Sankranthi Special: ಹಬ್ಬದ ಪ್ರಯುಕ್ತ ಹೈದರಾಬಾದ್‌ನಿಂದ 8 ವಿಶೇಷ ರೈಲುಗಳು
ಹೈದರಾಬಾದ್, ಡಿ. 15: ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ದಕ್ಷಿಣ ಮಧ್ಯ ರೈಲ್ವೆ(SCR) ವಿಭಾಗವು ಹೈದರಾಬಾದ್‌ನಿಂದ 6 ವಿಶೇಷ ರೈಲುಗಳು ಸೇರಿದಂತೆ 8 ರೈಲುಗಳ ಸೇವೆ ನೀಡುತ್ತಿದೆ. ಇದರಿಂದ ನೆರೆರಾಜ್ಯ ವಿವಿಧ ಸ್ಥಳಗಳಿಗೂ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶೇಷ ರೈಲುಗಳ ಪೈಕಿ 6 ರೈಲುಗಳು ಪ್ರತಿದಿನ ಸಂಚರಿಸಲಿವೆ. ಎಲ್ಲಾ ರೈಲುಗಳಿಗೂ ಮುಂಗಡವಾಗಿ ಸೀಟು ಕಾಯ್ದಿರಿಸುವುದು ಕಡ್ಡಾಯ. ಇದಲ್ಲದೆ ವಾರಕ್ಕೆ ಎರಡು ಬಾರಿ ಸಂಚರಿಸುವ 2 ವಿಶೇಷ ರೈಲುಗಳು ಕೂಡಾ ಪ್ರಯಾಣಿಕರಿಗೆ ಲಭ್ಯವಾಗಲಿದೆ.

1. ಹೈದರಾಬಾದ್ ಇಂದ ಔರಂಗಾಬಾದ್
ಡಿಸೆಂಬರ್ 31ರಿಂದ ಜನವರಿ 19
ನಿರ್ಗಮನ: ಹೈದರಾಬಾದ್ ರಾತ್ರಿ 10.45 pm
***
2. ಔರಂಗಬಾದ್ ಇಂದ ಹೈದರಾಬಾದ್
ಜನವರಿ 1 ರಿಂದ ಜನವರಿ 20
ನಿರ್ಗಮನ: ಔರಂಗಬಾದ್ 4.15 pm
ಹಬ್ಬದ ವಿಶೇಷ ರೈಲುಗಳ ಅವಧಿ ವಿಸ್ತರಣೆ; ರೈಲುಗಳ ಪಟ್ಟಿ
***
3. ಕಾಚಿಗುಡ ಇಂದ ಮೈಸೂರು
ಡಿಸೆಂಬರ್ 31ರಿಂದ ಜನವರಿ 19,2021
ನಿರ್ಗಮನ: ಕಾಚಿಗುಡ, 7.05 pm
***
4. ಮೈಸೂರು ಇಂದ ಕಾಚಿಗುಡ
ಜನವರಿ 1 ರಿಂದ ಜನವರಿ 20, 2021
ನಿರ್ಗಮನ: ಮೈಸೂರು, 3.15 pm
5. ಹೈದರಾಬಾದ್ ಇಂದ ತಾಂಬರಂ
ಡಿಸೆಂಬರ್ 31ರಿಂದ ಜನವರಿ 19
ನಿರ್ಗಮನ: ಹೈದರಾಬಾದ್, 6 PM
***
6. ತಾಂಬರಂ ಇಂದ ಹೈದರಾಬಾದ್
ಜನವರಿ 1 ರಿಂದ ಜನವರಿ 20, 2021
ನಿರ್ಗಮನ: ತಾಂಬರಂ, 5 PM
***
7. ತಿರುಪತಿ ಇಂದ ಅಮರಾವತಿ
ಜನವರಿ 02, 2021ರಿಂದ ಜನವರಿ 16, 2021
ನಿರ್ಗಮನ: ತಿರುಪತಿ, 15:40
ಮಂಗಳವಾರ ಹಾಗೂ ಶನಿವಾರ
****
8. ಅಮರಾವತಿ ಇಂದ ತಿರುಪತಿ
ಜನವರಿ 04, 2021ರಿಂದ ಜನವರಿ 18, 2021
ನಿರ್ಗಮನ: ಅಮರಾವತಿ, 06:45
ಸೋಮವಾರ ಹಾಗೂ ಗುರುವಾರ
"Extension of 08 Festival Special Trains between Various Destinations "@RailMinIndia pic.twitter.com/VpZti9mHPs
— South Central Railway (@SCRailwayIndia) December 14, 2020
ಪ್ರಯಾಣದ ವೇಳೆಯಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿಧಿಸಿರುವ ಕೋವಿಡ್ 19 ನಿಯಮಗಳನ್ನು ಪಾಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ. ರೈಲ್ವೆ ಪೊಲೀಸರು ಈ ನಿಯಮಗಳ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ.












Click it and Unblock the Notifications