IPLನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ (20ನೇ ಓವರ್) ಬೌಲರ್ಸ್
ದುಬೈ, ಸೆಪ್ಟೆಂಬರ್ 21: ಚುಟುಕು ಕ್ರಿಕೆಟ್‌ನಲ್ಲಿ ಯಾವುದೇ ಒಂದು ಓವರ್ ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಅದರಲ್ಲೂ ಕೊನೆಯ ಓವರ್‌ಗಳಂತೂ ಬ್ಯಾಟಿಂಗ್/ಬೌಲಿಂಗ್ ಮಾಡುತ್ತಿರುವ ಉಭಯ ತಂಡಗಳಿಗೆ ತುಂಬಾನೆ ಮಹತ್ವ. ಬ್ಯಾಟಿಂಗ್ ತಂಡಕ್ಕೆ ಹೆಚ್ಚು ರನ್ ಗಳಿಸುವ ತವಕವಾದ್ರೆ, ಬೌಲಿಂಗ್ ಮಾಡುತ್ತಿರುವ ತಂಡಕ್ಕೆ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಕಬಳಿಸುವ ಹಂಬಲ.
ಐಪಿಎಲ್ 13ನೇ ಆವೃತ್ತಿಯ ಎರಡನೇ ಪಂದ್ಯ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ, ಪ್ರೀತಿ ಜಿಂಟಾ ತಂಡದ ಬೌಲರ್ ಕ್ರಿಸ್ ಜೋರ್ಡಾನ್ 20ನೇ ಓವರ್‌ನಲ್ಲಿ ಬರೋಬ್ಬರಿ 30ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್‌ಗಳಲ್ಲಿ ಒಂದಾಗಿದ್ದು,ಐಪಿಎಲ್ ರೆಕಾರ್ಡ್ ಬುಕ್ ಸೇರಿದೆ.
ಹೀಗೆ ಐಪಿಎಲ್ ಇತಿಹಾಸದಲ್ಲಿ ಪಂದ್ಯದ 20ನೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಟಾಪ್ 5 ಬೌಲರ್‌ಗಳ ಮಾಹಿತಿ ಈ ಕೆಳಗಿದೆ.

ಬೌಲರ್: ಅಶೋಕ್ ದಿಂಡಾ (RPS)
ಐಪಿಎಲ್ ಸೀಸನ್: 2017
ಎದುರಾಳಿ: ಮುಂಬೈ ಇಂಡಿಯನ್ಸ್
ಬ್ಯಾಟ್ಸ್‌ಮನ್: ಹಾರ್ದಿಕ್ ಪಾಂಡ್ಯ
ರನ್: 30 (6,6,6,4,6,WD+W, 1B)

ಬೌಲರ್ : ಕ್ರಿಸ್ ಜೋರ್ಡಾನ್ (KXIP)
ಐಪಿಎಲ್ ಸೀಸನ್: 2020
ಎದುರಾಳಿ: ಡೆಲ್ಲಿ ಕ್ಯಾಪಿಟಲ್ಸ್
ಬ್ಯಾಟ್ಸ್‌ಮನ್: ಮಾರ್ಕಸ್ ಸ್ಟೋಯ್ನಿಸ್/ಎ. ನೋರ್ಟ್ಜ್
ರನ್: 30 (6, 0+WD, 4,4,4,6,1+NB+W, 3)

ಶಿವಂ ಮಾವಿ (KKR)
ಐಪಿಎಲ್ ಸೀಸನ್: 2018
ಎದುರಾಳಿ: ಡೆಲ್ಲಿ ಡೇರ್‌ಡೆವಿಲ್ಸ್
ಬ್ಯಾಟ್ಸ್‌ಮನ್: ಶ್ರೇಯಸ್ ಅಯ್ಯರ್
ರನ್: 29 (6, 6, 0+W, 6, 0+WD, 4, 6)

ಡ್ವೇನ್ ಬ್ರಾವೋ (CSK)
ಐಪಿಎಲ್ ಸೀಸನ್: 2019
ಎದುರಾಳಿ: ಮುಂಬೈ ಇಂಡಿಯನ್ಸ್
ಬ್ಯಾಟ್ಸ್‌ಮನ್: ಕಿರಾನ್ ಪೊಲಾರ್ಡ್/ಹಾರ್ದಿಕ್ ಪಾಂಡ್ಯ
ರನ್: 29 (1, 0+WD, 1, NB+6, 3,6,4,6)

ಜಯದೇವ್ ಉನಾದ್ಕಟ್ (RR)
ಐಪಿಎಲ್ ಸೀಸನ್: 2019
ಎದುರಾಳಿ: ಚೆನ್ನೈ ಸೂಪರ್ ಕಿಂಗ್ಸ್
ಬ್ಯಾಟ್ಸ್‌ಮನ್: ಎಂ.ಎಸ್. ಧೋನಿ, ಆರ್.ಜಡೇಜಾ
ರನ್: 28 (1,6,1,0+WD,6,6,0+WD,6)












Click it and Unblock the Notifications