Get Updates
Get notified of breaking news, exclusive insights, and must-see stories!

ಕರ್ನಾಟಕದ ಮಯಾಂಕ್ ಆಟವನ್ನು ಹೊಗಳಿದ ಕಿಚ್ಚ ಸುದೀಪ

ಬೆಂಗಳೂರು, ಸೆ. 21: ಒಂದೆಡೆ ಸತತವಾಗಿ ವಿಕೆಟ್ ಉದುರುತ್ತಿದ್ದರೂ ನೆಲಕಚ್ಚಿ ನಿಂತು, ಕಿಚ್ಚಿನ ಹೋರಾಟ ನಡೆಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂಡ ಕರ್ನಾಟಕದ ಆಟಗಾರ ಮಯಾಂಕ್ ಅಗರವಾಲ್ ಆಟಕ್ಕೆ ನಟ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುಎಇಯಲ್ಲಿ ನಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಎರಡನೇ ಪಂದ್ಯ ರೋಚಕ ಅಂತ್ಯ ಕಂಡಿದೆ. ಸೋಲಿನ ದವಡೆಯಲ್ಲಿದ್ದ ಪಂಜಾಬ್ ತಂಡಕ್ಕೆ ಆಸರೆಯಾಗಿ ಅರ್ಧಶತಕ ಸಿಡಿಸಿದ ಮಯಾಂಕ್ ಅಗರವಾಲ್ ಅವರು 60 ಎಸೆತಗಳಲ್ಲಿ 89 ರನ್ ಗಳಿಸಿ ಔಟಾದರು ಇನ್ನೊಂದು ರನ್ ಗಳಿಸಿದ್ದರೆ ಡೆಲ್ಲಿ ವಿರುದ್ಧ ಪಂಜಾಬ್ ವಿಜಯೋತ್ಸವ ಆಚರಿಸಬಹುದಾಗಿತ್ತು. ಆದರೆ, ಒಂದು ಕೆಟ್ಟ ಹೊಡೆತ ಮಯಾಂಕ್ ವಿಕೆಟ್ ಪತನಕ್ಕೆ ಕಾರಣವಾಯಿತು. ನಂತರ ಪಂದ್ಯ ಟೈ ಆಗಿ ಸೂಪರ್ ಓವರ್ ನಡೆದು ಡೆಲ್ಲಿ ಸುಲಭ ಜಯ ದಾಖಲಿಸಿತು.

Kichcha Sudeepa praises Mayank Agarwals effort against DC- IPL 2020

ಮಯಾಂಕ್ ಸಾಹಸಕ್ಕೆ ದಕ್ಕದ ಗೆಲುವು: ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ಆದರೆ, ಉತ್ತಮವಾಗಿ ಆಡಿದೆ ಗೆಳೆಯ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ. ನಿಮ್ಮ ಪ್ರಯತ್ನ ಅದ್ಭುತವಾಗಿತ್ತು, ಸೂಪರ್ ಓವರ್ ನಲ್ಲಿ ನೀನಿರಲಿಲ್ಲ, ಆದರೂ ಕೊವಿಡ್ 19 ಸಂದರ್ಭದಲ್ಲಿ ಅತ್ಯಂತ ಮನರಂಜನೆ ನೀಡಿತು. ಮತ್ತೊಮ್ಮೆ ಸಂತಸವಾಗುತ್ತಿದೆ ಎಂಬರ್ಥದಲ್ಲಿ ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ನಾಯಕ, ನಟ, ಮಯಾಂಕ್ ಅವರ ಗೆಳೆಯ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಟ್ವೀಟ್ ಬೆಂಬಲಿಸಿ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ನಿಗದಿತ 20 ಓವರ್ ಗಳಲ್ಲಿ ಎರಡು ತಂಡಗಳು 157/8 ಸ್ಕೋರ್ ಮಾಡಿ ತಂಡ ಟೈ ಆಗಿ, ಸೂಪರ್ ಓವರ್ ನಲ್ಲಿ ಪಂಜಾಬ್ 2/2 ಸ್ಕೋರ್ ಮಾಡಿತ್ತು. ಡೆಲ್ಲಿ 3 ರನ್ ಗಳಿಸಿ ಜಯ ಗಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+