ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿಯಂದು ಅಳಿಯನಿಗೆ 379 ವಿಧದ ಆಹಾರ ಖಾದ್ಯಗಳಿಂದ ಉಪಚರಿಸಿದ ಕುಟುಂಬ: ಇದು ನಡೆದಿದ್ದು ಎಲ್ಲಿ? ವಿಡಿಯೊ ನೋಡಿ

|
Google Oneindia Kannada News

ಹೈದರಾಬಾದ್‌, ಜನವರಿ 17: ಆಂಧ್ರಪ್ರದೇಶದ ಎಲೂರು ನಗರದಲ್ಲಿ ಕುಟುಂಬವೊಂದು ಸೋಮವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ 379 ಬಗೆಯ ಖಾದ್ಯಗಳನ್ನು ಒಳಗೊಂಡ ಔತಣವನ್ನು ತಮ್ಮ ಅಳಿಯನಿಗೆ ಬಡಿಸಿದೆ. ಹಬ್ಬದ ಚಿತ್ರಗಳು ಇದೀಗ ವೈರಲ್ ಆಗಿವೆ. ಇತ್ತೀಚಿನ ದಿನಗಳಲ್ಲಿ ಅಳಿಯಂದಿರಿಗೆ ವಿವಿಧ ಆಹಾರ ಪದಾರ್ಥಗಳನ್ನು ಬಡಿಸುವುದು ಸಂಪ್ರದಾಯವಾಗುತ್ತಿದೆ. ಇದು ದಾಖಲೆಗೂ ಕಾರಣವಾಗುತ್ತಿದೆ.

ಬೆರಗಾಗಿಸುವ ಬೆಕ್ಕುಗಳ ಬೈಕ್ ರೈಡ್: ವೈರಲ್ ವಿಡಿಯೋಬೆರಗಾಗಿಸುವ ಬೆಕ್ಕುಗಳ ಬೈಕ್ ರೈಡ್: ವೈರಲ್ ವಿಡಿಯೋ

ಕಳೆದ ವರ್ಷ, ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದ ಮತ್ತೊಂದು ಕುಟುಂಬವು ಹಬ್ಬದ ಸಂದರ್ಭದಲ್ಲಿ ತಮ್ಮ ಭಾವಿ ಅಳಿಯನಿಗೆ 365 ಖಾದ್ಯಗಳನ್ನು ಬಡಿಸಿತ್ತು. ಅಳಿಯನಿಗೆ ಹಬ್ಬದೂಟ ಬಡಿಸುವ ಪದ್ಧತಿಯು ಗೋದಾವರಿ ಜಿಲ್ಲೆಗಳಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಚಿತ್ರಗಳೊಂದಿಗೆ ಇದು ಹೈಲೈಟ್ ಆಗಿದೆ.

Andhra Pradesh Family Treats Son-In-Law With 379 Different Types Of Food

'ಸಂಕ್ರಾಂತಿಯಂದು, ಏಲೂರಿನಲ್ಲಿರುವ ಕುಟುಂಬವೊಂದು ತಮ್ಮ ಅಳಿಯನಿಗೆ 379 ವಿಧದ ಆಹಾರಗಳೊಂದಿಗೆ ಉಪಚರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ಕುಟುಂಬವು ತಮ್ಮ ಅಳಿಯನಿಗೆ ಬಡಿಸಿದ ಆಹಾರ ಪದಾರ್ಥಗಳ ಸಂಖ್ಯೆಯಲ್ಲಿ ಇದು ಅತ್ಯಧಿಕವಾಗಿದೆ. ಈ ಔತಣವು ಪಟ್ಟಣದ ಚರ್ಚೆಯಾಗಿದೆ' ಎಂದು ಆಷಿಶ್‌ ಎಂಬುವವರು ಟೀಟ್‌ ಮಾಡಿದ್ದಾರೆ. ಈ ಟ್ವೀಟ್‌ನೊಂದಿಗೆ ವಿಡಿಯೊಗಳನ್ನೂ ಹಂಚಿಕೊಂಡಿದ್ದಾರೆ.

ಈ ಔತನ ಕೂಟಕ್ಕಾಗಿ ಮೂವತ್ತು ಬಗೆಯ ಕರಿಗಳು, ಅನ್ನ, ಪುಳಿಹೊರ, ಬಿರಿಯಾನಿ, ಸಾಂಪ್ರದಾಯಿಕ ಗೋದಾವರಿ ಸಿಹಿತಿಂಡಿಗಳು, ಬಿಸಿ ಮತ್ತು ತಂಪು ಪಾನೀಯಗಳು, ಬಿಸ್ಕತ್ತುಗಳು, ಹಣ್ಣುಗಳು, ಕೇಕ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.

Andhra Pradesh Family Treats Son-In-Law With 379 Different Types Of Food

ಈ ಅದ್ಧೂರಿ ವಿವಾಹ ಪೂರ್ವ ಭೋಜನ ಕೂಟದಲ್ಲಿ ವಧು ಮತ್ತು ವರನ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳು ಆಂಧ್ರ ಶೈಲಿಯ ಆಹಾರ ಪದ್ದತಿಗೆ ಹೆಸರುವಾಸಿ ಆಗಿವೆ. ತೆಲುಗು ರಾಜ್ಯಗಳಲ್ಲಿ ತಯಾರಾದ ಕೆಲವು ಅತ್ಯುತ್ತಮ ಭಕ್ಷ್ಯಗಳು ಈ ಜಿಲ್ಲೆಗಳಲ್ಲಿ ತಯಾರಿಸಲ್ಪಡುತ್ತದೆ.

ಅಳಿಯ ಬುದ್ಧ ಮುರಳೀಧರ್ ವಿಶಾಖಪಟ್ಟಣದ ಅನಕಾಪಲ್ಲಿ ಮೂಲದವರಾಗಿದ್ದು, ಕಳೆದ ವರ್ಷ ಏಪ್ರಿಲ್ 16 ರಂದು ಏಲೂರಿನ ಕೊರುಬಳ್ಳಿ ಕುಸುಮಾ ಅವರನ್ನು ವಿವಾಹವಾಗಿದ್ದಾರೆ. 10 ದಿನಗಳ ಕಾಲ ಮೆನು ತಯಾರಿ ನಡೆದಿದೆ ಎಂದು ಕುಸುಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಮ್ಮ ಕುಟುಂಬದಲ್ಲಿ ಯಾರೂ ಗೋದಾವರಿ ಜಿಲ್ಲೆಗಳ ಹುಡುಗಿಯನ್ನು ಮದುವೆಯಾಗಿಲ್ಲ. ಹಾಗೆ ಮಾಡಿದವರಲ್ಲಿ ನಾನೇ ಮೊದಲಿಗ ಎಂದು ಮುರಳೀಧರ್ ಹೇಳಿದ್ದಾರೆ.

English summary
A family in Andhra Pradesh's Eluru city served their son-in-law a feast of 379 different dishes on the occasion of Sankranti on Monday. Pictures of the festival have now gone viral
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X