ಎಳ್ಳು ಬೆಲ್ಲ, ಉಂಡೆ, ಸಕ್ಕರೆ ಅಚ್ಚು, ಕಬ್ಬು ಜೋಡಿಸಿಕೊಳ್ಳಿ ಸಂಕ್ರಾಂತಿ ಬಂತು ಎಲ್ಲರಿಗೂ ಹಂಚಬೇಕು....
ಎಳ್ಳು ಬೆಲ್ಲ, ಉಂಡೆ, ಸಕ್ಕರೆ ಅಚ್ಚು, ಕಬ್ಬು ಜೋಡಿಸಿಕೊಳ್ಳಿ ಸಂಕ್ರಾಂತಿ ಬಂತು ಎಲ್ಲರಿಗೂ ಹಂಚಬೇಕು. ಹೌದು... ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಮಕರ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬ ಎಂತಲೂ ಕರೆಯಲಾಗುತ್ತದೆ. ಈ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಈ ಹಬ್ಬದಂದು ಎಳ್ಳು ಬೆಲ್ಲವನ್ನು ಆಪ್ತರಿಗೆ ಹಂಚಿ ಶುಭ ಹಾರೈಸಿಲಾಗುತ್ತದೆ. ಹೊಸ ವರ್ಷದ ಮೊದಲ ಹಬ್ಬ ಜೀವನದುದ್ದಕ್ಕೂ ಸುಖ:, ಸಂತೋಷ, ನೆಮ್ಮದಿ ತರಲಿ ಎಂದು ಆಶಿಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದರಲ್ಲಿ ಕಬ್ಬಿನ ರಾಶಿ, ಸಕ್ಕರೆ ಅಚ್ಚು, ಎಳ್ಳು ಬೆಲ್ಲದ ಎಲ್ಲವೂ ಚಳಿಗಾಲದ ಅಂತ್ಯವನ್ನು ಸೂಚಿಸುತ್ತಿವೆ.

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ರಾಜ್ಯಾದ್ಯಂತ ಮೂರು ದಿನಗಳ ಕಾಲ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿಷಯವೆಂದರೆ ಕಬ್ಬು. ನೀವು ನಗರಗಳಲ್ಲಿ ಬೆಳೆದವರಾಗಿದ್ದರೆ, ಅವುಗಳನ್ನು ಖರೀದಿಸುವುದರಿಂದ ಹಿಡಿದು ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಅದನ್ನು ವಿತರಿಸುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಸಕ್ಕರೆ ಅಚ್ಚು ಅಥವಾ ಕಬ್ಬಿನ ಮಿಠಾಯಿ ತಯಾರಿಕೆ
ಈ ದಿನ ಸಕ್ಕರೆ ಅಚ್ಚು ಅಥವಾ ಕಬ್ಬಿನ ಮಿಠಾಯಿಯನ್ನು ಅಂಗಡಿಯಿಂದ ಖರೀದಿಸಿ ತರಲಾಗುತ್ತದೆ. ಜೊತೆಗೆ ಇದನ್ನು ದೇವರ ಮುಂದಿಟ್ಟು ಪೂಜಿಸಿ ಬಳಿಕ ಹಂಚಿ ತಿನ್ನಲಾಗುತ್ತದೆ. ಕೆಲವರು ಇದನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಸಕ್ಕರೆಯಿಂದ ದೇವರ ಪೂರ್ತಿಯ ಆಕಾರದಲ್ಲಿ ಸಕ್ಕರೆ ಅಚ್ಚು ತಯಾರಿಸಲಾಗುತ್ತದೆ. ಇದರಿಂದ ಮೊದಲು ಸೂರ್ಯ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಇದನ್ನು ಕುಟುಂಬಸ್ಥರು, ಪ್ರೀತಿಪಾತ್ರರು, ಸಂಬಂಧಿಕರು, ಸ್ನೇಹಿತರು, ಮತ್ತು ನೆರೆಹೊರೆಯವರೊಂದಿಗೆ ಸವಿಯಲಾಗುತ್ತದೆ. ಹಬ್ಬಕ್ಕೆ ಕೆಲವು ದಿನಗಳ ಮೊದಲು ಸಕ್ಕರೆ ಮಿಠಾಯಿಗಳ ವಿವಿಧ ಪ್ರತಿಮೆಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು.
ಎಳ್ಳು ಬೆಲ್ಲ ಹಂಚುವುದು
ಈ ದಿನ ಮತ್ತೊಂದು ವಿಶೇಷ ಅಂದರೆ ಎಳ್ಳು ಬೆಲ್ಲ ಹಂಚುವುದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರಿಗೂ ಈ ದಿನ ಎಳ್ಳು ಬೆಲ್ಲ ಹಂಚಲಾಗುತ್ತದೆ. ಜೀವನದಲ್ಲಿ ಸಮಸ್ಯೆಗಳು ದೂರವಾಗಿ ನಿಮ್ಮ ಜೀವನ ಸಂತೋಷವಾಗಿ ಸಿಹಿಯಂತಿರಲಿ ಎಂದು ಹಾರೈಸಲಾಗುತ್ತದೆ. 'ಎಳ್ಳು ಬೆಲ್ಲ ತಿಂದು ಒಳ್ಳೆ ಒಳ್ಳೆ ಮಾತನಾಡಿ' ಎಂದು ಹಾರೈಸುವ ರೂಢಿಯುವ ಕರ್ನಾಟಕದಲ್ಲಿ ಇದೆ.

ಸುಗ್ಗಿಯ ಹಬ್ಬ
ಮಕರ ಸಂಕ್ರಾಂತಿಯನ್ನು ಕನ್ನಡದಲ್ಲಿ 'ಸುಗ್ಗಿ ಹಬ್ಬ' ಎಂದು ಕರೆಯಲಾಗುತ್ತದೆ. ಯಾಕೆಂದರೆ ಈ ಸಮಯದಲ್ಲಿ ಭತ್ತ, ಕಬ್ಬು, ಬದನೆ, ಗೇರುಬೀಜ ಮತ್ತು ಹೆಚ್ಚಿನದನ್ನು ಕೊಯ್ಲು ಮಾಡಲಾಗುತ್ತದೆ. ಕರ್ನಾಟಕದಲ್ಲಿ ಇದು ಮುಖ್ಯವಾಗಿ ಅಕ್ಕಿ ಮತ್ತು ಕಬ್ಬಿನ ಕೊಯ್ಲು ಸೂಚಿಸುತ್ತದೆ. ಗೆಣಸು, ನೆಲಗಡಲೆ, ಕಬ್ಬು, ಪೊಂಗಲ್, ಸಿಹಿತಿಂಡಿ, ಕಿಚಿಡಿ, ಎಳ್ಳು ಊಂಡೆ, ಹೋಳಿಗೆ, ಎಳ್ಳು ಬೆಲ್ಲದೊಂದಿಗೆ ನೆರೆಹೊರೆಯವರಿಗೆ ಸ್ನೇಹಿತರಿಗೆ ವಿತರಿಸಲಾಗುತ್ತದೆ. ಇದಲ್ಲದೆ 'ಹುಗ್ಗಿ ಅನ್ನ' ಅಥವಾ ಅಕ್ಕಿ ಮತ್ತು ಬೆಲ್ಲದಿಂದ ಮಾಡಿದ ಕಿಚಡಿ ಸಿಹಿ ಮತ್ತು ಖಾರದ ಖಾದ್ಯಗಳು, ಪೊಂಗಲ್ ಈ ದಿನ ಸವಿಯಲಾಗುತ್ತದೆ.
ದಾನ ಮಾಡುವುದು
ಮಕರ ಸಂಕ್ರಾಂತಿಯಂದು ದಾನ ಮಾಡುವುದು ಉತ್ತಮ ಫಲ ನೀಡುತ್ತದೆ ಎಂದು ನಂಬಲಾಗುತ್ತದೆ. ಅಗತ್ಯವಿರುವವರಿಗೆ ದಾನ ಮಾಡಲಾಗುತ್ತದೆ. ಹೀಗೆ ದಾನ ಮಾಡುವುದರಿಂದ ಅನಾರೋಗ್ಯ, ಹಣದ ಸಮಸ್ಯೆ ದೂರವಾಗುತ್ತವೆ ಎಂಬ ನಂಬಿಕೆ ಇದೆ.












Click it and Unblock the Notifications