ಹಬ್ಬದ ವಿಶೇಷ ರೈಲುಗಳ ಅವಧಿ ವಿಸ್ತರಣೆ; ರೈಲುಗಳ ಪಟ್ಟಿ
ಮೈಸೂರು, ನವೆಂಬರ್ 25: ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗಿತ್ತು. ಈ ರೈಲುಗಳ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದ ಅವಧಿ ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಕೆಲವು ರೈಲುಗಳು ಡಿಸೆಂಬರ್ ತನಕ, ಮತ್ತೆ ಕೆಲವು ರೈಲುಗಳು 2021ರ ಜನವರಿ ತನಕ ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ.
ಮೈಸೂರು ನಗರದಿಂದ ಸಂಚಾರ ನಡೆಸುವ ಒಟ್ಟು 8 ರೈಲುಗಳ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ. ಇವುಗಳಲ್ಲಿ ಪ್ರತಿದಿನ ಸಂಚಾರ ನಡೆಸುವ, ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲುಗಳು ಸೇರಿವೆ.

ಮೈಸೂರು-ವಾರಣಾಸಿ, ಮೈಸೂರು-ಅಜ್ಮೀರ್, ಅಜ್ಮೀರ್-ಮೈಸೂರು, ವಾರಣಾಸಿ-ಮೈಸೂರು ಸೇರಿದಂತೆ ವಿವಿಧ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಮಾನ್ಯ ರೈಲುಗಳು ಸಂಚಾರ ನಡೆಸುತ್ತಿಲ್ಲ. ಪ್ರಯಾಣಿಕರ ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ಓಡಿಸುತ್ತಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ದೇಶಾದ್ಯಂತ ಹಲವು ವಿಶೇಷ ರೈಲುಗಳನ್ನು ಓಡಿಸಲು ಆರಂಭಿಸಲಾಗಿತ್ತು.
ರೈಲುಗಳ ಪಟ್ಟಿ ಇಲ್ಲಿದೆ...
Passengers kindly note the extended date of Festival special express trains #mysurudivision #passengers #travel #RailParivar @SWRRLY @RailMinIndia pic.twitter.com/iO7vxrtWd1
— DRM Mysuru (@DrmMys) November 25, 2020












Click it and Unblock the Notifications