India
  • search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಮ್ಮೆಯ ಸಂಕೇತ: ಚೆನ್ನೈನ ಅಮೆರಿಕ ದೂತಾವಾಸ ಕಚೇರಿ ಮೇಲೆ ಕಾಮನಬಿಲ್ಲು ಧ್ವಜ

|
Google Oneindia Kannada News

ಚೆನ್ನೈ, ಜೂನ್ 04: ಸಲಿಂಗಿ, ಗೇ, ದ್ವಿಲಿಂಗಿ, ಮಂಗಳಮುಖಿ, ಲಿಂಗಾಂತರಿ, ಕ್ವೀರ್ ಮತ್ತು ಇಂಟರ್ಸೆಕ್ಸ್ ಪ್ರೈಡ್ ತಿಂಗಳ ಸ್ಮರಣಾರ್ಥ ಜೂನ್ 2ರಂದು ಚೆನ್ನೈನಲ್ಲಿ ಇರುವ ಅಮೆರಿಕ ರಾಯಭಾರಿ ಕಚೇರಿ ಕಟ್ಟಡದ ಮೇಲೆ ರೇನ್ ಬೋ ಪ್ರೈಡ್ ಧ್ವಜವನ್ನು ಹಾರಿಸಲಾಯಿತು. ಜೂನ್ 30 ರವರೆಗೆ ಕಟ್ಟಡದ ಮೇಲೆ ಹಾರಾಡಲಿದೆ.

LGBTQI + ವ್ಯಕ್ತಿಗಳು ಮತ್ತು ಸಮುದಾಯಗಳ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಬದ್ಧತೆ ತೋರಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಚೆನ್ನೈನ ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್, "ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್, ಯು.ಎಸ್. ಮಿಷನ್ ಟು ಇಂಡಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಾಗರಿಕರು ಸಮಗ್ರ ಕಾನೂನಿನಡಿಯಲ್ಲಿ ಸಮಾನ ರಕ್ಷಣೆ, ಹಿಂಸಾಚಾರದಿಂದ ಮುಕ್ತ ವಾತಾವರಣ ಮತ್ತು ಮೂಲಭೂತ ಮಾನವ ಹಕ್ಕುಗಳ ಮಾನ್ಯತೆಗಾಗಿ ಕೆಲಸ ಮಾಡುತ್ತಿರುವಾಗ ಜಗತ್ತಿನಾದ್ಯಂತದ ಎಲ್ಜಿಬಿಟಿಕ್ಯುಐ + ಸಮುದಾಯದೊಂದಿಗೆ ನಿಲ್ಲುತ್ತಾರೆ.

ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ಆರಂಭ: ಕೋವಿಡ್ ಲಸಿಕೆ ಬಗ್ಗೆ ಮಹತ್ವದ ಚರ್ಚೆವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ಆರಂಭ: ಕೋವಿಡ್ ಲಸಿಕೆ ಬಗ್ಗೆ ಮಹತ್ವದ ಚರ್ಚೆ

ಪ್ರಪಂಚದಾದ್ಯಂತ LGBTQI + ವ್ಯಕ್ತಿಗಳ ಹಕ್ಕುಗಳನ್ನು ಬೆಂಬಲಿಸಲು ಮತ್ತು ಮುನ್ನಡೆಸಲು ಅಮೆರಿಕಾ ಹೆಮ್ಮೆಪಡುತ್ತದೆ. ನಾವು ಹೆಮ್ಮೆಯಲ್ಲಿ ಒಟ್ಟಿಗೆ ನಿಲ್ಲುವಾಗ ನೀವೂ ನಮ್ಮೊಂದಿಗೆ ಈ ಪ್ರೈಡ್ ಆಚರಣೆಯಲ್ಲಿ ಒಗ್ಗೂಡಿ.," ಎಂದು ಮನವಿ ಮಾಡಿದರು.

ಪ್ರೈಡ್ ತಿಂಗಳ ನೆನಪಿಗೆ ಕಿರುಚಿತ್ರ ಪ್ರದರ್ಶನ:

ಪ್ರೈಡ್ ತಿಂಗಳ ನೆನಪಿಗಾಗಿ, ಚೆನ್ನೈನ ಅಮೆರಿಕ ರಾಯಭಾರಿಯು ಅಮೆರಿಕನ್ ಫಿಲ್ಮ್ ಶೋಕೇಸ್‌ನ ಬೆಂಬಲದೊಂದಿಗೆ, ವಿದ್ಯಾರ್ಥಿಗಳು, ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು, ಕಾರ್ಯಕರ್ತರು ಮತ್ತು ಎಲ್ ಜಿ ಬಿಟಿಕ್ಯೂಐ + ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಇತರರಿಗಾಗಿ "ಶೇರ್" ಎಂಬ ಸಾಕ್ಷ್ಯಚಿತ್ರವನ್ನು ವರ್ಚುವಲ್ ಆಗಿ ಪ್ರದರ್ಶಿಸಿದರು.

ಈ ಕಿರುಚಿತ್ರವು ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ತನ್ನ ಸಲಿಂಗಕಾಮಿ ಗುರುತನ್ನು ಬಹಿರಂಗಪಡಿಸಲು ಹೆಣಗಾಡುತ್ತಿರುವ ಯುವ ಏಷ್ಯನ್- ಅಮೆರಿಕನ್ ಇನ್‌ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್ ಕಥಾನಕವಾಗಿದೆ. ಜೂನ್ 30ರ ವರ್ಚುವಲ್ ಸ್ಕ್ರೀನಿಂಗ್ ನಂತರ "ಶೇರ್" ಚಲನಚಿತ್ರ ನಿರ್ಮಾಪಕರಾದ ಬಾರ್ನಾ ಸ್ಜಾಸ್ ಮತ್ತು ಎಲ್ಲೀ ವೆನ್ ಮತ್ತು ನಟ ಟಿಮ್ ಚೌ ಜೊತೆ ಸಂವಾದ ನಡೆಯಲಿದೆ.

ವರ್ಚುವಲ್ ಪ್ಯಾನಲ್ ಆಯೋಜನೆ:

ಜೂನ್‌ನಲ್ಲಿ, ಅಮೆರಿಕನ್ ಸೆಂಟರ್ ಪ್ರೈಡ್-ಸಂಬಂಧಿತ ವಿಷಯಗಳ ಕುರಿತು ಸಂಗ್ರಹಿಸಿ ಸೂಚಿಸಲಾದ ಮಾಹಿತಿ/ಓದಿನ ಪಟ್ಟಿಯನ್ನು ಮತ್ತು "ಅಮೇರಿಕನ್ ಸಾಹಿತ್ಯದಲ್ಲಿ ಪ್ರೈಡ್ ಅನ್ನು ಗುರುತಿಸುವ" ಕುರಿತು ವರ್ಚುವಲ್ ಪ್ಯಾನಲ್ ಅನ್ನು ಆಯೋಜಿಸುತ್ತದೆ. ಎರಡೂ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವವರು ChennaiAmCenter@state.gov.ಗೆ ಈ-ಮೇಲ್ ಕಳುಹಿಸಬಹುದು.

ಬಿಸಿನೆಸ್ ಕೋರ್ಸ್ ಆರಂಭ:

ಕಳೆದ ಮೇ 25ರಂದು, ಯು.ಎಸ್.ಎ ದೂತಾವಾಸ ಚೆನ್ನೈ, ಕೇರಳದ ಕೋಳಿಕ್ಕೋಡ್ ನಲ್ಲಿರುವ ದಿ ಜೆಂಡರ್ ಪಾರ್ಕ್ ಸಹಯೋಗದೊಂದಿಗೆ 70ಕ್ಕೂ ಹೆಚ್ಚು ಮಹಿಳೆಯರು ಮತ್ತು ಲಿಂಗಾಂತರಿ ಉದ್ಯಮಿಗಳಿಗಾಗಿ 10 ವಾರಗಳ ವರ್ಚುವಲ್ ಬ್ಯುಸಿನೆಸ್ ಇಂಗ್ಲಿಷ್ ಕೋರ್ಸ್ ಅನ್ನು ಪ್ರಾರಂಭಿಸಿತು. ಲಿಂಗ ಸಮಾನತೆಯ ದಕ್ಷಿಣ ಏಷ್ಯಾದ ಕೇಂದ್ರವಾದ ಜೆಂಡರ್ ಪಾರ್ಕ್ ಯುಎನ್ ಮಹಿಳೆಯರ ಸಹಭಾಗಿತ್ವದಲ್ಲಿ ಪಾರಂಭವಾದ ಕೇರಳ ಸರ್ಕಾರದ ಒಂದು ಯೋಜನೆಯಾಗಿದೆ.

ಪ್ರೈಡ್ ತಿಂಗಳ ಆಚರಣೆಯ ಹಿಂದಿನ ಕಾರಣ:

ನ್ಯೂಯಾರ್ಕ್ ನಗರದಲ್ಲಿ ಜೂನ್ 1969ರಲ್ಲಿ ಸಂಭವಿಸಿದ ಸ್ಟೋನ್ವಾಲ್ ದಂಗೆಯ ಸ್ಮರಣಾರ್ಥ ಅಮೆರಿಕದಲ್ಲಿ ಜೂನ್‌ ತಿಂಗಳನ್ನು ಪ್ರೈಡ್ ತಿಂಗಳಾಗಿ ಆಚರಿಸಲಾಗುತ್ತದೆ. ಈ ಘಟನೆ ಅಮೆರಿಕದಲ್ಲಿ ಆಧುನಿಕ ಗೇ ಲಿಬರೇಶನ್ ಆಂದೋಲನದ ಭವಿಷ್ಯದ ಕ್ರಿಯಾಶೀಲತೆಗೆ ಮತ್ತು ಶಾಸನ ಬದಲಾವಣೆಗೆ ದಾರಿ ಮಾಡಿಕೊಟ್ಟಿತು. ಪ್ರಪಂಚದಾದ್ಯಂತ ಪ್ರೈಡ್ ತಿಂಗಳು ನಾಗರಿಕ ಹಕ್ಕುಗಳ ಹೋರಾಟ ಮತ್ತು ಎಲ್ಜಿಬಿಟಿಕ್ಯುಐ + ಸಮುದಾಯಕ್ಕೆ ಕಾನೂನಿನಡಿಯಲ್ಲಿ ಸಮಾನ ನ್ಯಾಯದ ಸಾಧ್ಯತೆಯ ಮುಂದುವರಿದ ಅನ್ವೇಷಣೆಯನ್ನು ನೆನಪಿಸುತ್ತದೆ. ಇದರ ಜೊತೆಗೆ ಎಲ್ ಜಿಬಿಟಿಕ್ಯುಐ + ವ್ಯಕ್ತಿಗಳ ಸಾಧನೆಗಳನ್ನೂ ಸ್ಮರಿಸುತ್ತದೆ.

English summary
The US Consulate General in Chennai hoisted the rainbow flag over the consulate building to commemorate Lesbian, Gay, Bisexual, Transgender and Queer (LGBTQ) Pride Month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X