• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರವಾದಿಗಳನ್ನು ವಿರೋಧಿಸುವುದೇ ಕಾಂಗ್ರೆಸ್ ಮುಖಂಡರ ಕೆಲಸವಾಗಿದೆ: ಪ್ರಲ್ಹಾದ್ ಜೋಶಿ

|
Google Oneindia Kannada News

ಬೆಂಗಳೂರು, ಆಗಸ್ಟ್ 16: ರಾಷ್ಟ್ರವಾದಿಗಳನ್ನು ವಿರೋಧಿಸುವುದೇ ಇಂದಿನ ಕಾಂಗ್ರೆಸ್‌ನ ಸಹಜ ಗುಣ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದು ಹೋರಾಟದ ಕಿಚ್ಚು ಹತ್ತಿಸಿದ್ದ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಂಡಿಸಿದ್ದಾರೆ.

ಬೆಂಗಳೂರು ಮೆಟ್ರೋಗೂ ಹಬ್ಬಿದ ಸಾವರ್ಕರ್‌ ಫೊಟೋ ವಿವಾದಬೆಂಗಳೂರು ಮೆಟ್ರೋಗೂ ಹಬ್ಬಿದ ಸಾವರ್ಕರ್‌ ಫೊಟೋ ವಿವಾದ

ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆಗೆದು ಹಾಕಿದ ಪ್ರಕರಣ ಕುರಿತು, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ನಾಯಕರ ನಿಲುವನ್ನ ಪ್ರಶ್ನೆ ಮಾಡಿದ್ದಾರೆ. ಸಾವರ್ಕರ್ ಭಾವಚಿತ್ರವನ್ನ ಮುಸ್ಲಿಮರ ಏರಿಯಾದಲ್ಲೇ ಏಕೆ ಹಾಕಬೇಕಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಈ ಕುರಿತಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಲ್ಹಾದ್ ಜೋಶಿ, ಈ ರೀತಿ ಮಾತನಾಡುವವರು ನಕಲಿ ಕಾಂಗ್ರೆಸಿಗರು. ಸಾವರ್ಕರ್ ಒಬ್ಬ ಸೇನಾನಿ. ವಿನಾಯಕ ದಾಮೋದರ ಸಾವರ್ಕರ್ ಅವರ ರಾಷ್ಟ್ರಾಭಿಮಾನ, ಹೋರಾಟದ ಕಿಚ್ಚು ಕಂಡು ಸ್ವತಃ ಕಾಂಗ್ರೆಸ್‌ನ ಅಂದಿನ ನಾಯಕರು, ಅವರಿಗೆ ಗೌರವ ಸಲ್ಲಿಸಿ ನಮಿಸಿದ್ದರು ಎಂದು ಹೇಳಿದ್ದಾರೆ.

ತುಮಕೂರಿಗೂ ಹಬ್ಬಿದ ಸಾವರ್ಕರ್‌ ಪೋಟೋ ವಿವಾದತುಮಕೂರಿಗೂ ಹಬ್ಬಿದ ಸಾವರ್ಕರ್‌ ಪೋಟೋ ವಿವಾದ

ಕಾಂಗ್ರೆಸ್ ತನ್ನ ಹಿರಿಯ ಮುಖಂಡರಿಗೆ ಅವಮಾನ ಮಾಡುತ್ತಿದೆ
ಇಂದಿನ ನಕಲಿ ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟದ ವೀರನಿಗೆ ಅವಮಾನಿಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಇಂದಿನ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಅವಮಾನ ಎಂಬುದು ನೆನಪಿರಲಿ. ಇತಿಹಾಸ ತಿಳಿಯದೆ, ಮನಬಂದಂತೆ ಮಾತಾನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

Union Minister Pralhad Joshi Slams Congress Leaders Over Savarkar Flex Row

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾವರ್ಕರ್ ಬಗ್ಗೆ ಆಡಿದ ಮಾತುಗಳನ್ನ ಪ್ರಲ್ಹಾದ್ ಜೋಶಿ ತಮ್ಮ ಟ್ವೀಟ್ ಜೊತೆ ಟ್ಯಾಗ್ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿ ಹಿನ್ನೆಲೆಯಲ್ಲಿ ವಾಜಪೇಯಿ ಅವರ ಭಾಷಣದ ತುಣುಕನ್ನ ಟ್ಯಾಗ್ ಮಾಡಿರುವ ಪ್ರಲ್ಹಾದ್ ಜೋಶಿಯವರು, ವಾಜಪೇಯಿ, ಇಂದಿರಾ ಗಾಂಧಿಯಂತಹ ನಾಯಕರು, ಸಾವರ್ಕರ್ ಬಗ್ಗೆ ಹೊಂದಿದ್ದ ಗೌರವದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನೆನಪು ಮಾಡಿದ್ದಾರೆ.

ವಾಜಪೇಯಿ ವಿಡಿಯೋ ಹಂಚಿಕೊಂಡ ಪ್ರಲ್ಹಾದ್ ಜೋಶಿ

ಸಾವರ್ಕರ್ ಕುರಿತು ಪ್ರಖರ ಭಾಷಣ ಮಾಡಿದ್ದ ವಾಜಪೇಯಿ, ಸಾವರ್ಕರ್ ಅಂದ್ರೆ ಒಂದು ತತ್ವ, ಸಾವರ್ಕರ್ ಅಂದ್ರೆ ತರ್ಕ ಹೀಗೆ ಸಾವರ್ಕರ್ ಅವರಿಗೆ ನೀಡಬಹುದಾದ ಎಲ್ಲಾ ಉಪಮೆಗಳನ್ನೂ ನೀಡಿ ಗೌರವ ಸೂಚಿಸಿದ್ದರು.

"ಕವಿತೆ ಮತ್ತು ಕ್ರಾಂತಿ‌ ಒಟ್ಟಿಗೆ ಹೋಗಲಾರವು. ಆದರೆ ಸಾವರ್ಕರ್ ಅವರಲ್ಲಿದ್ದ ಕವಿ ಅತ್ಯಂತ ಉತ್ತುಂಗದಲ್ಲಿದ್ದ ಕಾರಣ ಅವರಿಂದ ಕವಿತೆ ಸೃಷ್ಟಿಸುವುದಕ್ಕೂ ಕ್ರಾಂತಿ ಹುಟ್ಟುಹಾಕುವುದಕ್ಕೂ ಸಾಧ್ಯವಾಯಿತು." ಎಂದು ವಾಜಪೇಯಿ ಹೇಳಿಕೆ ನೀಡಿದ್ದ ವೀಡಿಯೋವನ್ನು ಪ್ರಲ್ಹಾದ ಜೋಶಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

English summary
Pralhad Joshi, who hit back at the statement of opposition leader Siddaramaiah on the case of Veer Savarkar's flex being removed in Shimoga, questioned the stand of Congress leaders. Former CM Siddaramaiah questioned why Savarkar's flex should be placed in the Muslim area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X