CSK ತಂಡದಲ್ಲಿ ಹಿರಿಯ ಆಟಗಾರರದ್ದೇ ಗ್ಯಾಂಗ್
ಐಪಿಎಲ್ 13ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಹಿರಿಯ ಆಟಗಾರರನ್ನು ಹೊಂದಿರುವ ತಂಡ ಅಂದ್ರೆ ಅದು ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಚೆನ್ನೈ ತಂಡದಲ್ಲಿ ಏನೆಲ್ಲಾ ಅಂದ್ರೂ ಏಳು ಆಟಗಾರರಿಗೆ 35ವರ್ಷ ದಾಟಿದೆ. ಅದ್ರಲ್ಲೂ 41ವರ್ಷದ ಇಮ್ರಾನ್ ತಾಹೀರ್, 13ನೇ ಆವೃತ್ತಿಯ ಐಪಿಎಲ್ನಲ್ಲಿ ಅತೀ ಹಿರಿಯ ಆಟಗಾರ ಎನ್ನಿಸಿಕೊಂಡಿದ್ದಾರೆ.
ತಾಹೀರ್ ಮೈದಾನದಲ್ಲಿ ಓಡೋದು ನೋಡಿದ್ರೆ ಅವರಿಗೆ 41ವರ್ಷ ಆಗಿದೆ ಎಂದು ನಂಬೋದು ಸ್ವಲ್ಪ ಕಷ್ಟ. ವಿಕೆಟ್ ಪಡೆದ್ರೆ ಚಿರಯುವಕನಂತೆ ಮೈದಾನದ ತುಂಬೆಲ್ಲಾ ಓಡಾಡೋದು ಆತನ ವಿಶೇಷ ಶೈಲಿ. ಇನ್ನೂ ನಾಯಕ ಎಂ.ಎಸ್.ಧೋನಿ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಶೇನ್ ವ್ಯಾಟ್ಸನ್ಗೆ 39ವರ್ಷವಾದ್ರೂ, ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ.

ಚೆನ್ನೈ ತಂಡದ ಹಿರಿಯ ಆಟಗಾರರು
ಸದ್ಯ ಚೆನ್ನೈ ತಂಡದಲ್ಲಿರೋ ಹಿರಿಯ ಆಟಗಾರರು ಯಾರು ಅನ್ನೋದನ್ನ ನೋಡೋದಾದ್ರೆ, ಇಮ್ರಾನ್ ತಾಹೀರ್ಗೆ 41ವರ್ಷವಾಗಿದ್ರೆ, ಎಂ.ಎಸ್.ಧೋನಿ ಮತ್ತು ಶೇನ್ ವ್ಯಾಟ್ಸನ್ಗೆ 39ವರ್ಷ ವಯಸ್ಸಾಗಿದೆ. ಡ್ವೇನ್ ಬ್ರಾವೋ, ಮುರಳಿ ವಿಜಯ್, ಫಾಫ್ ಡುಪ್ಲೆಸಿಗೆ 36ವರ್ಷವಾಗಿದ್ರೆ, ಆಲ್ರೌಂಡರ್ ಕೇದಾರ್ ಜಾಧವ್ಗೆ 35 ವರ್ಷವಾಗಿದೆ.ಆಟಗಾರ - ವರ್ಷ
ಇಮ್ರಾನ್ ತಾಹೀರ್ 41
ಎಂ.ಎಸ್.ಧೋನಿ 39
ಶೇನ್ ವ್ಯಾಟ್ಸನ್ 39
ಡ್ವೇನ್ ಬ್ರಾವೋ 36
ಮುರಳಿ ವಿಜಯ್ 36
ಫಾಫ್ ಡುಪ್ಲೆಸಿ 36
ಕೇದಾರ್ ಜಾಧವ್ 35

ಹೈದ್ರಾಬಾದ್ ತಂಡದಲ್ಲಿ ಹಿರಿಯ ಆಟಗಾರರು
ಹೈದ್ರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹಾಗೂ ಮೊಹಮ್ಮದ್ ನಬಿ 35ವರ್ಷ ವಯಸ್ಸಾಗಿದೆ.
ಆಟಗಾರ - ವರ್ಷ
ವೃದ್ಧಿಮಾನ್ ಸಹಾ 35
ಮೊಹಮ್ಮದ್ ನಬಿ 35

ರಾಜಸ್ಥಾನ ತಂಡದಲ್ಲಿ ಸೀನಿಯರ್ ಪ್ಲೇಯರ್
ರಾಜಸ್ಥಾನ ರಾಯಲ್ಸ್ನ ಅಭಿಷೇಕ್ ನಾಯರ್ಗೆ 36 ವರ್ಷವಾಗಿದೆ.
ಆಟಗಾರ - ವರ್ಷ
ಅಭಿಷೇಕ್ ನಾಯರ್ 36

ಡೆಲ್ಲಿ ತಂಡದಲ್ಲಿ ಹಿರಿಯ ಆಟಗಾರ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಮಿತ್ ಮಿಶ್ರಾಗೆ 37ವರ್ಷದ ವಯಸ್ಸಾಗಿದೆ.
ಆಟಗಾರ- ವರ್ಷ
ಅಮಿತ್ ಮಿಶ್ರಾ 37

ಕೊಲ್ಕತ್ತಾ, ಪಂಜಾಬ್ ತಂಡದಲ್ಲಿ ಹಿರಿಯ ಆಟಗಾರರು
ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ಗೆ 35 ವರ್ಷ ವಯಸ್ಸಾಗಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾನ್ನ ಕ್ರಿಸ್ ಗೇಲ್ಗೆ 40ವರ್ಷ ವಯಸ್ಸಾಗಿದೆ. ಹೀಗೆ 35ವರ್ಷ ಮೇಲ್ಪಟ್ಟ ಹಿರಿಯ ಆಟಗಾರರು ಎಲ್ಲ ತಂಡಗಳಲ್ಲೂ ಇದ್ದಾರೆ. ಇವರಿಗೆಲ್ಲಾ ವಯಸ್ಸಾದ್ರೂ ನೀಡುವ ಪ್ರದರ್ಶನದಲ್ಲಿ ವಯಸ್ಸಾದವರಂತೆ ಕಾಣ್ತಿಲ್ಲ.












Click it and Unblock the Notifications