IPL ಜೊತೆಗೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಡಿ ಬಹುಮಾನ ಗೆಲ್ಲಿ
ಬೆಂಗಳೂರು, ಸೆ. 21: ಐಪಿಎಲ್ 2020 ಅಭಿಮಾನಿಗಳಿಗೆ ರಿಲಯನ್ಸ್ ಜಿಯೋ ಹೊಸ ಕೊಡುಗೆಗಳನ್ನು ಘೋಷಿಸಿದೆ. ಜನಪ್ರಿಯ ಆಪ್ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಹೊಸ ರೀತಿಯಲ್ಲಿ ಪರಿಚಯಿಸಿದೆ. ಇದರಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಕ್ರಿಕೆಟ್ ಕೌಶಲ್ಯವನ್ನು 'ಪ್ರತಿ ಬಾಲ್ ನೊಂದಿಗೆ ಆಡುವ ಮೂಲಕ' ಬಳಸಿಕೊಳ್ಳಬಹುದು. ಸರಿಯಾದ ಉತ್ತರವನ್ನು ಊಹಿಸುವ ಬಳಕೆದಾರರು ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದು.
ಜಿಯೋ ತನ್ನ ಬಳಕೆದಾರರಿಗೆ ಈ ಬಾರಿ ಐಪಿಎಲ್ ಕ್ರಿಕೆಟ್ ಟೂರ್ನಿಯ ಸಂಭ್ರಮವನ್ನು ಹೆಚ್ಚು ಮಾಡುವ ಸಲುವಾಗಿ ಹೊಸ ಮತ್ತು ಆಕರ್ಷಕವಾಗಿ ಅನುಭವವನ್ನು ನೀಡಲು ಪ್ರಶಸ್ತಿ ವಿಜೇತ 'ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್' ಅನ್ನು ಆರಂಭಿಸಿದೆ.
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ನಲ್ಲಿ ಆಡುವ ಮೂಲಕ ಜಿಯೋ ಬಳಕೆದಾರರು ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಪಂದ್ಯದ ಆರಂಭಕ್ಕೂ ಮುನ್ನವೇ ನಡೆಯುವ ಪ್ರಶ್ನೆಗಳಿಗೆ ಉತ್ತರಿಸಬಹುದು, ಪೋಲ್ಸ್, ರಸಪ್ರಶ್ನೆಗಳು ಮತ್ತು ನಿಮ್ಮ ಮೆಚ್ಚಿನ ತಂಡಕ್ಕೆ 'ಸ್ಟಿಕ್ಕರ್ ಚಾಟ್' ಮೂಲಕ ಮೆರಗು ನೀಡಿ ಮತ್ತು ಸ್ಕೋರ್‌ಗಳು, ಪಂದ್ಯದ ವೇಳಾಪಟ್ಟಿಗಳು, ಫಲಿತಾಂಶಗಳು ಮತ್ತು ಹೆಚ್ಚಿನವುಗಳನ್ನು ಬಳಕೆ ಮಾಡಬಹುದಾಗಿದೆ.

'ಡೈಲಿ ರಿವಾರ್ಡ್ಸ್' ಮೂಲಕ ಭಾಗವಹಿಸುವವರು ಪ್ರತಿದಿನ ಬಹುಮಾನಗಳನ್ನು ಗೆಲ್ಲಬಹುದು ಮತ್ತು 'ದೈನಂದಿನ ಸವಾಲುಗಳನ್ನು' ಪೂರ್ಣಗೊಳಿಸಿದ ನಂತರ ಬಂಪರ್ ಬಹುಮಾನವನ್ನು ತಮ್ಮದಾಗಿಸಿಕೊಳ್ಳಬಹುದು. ಪಂದ್ಯ ಪ್ರಾರಂಭವಾಗುವ ಮೊದಲು, ದೈನಂದಿನ ಸವಾಲುಗಳ ವಿಭಾಗದ ಅಡಿಯಲ್ಲಿ ಬಳಕೆದಾರರಿಗೆ ಬಂಪರ್ ಪ್ರಶಸ್ತಿ ಟೈಲ್ ಅನ್ನು ಪ್ರದರ್ಶಿಸಲಾಗುತ್ತದೆ. ಆದ್ದರಿಂದ, ಈ ಕ್ರಿಕೆಟ್ ಋತುವಿನಲ್ಲಿ ನಾವು ಮನೆಯಲ್ಲಿಯೇ ಇರುತ್ತೇವೆ ಮತ್ತು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನೊಂದಿಗೆ ದೊಡ್ಡದನ್ನು ಗೆಲ್ಲೋಣ!
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟವನ್ನು ಮೈಜಿಯೊ ಅಪ್ಲಿಕೇಶನ್‌ನಲ್ಲಿರುವ ಜಿಯೋ ಎನ್ಗೇಜ್ ವಿಭಾಗದಲ್ಲಿ ಪ್ರವೇಶಿಸಬಹುದು, ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಜಿಯೋ ಬಳಕೆದಾರರು ಮತ್ತು ಜಿಯೋ ಅಲ್ಲದ ಬಳಕೆದಾರರು ಈ ಕ್ರಿಕೆಟ್ ಋತುವಿನಲ್ಲಿ ಆಟವನ್ನು ಆಡಬಹುದು ಮತ್ತು ದೊಡ್ಡದನ್ನು ಗೆಲ್ಲಬಹುದು.












Click it and Unblock the Notifications