Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್‌ನ್ಯೂಸ್ ನಿರೀಕ್ಷೆ
Tamarind Cultivation: ಹುಣಸೆ ಹಾಗೂ ಕಡಲೆ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಈಚೆಗೆ ವಿಜಯನಗರದ ಕಸಾಪುರದಲ್ಲಿ ನಬಾರ್ಡ್‌ನ ರೈತ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸಿದ್ದರು. ಈ ಯೋಜನೆಗೆ 4.3 ಕೋಟಿ ರೂ. ವೆಚ್ಚವಾಗಿದ್ದು, ಕಡಲೆಕಾಯಿ ಮತ್ತು ಹುಣಸೆ ಉತ್ಪನ್ನಗಳಿಂದ 7.4 ಕೋಟಿ ರೂ. ಭರ್ಜರಿ ಆದಾಯ ಗಳಿಸುವ ನಿರೀಕ್ಷೆ ಇದೆ. ಇದೀಗ ವಿಶ್ವಬ್ಯಾಂಕ್ ಸದಸ್ಯರ ತಂಡವು ಹೊಸಪೇಟೆಗೆ ಭೇಟಿ ನೀಡಲಿದೆ.
ಇಲ್ಲಿನ ಹುಣಸೆ ಸಂಸ್ಕರಣಾ ಘಟಕಕ್ಕೆ ಮಾರ್ಚ್ 9ರಂದು ವಿಶ್ವಬ್ಯಾಂಕ್ ಸದಸ್ಯರ ತಂಡವು ಭೇಟಿ ನೀಡಲಿದೆ. ವಿಶ್ವಬ್ಯಾಂಕ್ ತಂಡವು ಈ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದರಿಂದಾಗಿ ಕಾಸಾಪುರ ಭಾಗದಲ್ಲಿ ಘಟಕ ವಿಸ್ತರಣೆಯಾಗುವ ನಿರೀಕ್ಷೆ ಮೂಡಿದೆ. ಇಲ್ಲಿನ ಕೂಡ್ಲಿಗಿ ತಾಲ್ಲೂಕು ಸಂಪೂರ್ಣ ಮಳೆಯಾಶ್ರಿತ ಮತ್ತು ನೀರಾವರಿ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿದೆ. ಈ ಭಾಗದ ಜನರ ಆರ್ಥಿಕ ಹಾಗೂ ಸಾಮಾಜಿಕ ಜೀವನವನ್ನು ಸುಧಾರಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ.

ಇನ್ನು ಈ ಘಟಕವು 400 ಶೇಂಗಾ ಮತ್ತು 200 ಮೆಟ್ರಿಕ್ ಟನ್ ಹುಣಸೆ ಹಣ್ಣನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಂಸ್ಕರಿಸುವ ಸೀತಾರಾಮನ್ ಅವರ ಕನಸಿನ ಯೋಜನೆ ಇದಾಗಿದ್ದು. ಈ ಯೋಜನೆಯನ್ನು ವಿಸ್ತರಿಸುವುದಕ್ಕೆ ಮುಂದಾಗಿದ್ದಾರೆ. ಗುಡೇಕೋಟೆ ಈ ಘಟಕವನ್ನು ಇನ್ನೂ ಹಲವು ಪಟ್ಟು ವಿಸ್ತರಿಸುವ ಉದ್ದೇಶವಿದೆ. ಇದೀಗ ವಿಶ್ವಬ್ಯಾಂಕ್‌ನ 'ರಿವಾರ್ಡ್' ಯೋಜನೆಯ ಉನ್ನತ ಮಟ್ಟದ ತಂಡ, ಮಾರ್ಚ್ 9ರಂದು ಭೇಟಿ ನೀಡಲಿದೆ. ವಿಶ್ವಬ್ಯಾಂಕ್ ತಂಡದ ನಾಯಕಿ ನೋರಾ ಕೌಸ್ ನೇತೃತ್ವದಲ್ಲಿ ಕುಲರಂಜನ್ ಕುಜು ಮತ್ತು ಅಮಿತ್ ಅರೋರಾ ಅವರನ್ನು ಒಳಗೊಂಡ ತಂಡದ ಸದಸ್ಯರು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸಿಎಸ್‌ಆರ್ ನಿಧಿಯಡಿ ಒಂದು ಲಕ್ಷ ಹುಣಸೆ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುವ ನರ್ಸರಿ ಸ್ಥಾಪನೆಯಂತಹ ಪ್ರಮುಖ ಯೋಜನೆಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಹೀಗಾಗಿ ವಿಶ್ವಸಂಸ್ಥೆಯ ತಂಡದ ಸದಸ್ಯರ ಭೇಟಿಯು ಮಹತ್ವ ಪಡೆದುಕೊಂಡಿದೆ.
ಯೋಜನೆಯ ಹಿನ್ನೆಲೆ ಏನು
ಇನ್ನು ಈಚೆಗೆ ವಿಜಯ ನಗರ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಲ್ಯಾಣ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದರು. ಕರ್ನಾಟಕದ ವಿಜಯನಗರದ ಕಸಾಪುರ ಗ್ರಾಮದಲ್ಲಿ ಕಡಲೆಕಾಯಿ ಮತ್ತು ಹುಣಸೆಗೆ ಸಂಬಂಧಿಸಿದ ನಾಲ್ಕನೇ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ (FT-CFC)ವನ್ನು ಉದ್ಘಾಟಿಸಿದ್ದರು.
ಕೇಂದ್ರ ಮತ್ತು ನಬಾರ್ಡ್ ಜೊತೆಗೂಡಿ ಸಚಿವರ MPLAD ಯೋಜನೆಯಡಿಯಲ್ಲಿ ಹಣಕಾಸು ಸಹಕಾರ ನೀಡಲಾಗಿದ್ದ ಈ ಉಪಕ್ರಮವು, ಸಮಗ್ರ, ತಂತ್ರಜ್ಞಾನ ಆಧಾರಿತ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಬಾರ್ಡ್ ಹೇಳಿತ್ತು. ಇದೀಗ ಈ ಪ್ರದೇಶಕ್ಕೆ ವಿಶ್ವಬ್ಯಾಂಕ್ ಸದಸ್ಯರ ತಂಡವು ಭೇಟಿ ನೀಡಲಿದೆ.
ಯಾವ ಪ್ರದೇಶಗಳಲ್ಲಿ ಕೇಂದ್ರ
ಇನ್ನು ಕರ್ನಾಟಕದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಯುನಿಸ್ಟರ್ ಈ ಹಿಂದೆ FT-CFC ಕೇಂದ್ರಗಳನ್ನು ಉದ್ಘಾಟಿಸಿತು. ಆಧುನಿಕ ಕೃಷಿ-ಮೂಲಸೌಕರ್ಯ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಸ್ವಾವಲಂಬಿ ಗ್ರಾಮೀಣ ಆರ್ಥಿಕತೆಯನ್ನು ಸೃಷ್ಟಿಸುವ ಉದ್ದೇಶವನ್ನು ಈ ಯೋಜನೆಯು ಒಳಗೊಂಡಿದೆ. ಹೊಸದಾಗಿ ಕೇಂದ್ರದಿಂದ ಕಡಲೆಕಾಯಿ ಚಿಕ್ಕಿ ಮತ್ತು ಕಡಲೆಕಾಯಿ ಬೆಣ್ಣೆಯ ಮೊದಲ ಸರಕನ್ನು ಈ ಹಿಂದೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸಿದರು.












Click it and Unblock the Notifications