IPL 2020: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಯಾವ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳಬೇಕು?

ನವದೆಹಲಿ, ಸೆಪ್ಟೆಂಬರ್ 19: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮನೋರಂಜನ್‌ ಕಾ ಬಾಪ್ ಖ್ಯಾತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಈ ಬಾರಿ ಹಲವು ತಿಂಗಳು ವಿಳಂಬವಾಗಿದೆ. ಐಪಿಎಲ್ 13ನೇ ಆವೃತ್ತಿಯು ಕೋವಿಡ್-19 ಕಾರಣ ಯುಎಇನಲ್ಲಿ ನಡೆಯಲಿದೆ.

ಈ ವರ್ಷ ಅಭಿಮಾನಿಗಳಿಗೆ ಭಾರೀ ನಿರಾಸೆವಾಗಲು ಕಾರಣವಾಗಿರುವುದು ಐಪಿಎಲ್ ಪಂದ್ಯಗಳನ್ನ ನೇರವಾಗಿ ಕ್ರೀಡಾಂಗಣಕ್ಕೆ ಹೋಗಿ ವೀಕ್ಷಿಸಲು ಸಾಧ್ಯವಾಗದಿರುವುದು. ಟಿವಿ ಹೊರತುಪಡಿಸಿ ಆನ್‌ಲೈನ್ ಮೂಲಕವಷ್ಟೇ ಐಪಿಎಲ್‌ ಅನ್ನು ನೋಡಬೇಕಾಗಿದೆ.

ಐಪಿಎಲ್ ಅಂದಾಕ್ಷಣ ಕುಟುಂಬದೊಂದಿಗೆ ಜನರು ಪಂದ್ಯಗಳನ್ನು ವೀಕ್ಷಿಸುತ್ತಾರೆ. ಪ್ರತಿ ವರ್ಷದಂತೆ, ಐಪಿಎಲ್ ನೇರ ಪ್ರಸಾರ ಪಾಲುದಾರಿಕೆಯನ್ನು ಹೊಂದಿದೆ. ದೂರದರ್ಶನ ಪ್ರಸಾರಕ್ಕಾಗಿ, ಐಪಿಎಲ್ ಪ್ರತಿವರ್ಷದಂತೆ ಸ್ಟಾರ್ ಸ್ಪೋರ್ಟ್ಸ್‌ನ ಸಹಯೋಗವನ್ನು ಹೊಂದಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದಂತೆ, ಜನರು ಈ ವರ್ಷ ಎಲ್ಲಾ ಐಪಿಎಲ್ ಪಂದ್ಯಗಳನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಹಾಗೂ ಕೆಲವು ಇತರೇ ಪ್ಲಾಟ್‌ಫಾರ್ಮ್‌ಗಳೊಂದಿಗೆ ವೀಕ್ಷಿಸಲು ಸಾಧ್ಯವಾಗುತ್ತದೆ.

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ವೀಕ್ಷಿಸುವುದು ಹೇಗೆ?

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ವೀಕ್ಷಿಸುವುದು ಹೇಗೆ?

ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ನೀವು ಚಂದಾದಾರಿಕೆ ಯೋಜನೆಯನ್ನು ಆರಿಸಬೇಕಾಗುತ್ತದೆ. ಈ ಬಾರಿ

ಯಾವುದೇ ಉಚಿತ ಸೇವೆ ಇಲ್ಲ. ಡಿಸ್ನಿ + ಹಾಟ್‌ಸ್ಟಾರ್ ಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆ ಯೋಜನೆಗಳನ್ನು ನೀಡುತ್ತದೆ ಮತ್ತು ಬಳಕೆದಾರರು ಅವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಆರಿಸಿಕೊಳ್ಳಬಹುದು. ಇಡೀ ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಯೋಜನೆಯ ಬೆಲೆ 399 ರೂ. ಆಗಿದೆ.

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇದೇ ಯೋಜನೆಯು ಕೇವಲ 365 ರೂಪಾಯಿಗಳಿಗೆ ಸಿಗಲಿದೆ. ಡಿಸ್ನಿ+ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯಲ್ಲಿ 299 ರೂ. ಮಾಸಿಕ ಯೋಜನೆ ಮತ್ತು 1499 ರೂ ಚಂದಾದಾರಿಕೆಗಳಿವೆ.

ಉಚಿತವಾಗಿ ಐಪಿಎಲ್ ನೋಡುವುದು ಹೇಗೆ?

ಉಚಿತವಾಗಿ ಐಪಿಎಲ್ ನೋಡುವುದು ಹೇಗೆ?

ಡಿಸ್ನಿ + ಹಾಟ್‌ಸ್ಟಾರ್‌ನ ಪೂರಕ ಸೇವೆಯನ್ನು ನೀಡುವ ಕೆಲವು ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಗಳಿವೆ. ಇದರರ್ಥ ನೀವು ಆ ಯೋಜನೆಗಳೊಂದಿಗೆ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಬೇಕಾಗುತ್ತದೆ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.

401 ರೂ. ಜಿಯೋ ಯೋಜನೆ, 598 ರೂ. ಜಿಯೋ ಯೋಜನೆ, 448 ರೂ. ಏರ್‌ಟೆಲ್ ಯೋಜನೆ, ಮತ್ತು 599 ರೂ.ಗಳ ಏರ್‌ಟೆಲ್ ಯೋಜನೆಗಳು ಹೆಚ್ಚುವರಿಯಾಗಿ, ಡಿಸ್ನಿ + ಹಾಟ್‌ಸ್ಟಾರ್‌ಗೆ ಪೂರಕ ಚಂದಾದಾರಿಕೆಯನ್ನು ಒದಗಿಸುವ ಯೋಜನೆಗಳಾಗಿವೆ.

ಜಿಯೋಟಿವಿಯಲ್ಲಿ ಐಪಿಎಲ್ 2020 ವೀಕ್ಷಿಸಿ

ಜಿಯೋಟಿವಿಯಲ್ಲಿ ಐಪಿಎಲ್ 2020 ವೀಕ್ಷಿಸಿ

ರಿಲಯನ್ಸ್ ಜಿಯೋ ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಟೆಲಿಕಾಂ ಆಪರೇಟರ್ ಜಿಯೋ 'ಧನ್ ಧನಾ ಧನ್' ಆಫರ್ ಅಡಿಯಲ್ಲಿ ಕ್ರಮವಾಗಿ 499 ಮತ್ತು 777 ರೂ.ಗಳ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಎರಡೂ ಯೋಜನೆಗಳು ಇತರ ಪ್ರಯೋಜನಗಳ ಜೊತೆಗೆ ಒಂದು ವರ್ಷದವರೆಗೆ ಉಚಿತ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯೊಂದಿಗೆ ಬರುತ್ತವೆ.

ಏರ್‌ಟೆಲ್‌ಟಿವಿಯಲ್ಲಿ ಐಪಿಎಲ್ 2020 ವೀಕ್ಷಿಸಿ

ಏರ್‌ಟೆಲ್‌ಟಿವಿಯಲ್ಲಿ ಐಪಿಎಲ್ 2020 ವೀಕ್ಷಿಸಿ

ರಿಲಯನ್ಸ್ ಜಿಯೋಗೆ ಹೋಲುವಂತೆ, ಏರ್‌ಟೆಲ್‌ನ 401 ರೂ. ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ವಾರ್ಷಿಕ ಚಂದಾದಾರಿಕೆಯನ್ನು ನೀಡುತ್ತದೆ ಮತ್ತು 28 ದಿನಗಳ ಅವಧಿಯನ್ನು ಹೊಂದಿದ್ದು 30 ಜಿಬಿ ಡೇಟಾವನ್ನು ನೀಡುತ್ತದೆ. ಕಳೆದ ವರ್ಷಕ್ಕಿಂತ ಭಿನ್ನವಾಗಿ ಏರ್‌ಟೆಲ್ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತಿರುವ ಏಕೈಕ ಯೋಜನೆ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+