Makar Sankranti : ಸಂಕ್ರಾಂತಿ ಹಬ್ಬಕ್ಕೂ ಮುನ್ನ ಬೆಂಗಳೂರಿನಲ್ಲಿ ದುಪ್ಪಟ್ಟಾದ ಹೂವು, ಹಣ್ಣಿನ ಬೆಲೆ- ಇಲ್ಲಿವೆ ದರಗಳು
ಬೆಂಗಳೂರು, ಜನವರಿ 14: ಸಂಕ್ರಾಂತಿ, ಪೊಂಗಲ್ ಹಬ್ಬಕ್ಕೂ ಮುನ್ನ ಕಳೆದ ಒಂದು ವಾರದಿಂದ ನಗರದಲ್ಲಿ ಹೂವಿನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ನಗರದಲ್ಲಿರುವ ಮಾರುಕಟ್ಟೆಗಳಿಗೆ ಭೇಟಿ ನೀಡಿದರೆ, ಹೂವಿನ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ನಿಮಗೆ ತಿಳಿಯಲಿದೆ. ಅದರಲ್ಲೂ ಮಲ್ಲಿಗೆ ಹೂವಿಗೆ ಹೆಚ್ಚಿನ ಬೇಡಿಕೆಯಿದೆ ಎಂಬುದು ಗೊತ್ತಾಗುತ್ತದೆ. ಈ ಕುರಿತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ವರದಿ ಮಾಡಿದೆ.
ಮಲ್ಲೇಶ್ವರಂ 11ನೇ ಕ್ರಾಸ್‌ನ ಹೂವಿನ ಮಾರುಕಟ್ಟೆಯಲ್ಲಿ ಒಂದು ಸರಮಾಲೆ ಮಲ್ಲಿಗೆ ಹೂವಿಗೆ 60 ರಿಂದ 120 ರೂಪಾಯಿಗೆ ಏರಿದೆ. ನೀವು ಒಂದು ವೇಳೆ, ಮಲ್ಲಿಗೆ ಮಾಲೆ ಖರೀದಿಸಬೇಕೆಂದತೆ 1,200 ರೂಪಾಯಿ ನೀಡಬೇಕಿದೆ. 600 ರೂಪಾಯಿಂದ 1,200 ರೂಪಾಯಿಗೆ ಏರಿಕೆಯಾಗಿದೆ.
ಹಬ್ಬ-ಹರಿದಿನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಸೇವಂತಿ ಹೂವು 25 ರಿಂದ 50 ರೂಪಾಯಿಗೆ ಏರಿಕೆಯಾಗಿದೆ. ಮತ್ತೊಂದೆಡೆ ಸೇವಂತಿಗೆ ಮಾಲೆ 100 ರಿಂದ 200 ರೂಪಾಯಿಗೆ ಏರಿದೆ.

ಕನಕಾಂಬರ ಮಾಲೆಯು ಮೊದಲಿನ 60 ರೂ.ಗಳಿಂದ ಈಗ 120 ರೂಪಾಯಿ ವರೆಗೆ ಏರಿಕೆ ಕಂಡಿದೆ.
ಹಬ್ಬದ ಪ್ರಯುಕ್ತ ತೀವ್ರ ಬೇಡಿಕೆಯಿಂದಾಗಿ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಬಾಳೆಹಣ್ಣು ಕಿಲೋಗೆ 60 ರೂ.ನಿಂದ 70 ರೂಪಾಯಿ ಏರಿಕೆಯಾಗಿದೆ. ಸೇಬು ಹಣ್ಣಿನ ಬೆಲೆ 120 ರೂ.ನಿಂದ 150 ರೂಪಾಯಿ ಏರಿಕೆ ಕಂಡಿದೆ.
'ಈ ಹಣ್ಣುಗಳ ಸೀಸನ್ ಮುಗಿಯುತ್ತಿದ್ದಂತೆ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ ದ್ರಾಕ್ಷಿಯಂತಹ ಇತರ ಹಣ್ಣುಗಳ ಬೆಲೆ ಕಡಿಮೆಯಾಗಿದೆ. ಅವುಗಳ ಸೀಸನ್ ಪ್ರಾರಂಭವಾಗಿರುವುದರಿಂದ ಬೆಲೆ ಕಡಿಮೆಯಾಗಿದೆ. ದ್ರಾಕ್ಷಿ ಬೆಲೆ 250 ರಿಂದ 200 ರೂ.ಗೆ ಇಳಿಕೆಯಾಗಿದೆ' ಎಂದು ರಸೆಲ್ ಮಾರುಕಟ್ಟೆಯ ಹಣ್ಣು ಮಾರಾಟಗಾರರೊಬ್ಬರು 'ಡೆಕ್ಕೆನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
ಮಕರ ಸಂಕ್ರಾಂತಿಯು ಭಾರತದಾದ್ಯಂತ ಅತ್ಯಂತ ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಗುವ ವರ್ಷದ ಮೊದಲ ಹಿಂದೂ ಹಬ್ಬವಾಗಿದೆ. ಇದು ಪ್ರತಿ ವರ್ಷ ಜನವರಿಯಲ್ಲಿ ಬರುತ್ತದೆ. ಇದು ಭಾರತದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಆದರೆ, ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಸೂರ್ಯ ಉತ್ತರಕ್ಕೆ ಪ್ರಯಾಣಿಸುತ್ತಾನೆ. ಈ ಕಾರಣದಿಂದಾಗಿ, ಇನ್ನು ಮುಂದೆ ಹಗಲಿನ ಸಮಯ ದೀರ್ಘವಾಗುತ್ತವೆ. ಈ ಅವಧಿಯನ್ನು ಉತ್ತರಾಯಣ ಎಂದೂ ಕರೆಯುತ್ತಾರೆ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ವರ್ಷ, ಮಕರ ಸಂಕ್ರಾತಿ ಹಬ್ಬವು ಜನವರಿ 15, 2023 ರಂದು ಭಾನುವಾರ ಬಂದಿದೆ. ಪಂಚಾಂಗದ ಪ್ರಕಾರ, ಸಂಕ್ರಾಂತಿ ತಿಥಿಯು 8:57, ಜನವರಿ 14 ಕ್ಕೆ ಇರುತ್ತದೆ. ಮಕರ ಸಂಕ್ರಾಂತಿ ಪುಣ್ಯ ಕಾಲವು ಬೆಳಿಗ್ಗೆ 7:15 ರಿಂದ ಸಂಜೆ 5:46 ರ ವರೆಗೆ (ಅವಧಿ - 10 ಗಂಟೆ 31 ನಿಮಿಷಗಳು) ಮತ್ತು ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲವು ಬೆಳಿಗ್ಗೆ 7:15 ಕ್ಕೆ ಪ್ರಾರಂಭವಾಗಿ ರಾತ್ರಿ 9:00 ಕ್ಕೆ ಕೊನೆಗೊಳ್ಳುತ್ತದೆ (ಕಾಲ - 1 ಗಂಟೆ 45 ನಿಮಿಷಗಳು).












Click it and Unblock the Notifications