ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ಟೈಮಲ್ಲಿ ಗ್ರಾಹಕರನ್ನು ಸೆಳೆಯಲು ಇದೇ ಸರಿಯಾದ ವಿಧಾನ

By ರವಿ ಸಾವ್ಕಾರ್, ಬೆಂಗಳೂರು
|
Google Oneindia Kannada News

ಸಂಕ್ರಾಂತಿ ಹಬ್ಬದ ಹತ್ತಿರವಾಗುತ್ತಿದಂತೆ ಅಂಗಡಿಗಳಲ್ಲಿ ವ್ಯಾಪಾರ ಜೋರಾಗುವುದು ಸಾಮಾನ್ಯ. ಮಾರಾಟಗಾರರು ತಮ್ಮತ್ತ ಗ್ರಾಹಕರನ್ನು ಸೆಳೆಯಲು ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ದಿನಸಿ ವಸ್ತುಗಳಲ್ಲದೆ ಸಂಕ್ರಾಂತಿಯ ಸಮಯದಲ್ಲಿ ಆಭರಣ, ಎಲೆಕ್ಟ್ರಾನಿಕ್ ಉಪಕರಣ ಮೊದಲಾದವುಗಳ ರಿಯಾಯಿತಿಯನ್ನು ಕೊಟ್ಟು ಗ್ರಾಹಕರಿಗೆ ಇವುಗಳನ್ನು ಕೊಳ್ಳಲು ಉತ್ತೇಜಿಸಲಾಗುತ್ತದೆ. ಈ ರೀತಿಯ ಕೊಡುಗೆಗಳನ್ನು ಹಲವಾರು ಕಂಪನಿಗಳು ಸಂಕ್ರಾಂತಿ ಸಮಯದಲ್ಲಿ ನೀಡುತ್ತಿರುವುದು ಕರ್ನಾಟಕದ ಹಾಗೂ ದಕ್ಷಿಣ ಭಾರತದ ಮಾರುಕಟ್ಟೆಯ ಮಹತ್ವವನ್ನು ತೋರಿಸುತ್ತದೆ.

ಗ್ರಾಹಕರನ್ನು ಸೆಳೆಯುವ ಸರಿಯಾದ ವಿಧಾನ
ಇಡೀ ದೇಶಕ್ಕೆ ಒಂದೇ ರೀತಿಯ ಜಾಹೀರಾತುಗಳನ್ನು ಬಳಸಿ, ಅದರಲ್ಲೂ ಹಿಂದಿ/ಇಂಗ್ಲೀಶ್ ಭಾಷೆಗಳನ್ನು ಮಾತ್ರ ಬಳಸಿ ಎಲ್ಲೆಡೆಯ ಗ್ರಾಹಕರನ್ನು ಸೆಳೆಯಲು ಸಾಧ್ಯವಿಲ್ಲ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಜನರನ್ನು ಸಮರ್ಪಕವಾಗಿ ತಲುಪಲು ಜನರ ಭಾಷೆಯನ್ನು ಬಳಸುವುದೇ ಲೇಸು ಎಂಬುದನ್ನು ಹೆಚ್ಚು ಹೆಚ್ಚು ಕಂಪನಿಯವರು ಅರಿಯುತ್ತಿದ್ದಾರೆ.

Festival season Ad Use of Local language to attract Customers

ಮೋರ್ ಮೆಗಾ ಸ್ಟೋರ್, ರಿಲಯನ್ಸ್ ಫ್ರೆಶ್ ಮುಂತಾದ ಸೂಪರ್ ಮಾರ್ಕೆಟ್ ಗಳು ತಮ್ಮ ಸಂಕ್ರಾಂತಿ ಪ್ರಯುಕ್ತದ ಜಾಹೀರಾತುಗಳಲ್ಲಿ ಕನ್ನಡವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಅಲ್ಲದೇ ಕ್ಯಾಡ್ಬರೀಸ್ ಚಾಕಲೇಟ್ ಕಂಪನಿಯವರು ಬೆಂಗಳೂರಿನ ಹಲವಾರು ಬಡಾವಣೆಗಳ ಬಸ್ ನಿಲ್ದಾಣಗಳಲ್ಲಿ ಹಾಕಲಾಗಿರುವ ಜಾಹೀರಾತುಗಳಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಕನ್ನಡದಲ್ಲೇ ಹಾಕಿದ್ದಾರೆ.

ಗ್ರಾಹಕರ ಹಬ್ಬಗಳನ್ನು ಮೆರೆಸುವುದರ ಮಹತ್ವ
ಜನರು ಆಚರಿಸುವ ಹಬ್ಬಗಳಿಗೆ ಹಾರೈಸುವುದರಿಂದ ಹಾಗೂ ಆ ಸಮಯದಲ್ಲಿ ಹೆಚ್ಚು ಕೊಡುಗೆಗಳನ್ನು ನೀಡುವುದರಿಂದ ಗ್ರಾಹಕರನ್ನು ಸೆಳೆಯಬಹುದು. ಹಬ್ಬದ ಹಾರೈಕೆ ಮತ್ತು ಜಾಹೀರಾತು ಈ ಎಲ್ಲದರಲ್ಲೂ ಗ್ರಾಹಕರ ಭಾಷೆಯನ್ನೇ ಬಳಸುವುದರಿಂದ ಕಂಪನಿಗಳು ಗ್ರಾಹಕರ ಜೊತೆ ಇರುವ ನಂಟನ್ನು ಗಟ್ಟಿಗೊಳಿಸಿಕೊಳ್ಳಬಹುದು.

ಈ ವಿಷಯವನ್ನು ಸಾಕಷ್ಟು ಕಂಪನಿಗಳು ಅರಿಯುತ್ತಿವೆಯಾದರೂ, ಇದನ್ನು ಅರಿಯಬೇಕಾದ ಕಂಪನಿಗಳು ಇನ್ನೂ ಸಾಕಷ್ಟು ಇವೆ. ನಮ್ಮ ಹಬ್ಬಗಳಿಗೆ, ನಮ್ಮ ಭಾಷೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಪ್ರಾಧಾನ್ಯತೆ ನೀಡುವುದು ಕಂಪನಿಗಳಿಗೇ ಒಳಿತು, ಈ ದಿಟವನ್ನು ಹೆಚ್ಚೆಚ್ಚು ಕಂಪನಿಗಳು ಅರಿಯಲಿ ಎಂದು ಸಂಕ್ರಾಂತಿಯ ದಿನದಂದು ಆಶಿಸೋಣ.

English summary
Companies make use of festival seasons to woo their customers with various kind of advertisements. During the big festival like Makara Sankranti season it is noticed that there is boom in the sales and reach when the ads are given local languages writes citizen journalist Ravi Savkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X