಮಾತು ಹೇಳಿಕೊಂಡಿದ್ದಾರೆ. ತನ್ನ ಮೂರು ಬಯಕೆಗಳನ್ನು ಪಟ್ಟಿ ಮಾಡಿಕೊಂಡು ಬಿಗ್‌ಬಾಸ್‌ಗೆ ಈಡೇರಿಸುವಂತೆ ಕೋರಿದ್ದಾರೆ. ಮೊದಲನೆಯದಾಗಿ ಬಿಗ್‌ಬಾಸ್‌ ಮನೆಯಲ್ಲಿರುವ ಟಿವಿಯಲ್ಲಿ ಒಂದು ಒಳ್ಳೆಯ ಸಿನಿಮಾ ವೀಕ್ಷಿಸಲು ಅವಕಾಶ ನೀಡುವಂತೆ ಗಿಲ್ಲಿ ಕೋರಿದ್ದಾರೆ.

Bigg Boss Kannada Season 12 Gilli Three Wishes Go Viral Ahead Of Grand Finale

ನಾಯಿಗಳು ಬೊಗಳೋ ಸದ್ದು ಕೇಳಬಾರ್ದು

ಎರಡನೆಯದಾಗಿ ಬಿಗ್‌ಬಾಸ್‌ ಮನೆಯಲ್ಲಿರುವ ಆನೆ ಮೇಲೆ ಒಂದು ಸಲ ಕುಳಿತುಕೊಳ್ಳಬೇಕು ಎಂದಿದ್ದಾರೆ. ಮೂರನೆಯದು, ನನಗೆ ನಲ್ಲಿ ಮೂಳೆ ಅಂದ್ರೆ ತುಂಬಾ ಇಷ್ಟ, ನಾನು ಮಧ್ಯಾಹ್ನದ ಹೊತ್ತು ಬರೀ ನಲ್ಲಿ ಮೂಳೆಯನ್ನೇ ಡೈನಿಂಗ್‌ ಟೇಬಲ್‌ ಮೇಲೆ ಕುಳಿತುಕೊಂಡು ಚೆನ್ನಾಗಿ ತಿನ್ನಬೇಕು. ಬೆಳಿಗ್ಗೆ ಒಂದು ಗಂಟೆ ಹೆಚ್ಚಿಗೆ ನಿದ್ದೆ ಮಾಡಬೇಕು. ಈ ಸಮಯದಲ್ಲಿ ನನಗೆ ನಾಯಿ ಬೊಗಳುವ ಸೌಂಡ್‌ ಬರಬಾರದು, ಇದು ನನ್ನಾಸೆ ಎಂದು ಗಿಲ್ಲಿ ಬಿಗ್‌ಬಾಸ್‌ ಮುಂದೆ ಬೇಡಿಕೆಗಳನ್ನಿಟ್ಟಿದ್ದಾರೆ.

ಬಿಗ್‌ಬಾಸ್ ಮನೆಯೊಳಗಿನ ಕಠಿಣ ನಿಯಮಗಳು, ಆಹಾರ ಮಿತಿಗಳು ಮತ್ತು ನಿರಂತರ ಸ್ಪರ್ಧಾತ್ಮಕ ವಾತಾವರಣದ ಮಧ್ಯೆ, ಸಾಮಾನ್ಯ ಜೀವನದ ಸರಳ ಖುಷಿಗಳೇ ದೊಡ್ಡ ಕನಸಾಗಿ ಕಾಣುತ್ತಿರುವುದನ್ನು ಗಿಲ್ಲಿಯ ಮಾತುಗಳು ತೋರಿಸುತ್ತವೆ. ಮನೆಯಲ್ಲಿ ಇಚ್ಛೆಯಂತೆ ಊಟ ಮಾಡಲಾಗದೆ, ಇಷ್ಟವಾದ ಆಹಾರಕ್ಕಾಗಿ ಕಾತರಿಸುವುದು ಬಹುತೇಕ ಸ್ಪರ್ಧಿಗಳ ಅನುಭವವಾಗಿದ್ದು, ಗಿಲ್ಲಿಯ ಬಯಕೆಗಳನ್ನು ಬಿಗ್‌ಬಾಸ್‌ ಈಡೇರಿಸುತ್ತಾರಾ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ.

ವೀಕ್ಷಕರಲ್ಲಿ ಹಲವರು ಗಿಲ್ಲಿಯ ಮಾತಿಗೆ ಫಿದಾ ಆಗಿದ್ದು, 'ಇದೇ ಬಿಗ್‌ಬಾಸ್ ರಿಯಾಲಿಟಿ', 'ಸರಳ ಆಸೆಯಲ್ಲೇ ದೊಡ್ಡ ಭಾವನೆ ಇದೆ' ಎಂಬ ರೀತಿಯ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಹಾಸ್ಯದ ರೀತಿಯಲ್ಲಿ ತೆಗೆದುಕೊಂಡರೆ, ಕೆಲವರು ಗಿಲ್ಲಿಯ ನಿಜವಾದ ಭಾವನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಬಿಗ್‌ಬಾಸ್ ಮನೆಯೊಳಗಿನ ಒತ್ತಡದ ಬದುಕಿನಲ್ಲಿ, ಒಂದು ನಲ್ಲಿ ಮೂಳೆ ಮತ್ತು ನಿದ್ರೆಯಂತಹ ಸರಳ ಆಸೆಯೂ ಎಷ್ಟು ಅಮೂಲ್ಯವಾಗುತ್ತದೆ ಎಂಬುದನ್ನು ಗಿಲ್ಲಿಯ ಮಾತುಗಳು ವೀಕ್ಷಕರಿಗೆ ನೆನಪಿಸಿವೆ. ಇದು ಬಿಗ್‌ಬಾಸ್ ಶೋನ ಮಾನವೀಯ ಮುಖವನ್ನು ಮತ್ತೊಮ್ಮೆ ಹೊರಹಾಕಿದೆ.

ಇತ್ತೀಚಿನ ಎಪಿಸೋಡ್‌ನಲ್ಲಿ ಗಿಲ್ಲಿ ತಮ್ಮ ಆಸೆಗಳನ್ನು ಬಿಗ್‌ಬಾಸ್ ಮುಂದೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವರ ಮಾತುಗಳು ಸಹಸ್ಪರ್ಧಿಗಳಷ್ಟೇ ಅಲ್ಲ, ವೀಕ್ಷಕರ ಗಮನವನ್ನೂ ಸೆಳೆದಿವೆ. ಗಿಲ್ಲಿಯ ಈ ಮನದಾಳದ ಆಸೆಗಳು ಬಿಗ್‌ಬಾಸ್ ಮನೆಯಲ್ಲಿ ಹಾಸ್ಯದ ವಾತಾವರಣ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಅವರ ಮಾತುಗಳು ಚರ್ಚೆಗೆ ಕಾರಣವಾಗಿವೆ. ಗಿಲ್ಲಿಯ ಸರಳತೆ ಮತ್ತು ನೈಜತೆ ಮತ್ತೊಮ್ಮೆ ವೀಕ್ಷಕರ ಮನ ಗೆಲ್ಲುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+