ತಾಂತ್ರಿಕ ದೋಷಗಳಿದ್ದರೂ ವಿಮಾನ ಟೇಕಾಫ್ ಆಗಿತ್ತೆ?

Written By:
Subscribe to Oneindia Kannada

ಚೆನ್ನೈ, ಜುಲೈ, 22: ನಾಪತ್ತೆಯಾದ ವಾಯುಸೇನೆ ವಿಮಾನದಲ್ಲಿ ಜುಲೈ ತಿಂಗಳ ಆರಂಭದಲ್ಲಿಯೇ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಸರಿಯಾದ ನಿರ್ವಹಣೆ ವಿಮಾನಕ್ಕೆ ಇರಲಿಲ್ಲ ಎಂದು ಹೇಳಲಾಗಿದೆ.

ಚೆನ್ನೈನ ತಾಂಬರಮ್ ನಿಂದ ಅಂಡಮಾನ್ ಕಡೆ ಹೊರಟಿದ್ದ ಭಾರತದ ವಾಯುಸೇನೆಯ ವಿಮಾನ ಶುಕ್ರವಾರ ಬೆಳಗ್ಗೆ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದೆದೆ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]

iaf

ವಿಮಾನದಲ್ಲಿ ಹಿಂದೆ ಮೂರು ಸಣ್ಣ ಪುಟ್ಟ ದೋಷಗಳು ಕಂಡುಬಂದಿದ್ದವು. ಕಳೆದ ಸಪ್ಟೆಂಬರ್ ನಲ್ಲಿ ವಿಮಾನವನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು.

ಒತ್ತಡ ತಡೆಯುವ ಶಕ್ತಿಯನ್ನು ವಿಮಾನ ಕಳೆದುಕೊಂಡಿತ್ತು. ಆದರೆ ಎಲ್ಲ ರೀತಿಯಿಂದ ಫಿಟ್ ಆಗಿರದ ವಿಮಾನವನ್ನು ವಾಯುನೆಲೆಯಿಂದ ಮೇಲಕ್ಕೆ ಬಿಡುವುದಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಬಿಡಿಭಾಗಗಳ ಕೊರತೆ, ಸರಿಯಾದ ಸೇವೆ ನೀಡುವುದರಲ್ಲಿ ವಿಫಲ, ಆಗಾಗ ಕೈಕೊಡುತ್ತಿದ್ದ ಸಣ್ಣ ಪುಟ್ಟ ತೊಂದರೆಗಳು, ಸರಿಯಾದ ನಿರ್ವಹಣೆ ಇಲ್ಲದಿರುವುದು ಎಲ್ಲವನ್ನು ಮೈಗೂಡಿಸಿಕೊಂಡಿದ್ದ ಎಎನ್ 32 ಇದೀಗ ನಾಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರಿದಿದ್ದು ವಿಮಾನ ಬಂಗಾಳಕೊಲ್ಲಿಯಲ್ಲಿ ಪತನವಾಗಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The ill-fated AN-32 that went off radar yesterday, with 29 personnel onboard, at 9:30 am is said to have encountered three technical snags earlier this month, despite an overhauling process and an upgrade refit in September last year. Inside sources, however, said that the snags were minor, which included hydraulic and pressure leak in various parts of the craft. The same source confirmed that none of the flights were allowed to take off without a complete check.
Please Wait while comments are loading...