• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

''ತೆಂಡೂಲ್ಕರ್, ಕೊಹ್ಲಿಗಿಂತ ಧೋನಿ ಜನಪ್ರಿಯ'' ನೀವೇನಂತೀರಾ?

|
Google Oneindia Kannada News

ದುಬೈ, ಸೆ. 20: ಭಾರತದ ಕ್ರಿಕೆಟ್ ಲೋಕದ ಲಿಟ್ಲ್ ಮಾಸ್ಟರ್ ಸುನೀಲ್ ಗಾವಸ್ಕರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 13 ಆರಂಭವಾದ ಖುಷಿಯಲ್ಲೇ ಮಾಜಿ ನಾಯಕ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್ ಎಂಎಸ್ ಧೋನಿಯನ್ನು ಹಾಡಿ ಹೊಗಳಿದ್ದಾರೆ,

ಐಪಿಎಲ್ ವೀಕ್ಷಕವಿವರಣೆಗಾರರಾಗಿರುವ ಗವಾಸ್ಕರ್ ಅವರು ಧೋನಿ ಬಗ್ಗೆ ಮಾತನಾಡುತ್ತಾ, ಸುಮಾರು 400 ಕ್ಕೂ ಅಧಿಕ ದಿನಗಳ ನಂತರ ಮೈದಾನಕ್ಕಿಳಿಯುತ್ತಿದ್ದಾರೆ. ಧೋನಿ ಅವರು ಕ್ರಿಕೆಟ್ ಸಂಸ್ಕೃತಿ ಹಾಗೂ ಹೆಚ್ಚಿನ ಪ್ರೋತ್ಸಾಹ ಇಲ್ಲದ ಊರಿನಿಂದ ಬಂದವರು. ತೆಂಡೂಲ್ಕರ್ ಎಂದರೆ ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಕಾಣಬಹುದು, ವಿರಾಟ್ ಕೊಹ್ಲಿ ಎಂದರೆ ದೆಹಲಿ ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಅಭಿಮಾನ ಗುರುತಿಸಬಹುದು. ಆದರೆ ಧೋನಿ ಎಂದರೆ ಇಡೀ ದೇಶವೇ ಅವರನ್ನು ಪ್ರೀತಿಸುತ್ತದೆ. ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದ ಭಾರತ ಕಂಡ ಶ್ರೇಷ್ಠ ನಾಯಕ ಎಂದರು.

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ಕ್ರಿಕೆಟ್ ಕ್ರೇಜ್ ಹುಟ್ಟು ಹಾಕಿ, ಅಭಿಮಾನಿಗಳ ಪಾಲಿನ ದೇವರು ಎನಿಸಿಕೊಂಡ ಸಚಿನ್ ಗಿಂತಲೂ ಧೋನಿ ಜನಪ್ರಿಯ ಎಂದಿರುವ ಹಲವರಿಗೆ ಮೆಚ್ಚುಗೆಯಾಗಿಲ್ಲ. ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ನಂಬಬಹುದು. ಐಸಿಸಿ ಆಯೋಜನೆಯ ಮೂರು ಕಪ್ ಗೆಲ್ಲಿಸಿಕೊಟ್ಟ ಏಕೈಕ ನಾಯಕ ಧೋನಿ, ಮೂರು ಬಾರಿ ಚೆನ್ನೈಗೆ ಐಪಿಎಲ್ ಕಪ್ ಗೆಲ್ಲಿಸಿಕೊಟ್ಟವರು.

39 ವರ್ಷ ವಯಸ್ಸಿನ ಧೋನಿ ಕ್ರಿಕೆಟರ್ ಆಗಿ, ಮೈದಾನದ ಒಳಗೂ ಹೊರಗೂ ಸೌಮ್ಯ ಸ್ವಭಾವ, ಇತರೆ ಕ್ರೀಡಾಪಟುಗಳಿಗೆ ನೆರವಾಗುವ ಮನೋಭಾವ ಉಳ್ಳವರು, ಚೆನ್ನೈಗೆ ಮನೆ ಮಗನಾಗಿ ತಲಾ ಎಂದು ಕರೆಸಿಕೊಂಡವರು. ಆದರೆ, ಮುಂಬೈ ಮೂಲದ ಗವಾಸ್ಕರ್ ಏಕಾಏಕಿ ಈ ರೀತಿ ಹೋಲಿಕೆ ಮಾಡಿದ್ದು ಏಕೆ ಎಂಬುದು ಸದ್ಯಕ್ಕೆ ಚರ್ಚೆಯ ವಿಷಯ.

ಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡು

ಗವಾಸ್ಕರ್ ಅವರು ಐಪಿಎಲ್ ಇತಿಹಾಸವನ್ನು ಮುಂದಿಟ್ಟುಕೊಂಡು ಈ ಮೂವರ ಬಗ್ಗೆ ಹೇಳಿದ್ದಾರೆ ಖಂಡಿತವಾಗಿ ಎಲ್ಲರೂ ಒಪ್ಪುತ್ತಾರೆ. ಏಕೆಂದರೆ, ಧೋನಿ ಎಲ್ಲಾ ರೀತಿಯಲ್ಲೂ ಇಬ್ಬರಿಗಿಂತ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ, ನೀಡುತ್ತಿದ್ದಾರೆ. ಗವಾಸ್ಕಾರ್ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ...mykhel@one.inಗೆ ಇಮೇಲ್ ಮಾಡಿ, ಅಥವಾ ಕಾಮೆಂಟ್ ಮಾಡಿ..

English summary
The great Sunil Gavaskar on Saturday said Mahendra Singh Dhoni’s popularity in India has exceeded the level of fandom even the great Sachin Tendulkar and Virat Kohli enjoy in the cricket-crazy nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X