ಬೆಂಗಳೂರು ಮೆಟ್ರೋಗೂ ಹಬ್ಬಿದ ಸಾವರ್ಕರ್ ಫೊಟೋ ವಿವಾದ
ಬೆಂಗಳೂರು, ಆಗಸ್ಟ್ 16: ಶಿವಮೊಗ್ಗದ ಬಳಿಕ ಈಗ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ವಿ ಡಿ ಸಾವರ್ಕರ್ ಅವರ ವರ್ಣಚಿತ್ರವನ್ನು ಪ್ರದರ್ಶಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ.
ಮೆಜೆಸ್ಟಿಕ್ ನಿಲ್ದಾಣದ ಪಶ್ಚಿಮ ಪ್ರವೇಶದ ಮೆಟ್ಟಿಲುಗಳ ಪಕ್ಕದಲ್ಲಿ ಹಾಕಲಾದ ವರ್ಣಚಿತ್ರದ ಮುಂಭಾಗದಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಉಧಮ್ ಸಿಂಗ್ ಮತ್ತು ಮೇಲಿನ ಎಡ ಮೂಲೆಯಲ್ಲಿ ಸಾವರ್ಕರ್ ಪೋಟೋ ಇದೆ. ಕುತೂಹಲವೆಂದರೆ ದಿನಗಟ್ಟಲೆ ಅದು ಗಮನಕ್ಕೆ ಬಂದಿಲ್ಲ. ಆದರೆ, ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಮೇಲಿನ ಗಲಾಟೆ ಹಿಂಸಾಚಾರಕ್ಕೆ ಕಾರಣವಾಗುತ್ತಿದ್ದಂತೆ ಸಾವರ್ಕರ್ ಫೋಟೋ ಹಾಕಿರುವ ನಿರ್ಧಾರವನ್ನು ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ : ಲಾಭದ ಹಳಿಗೆ ಮರಳಿದ ಬಿಎಂಆರ್‌ಸಿಎಲ್
ಸಾವರ್ಕರ್ ಫೋಟೋ ಹಾಕಿರುವ ಬಗ್ಗೆ ಬಿಎಂಆರ್‌ಸಿಎಲ್ ಅನಗತ್ಯವಾಗಿ ವಿವಾದ ಸೃಷ್ಟಿಸಿದೆ ಎಂದು ಕೆಲವು ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಿಗೆ ಬಿಎಂಆರ್‌ಸಿಎಲ್ ಪ್ರಾಮುಖ್ಯತೆ ನೀಡಬೇಕಿತ್ತು ಎಂದು ವಕೀಲ ಹಗೂ ಹೋರಾಟಗಾರ ವಿನಯ್ ಕೆ ಶ್ರೀನಿವಾಸ ಆರೋಪಿಸಿದರು.
ಕರ್ನಾಟಕದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಮೆಟ್ರೋದವರು ಮರೆತಿದ್ದಾರೆ. ಸಾವರ್ಕರ್ ಒಬ್ಬ ದೇಶ ವಿಭಜಕ ಎಂದು ತಿಳಿದಿರುವ ಮೆಟ್ರೋ ಅಧಿಕಾರಿಗಳು ಅವರ ಭಾವಚಿತ್ರವನ್ನು ಹಾಕುವುದು ಬೇಡವಾಗಿತ್ತು. ಕೆಆರ್ ಮಾರುಕಟ್ಟೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಸಾರ್ವಜನಿಕ ಕಲೆಗೆ ಬಿಎಂಆರ್‌ಸಿಎಲ್ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಮೆಟ್ರೋ ರೈಲುಗಳಲ್ಲಿ ಜನಜಾತ್ರೆ: ಜನಸಂದಣಿ ನಿಯಂತ್ರಿಸಲು ಸಿಬ್ಬಂದಿ ಹರಸಾಹಸ
ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಾಗುವುದಕ್ಕಿಂತ ಹೆಚ್ಚಾಗಿ ಯೋಜನೆಗಳತ್ತ ಗಮನ ಹರಿಸಬೇಕು. ಬಿಎಂಆರ್‌ಸಿಎಲ್ ಮೆಟ್ರೋ ಲೈನ್‌ಗಳನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆಯಾಗಿದೆ. ಅವರು ಅನೇಕ ಯೋಜನೆಗಳಲ್ಲಿ ವಿಶೇಷವಾಗಿ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಮಾರ್ಗಗಳನ್ನು ಜಾರಿಗೊಳಿಸಲು ಹಿಂದೆ ಬಿದ್ದಿದ್ದಾರೆ. ಅಲ್ಲದೆ ಅವರು ರಾಜಕೀಯ ನಾಯಕರ ಓಲೈಸಲು ಮುಂದಾಗಿದ್ದಾರೆ. ಇದು ಸಮಯ ಮತ್ತು ಸಂಪನ್ಮೂಲಗಳ ದೊಡ್ಡ ವ್ಯರ್ಥ ಎಂದು ಪ್ರಯಾಣಿಕ ವರುಣ್ ಆರೋಪಿಸಿದ್ದಾರೆ.

ಸರ್ಕಾರದ ಸೂಚನೆಗಳನ್ನು ಅನುಸರಿಸಿ ಆದೇಶ
ಈ ಬಗ್ಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಆದರೆ, ಈ ವರ್ಣಕಲೆ ಆರು ತಿಂಗಳ ಹಿಂದೆ ಚಿತ್ರಕಲಾ ಪರಿಷತ್‌ನಿಂದ ಪಡೆದ ಕಲಾಕೃತಿಗಳ ಭಾಗವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಬಿಎಂಆರ್‌ಸಿಎಲ್ ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ಭಾವಚಿತ್ರಗಳಿಗೆ ಆದೇಶವನ್ನು ನೀಡಿತ್ತು.

ನೂರಾರು ಪೇಂಟಿಂಗ್‌ಗಳನ್ನು ಖರೀದಿ
ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳ ಖರೀದಿಗೆ ಸುಮಾರು 16 ಲಕ್ಷ ರೂ. ಪಾವತಿಸಿದ್ದೇವೆ. ಮೆಟ್ರೊ ನಿಲ್ದಾಣಗಳಲ್ಲಿ ಬಳಸಲು ನೂರಾರು ಪೇಂಟಿಂಗ್‌ಗಳನ್ನು ಖರೀದಿಸಲಾಗಿದೆ. ಆದರೆ, ಚಿತ್ರಕಲಾ ಪರಿಷತ್ತಿನ ಕಲಾವಿದರಿಂದ ನಾವು ಯಾವ ನಾಯಕರನ್ನು ಚಿತ್ರೀಸಬೇಕೆಂದು ಆರಿಸಿ ಆಯ್ಕೆ ಮಾಡಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ಲಕ್ಷಿಸಿ ಮತ್ತು ಮುಂದುವರೆಯಲು ಕರೆ
ಪೇಂಟಿಂಗ್‌ಗಳ ರಾಜಕೀಯ ಪರಿಣಾಮಗಳ ಬಗ್ಗೆ ನಮಗೆ ತಿಳಿದಿಲ್ಲ. ಪೇಂಟಿಂಗ್ ಅನ್ನು ಪ್ರದರ್ಶಿಸುವ ಅವಶ್ಯಕತೆಯಿದೆ ಎಂದು ನಾವು ಎಂದಿಗೂ ಯೋಚಿಸಲಿಲ್ಲ. ಸಾವಿರಾರು ಪ್ರಯಾಣಿಕರಂತೆ ವಿವಾದವು ಸ್ಫೋಟಗೊಳ್ಳುವವರೆಗೂ ನಾವು ಪೇಂಟಿಂಗ್ ಅನ್ನು ಗಮನಿಸಿರಲಿಲ್ಲ. ಈಗ ಅದನ್ನು ತೆಗೆದುಹಾಕಿದರೂ ಇಲ್ಲ ಇಟ್ಟರೂ ವಿವಾದವನ್ನು ಹೆಚ್ಚಿಸುತ್ತದೆ. ನಾವು ಜನರಿಗೆ ಅದನ್ನು ನಿರ್ಲಕ್ಷಿಸಿ ಮತ್ತು ಮುಂದುವರೆಯಲು ಮಾತ್ರ ಕರೆ ನೀಡಬಹುದು ಎಂದು ಅವರು ಹೇಳಿದರು.

ಮತ್ತೆ ಮುಸ್ಲಿಮರ ಬಗ್ಗೆ ಈಶ್ವರಪ್ಪ ಕಿಡಿ
ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಸಾವರ್ಕರ್ ಪೋಟೋ ಹಾಕಿದ್ದರಿಂದ ಗಲಭೆ ನಡೆದು ವ್ಯಕ್ತಿಯೊಬ್ಬರಿಗೆ ಚಾಕು ಇರಿತವಾಗಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಯಾಗಿದ್ದು, ಸಹಜವಾಗಿ ರಾಜಕೀಯ ಕಚ್ಚಾಟಕ್ಕೂ ಕಾರಣವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಕೆಸರೆರಚಾಟಕ್ಕೂ ಇದು ಕಾರಣವಾಗಿದೆ. ವಿವಾದದ ಮಾತುಗಳಿಗೆ ಹೆಸರುವಾಸಿಯಾಗಿರುವ ಮಾಜಿ ಸಚಿವ ಈಶ್ವರಪ್ಪ ಮತ್ತೆ ಮುಸ್ಲಿಮರ ಬಗ್ಗೆ ಕಿಡಿಕಾರಿದ್ದಾರೆ.