AMMK ಪಕ್ಷಕ್ಕೆ ದಿನಕರನ್ ಪ್ರಧಾನ ಕಾರ್ಯದರ್ಶಿ, ಜೈಲಲ್ಲಿರುವ ಶಿಶಿಕಲಾಗೂ ಹುದ್ದೆ

ಚೆನ್ನೈ, ಏ.20: ಜಯಲಲಿತಾ ಸಾವಿನ ಬಳಿಕ ಎಐಡಿಎಂಕೆಯಿಂದ ಹೊರಹೋಗಿರುವ ಟಿಟಿವಿ ದಿನಕರನ್ ಎಎಂಎಂ(ಅಮ್ಮ ಮಕ್ಕಳ್ ಮುನ್ನೇತ್ರ ಕಾಳಗಂ)ಕೆ ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಟಿಟಿವಿ ದಿನಕರನ್ ವಹಿಸಿಕೊಳ್ಳಲಿದ್ದಾರೆ.ನಾಲ್ಕು ವರ್ಷದ ಜೈಲು ಶಿಕ್ಷೆ ಬಳಿಕ ಹೊರ ಬರಲಿರುವ ಶಶಿಕಲಾಗೆ ಅಧ್ಯಕ್ಷ ಹುದ್ದೆಯನ್ನು ಹಾಗೆಯೇ ಉಳಿಸಲಾಗಿದೆ.

Dhinakaran elected AMMK general secretary

ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷವು ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 39 ಕ್ಷೇತ್ರಗಳಿಗೆ ಸ್ಪರ್ಧಿಸಿದೆ. ಈ ಪಕ್ಷವು ಎಐಎಡಿಎಂಕೆಗೆ ದೊಡ್ಡ ಏಟು ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಪ್ರಸ್ತುತ ಶಶಿಕಲಾ ಎಎಂಎಂಕೆಯ ಕಾರ್ಯದರ್ಶಿಯಾಗಿದ್ದು ಜೈಲಿನಿಂದ ಹೊರಬಂದ ಬಳಿಕ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ.

ಎಐಎಡಿಎಂಕೆ ಜೊತೆಗೆ ಪಕ್ಷದ ಚಿಹ್ನೆಗಾಗಿ ಕಿತ್ತಾಡಿಕೊಂಡಿದ್ದ ದಿನಕರನ್ ಚಿಹ್ನೆಗಾಗಿ ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು,.

ಆದರೆ ಎಐಎಡಿಎಂ ಚಿಹ್ನೆ ನೀಡಲು ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ಎರಡೂ ನಿರಾಕರಿಸಿದ್ದವು.

ಇದಾದ ಬಳಿಕ ಎಐಡಿಎಂಕೆಯ ಸುಮಾರು 20ಕ್ಕೂ ಅಧಿಕ ಶಾಸಕರನ್ನು ಒಂದೆಡೆಗೆ ಸೆಳೆದುಕೊಳ್ಳಲು ಯಶಸ್ವಿಯಾಗಿದ್ದರಾದರೂ ಬಳಿಕ ಶಾಸಕರ ಅನರ್ಹತೆಯನ್ನೂ ಕೂಡ ಎದುರಿಸಬೇಕಾಯಿತು.

ಇದರ ಮಧ್ಯೆ 2017ರಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ದಿನಕರನ್ ಸಹೋದರಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಶಶಿಕಲಾ ಜೈಲು ಸೇರಿದ್ದು, ಸಧ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೂ ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+