ಈ ಕಳ್ಳ ಕಾರು ಕದಿಯುತ್ತಿದ್ದಿದ್ದು ಹಣಕ್ಕಾಗಿ ಅಲ್ಲ ಇನ್ನೇನಕ್ಕೆ?

ಹರಿಯಾಣ, ಮಾರ್ಚ್ 30: ಸಾಮಾನ್ಯವಾಗಿ ಕಳ್ಳತನ ಮಾಡುವವರು ತಮ್ಮ ಹೊಟ್ಟೆಪಾಡಿಗಾಗಿ ಅಥವಾ ಉತ್ತಮ ಜೀವನ ನಡೆಸಬಹುದು ಇದರಿಂದ ಎನ್ನುವ ಭ್ರಮೆಯಲ್ಲಿ ಮಾಡುತ್ತಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ಇಲ್ಲೊಬ್ಬ ಕಳ್ಳ ತನ್ನ 4 ಗರ್ಲ್ ಫ್ರೆಂಡ್‌ಗಳನ್ನು ಮೆಚ್ಚಿಸಲು ದುಬಾರಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸ್ ತನಿಖೆ ಮೂಲಕ ಬಹಿರಂಗಗೊಂಡಿದೆ.

ಹರಿಯಾಣ ಪೊಲೀಸರು ಗುರುವಾರ 22 ವರ್ಷದ ಕಾರ್ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಆತ ದಿಲ್ಲಿ ಮತ್ತು ಗುರುಗ್ರಾಮದಲ್ಲಿ ಅನೇಕ ದಿನಗಳಿಂದ ನಡೆಯುತ್ತಿದ್ದ ಕಾರ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ.

He stole cars to impress his four girlfriends

ಆರೋಪಿಗೆ ಒಂದಲ್ಲ, ಎರಡಲ್ಲ, ನಾಲ್ಕು ಗರ್ಲ್ ಫ್ರೆಂಡ್ಸ್ ಇದ್ದಾರಂತೆ. ಅವರನ್ನು ಇಂಪ್ರೆಸ್ ಮಾಡಲು ಅವರು ಹೊಸ ಹೊಸ ಕಾರು ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಸನಮ್ ಎಂದು ಗುರುತಿಸಲಾಗಿದೆ. ಆತ ಜನರಿಗೆ ಬಣ್ಣದ ಮಾತುಗಳಿಂದ ಮರಳು ಮಾಡಿ ಅವರ ಕೀ ತೆಗದುಕೊಂಡು ಗಾಡಿಗಳನ್ನು ಕದ್ದು ಪರಾರಿಯಾಗುತ್ತಿದ್ದ.

ಏಪ್ರಿಲ್ 2018ರಲ್ಲಿ ಈತನನ್ನು ಇದೇ ಆರೋಪದ ಮೇಲೆ ಬಂಧಿಸಲಾಗಿತ್ತು. 3 ತಿಂಗಳು ಜೈಲಲ್ಲಿದ್ದ ಆತ ಜಾಮೀನು ಪಡೆದು ಹೊರ ಹೋಗಿದ್ದ. ಜೈಲಿಗೆ ಹೋಗಿ ಬಂದರೂ ಆತ ತನ್ನ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ ಇದೀಗ ಮತ್ತೊಮ್ಮೆ ಪೊಲೀಸ್ ಅತಿಥಿಯಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+