• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೇರಾ ಕಾಯ್ದೆಯ ಅಸಮರ್ಪಕ ಅನುಷ್ಠಾನದ ವಿರುದ್ಧ ಮನೆ ಖರೀದಿದಾರರ ಪ್ರತಿಭಟನೆ

|

ಬೆಂಗಳೂರು, ಮೇ 18: ಕರ್ನಾಟಕದ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ಯ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಮನೆ ಖರೀದಿದಾರರು ಶನಿವಾರ ಟೌನ್‌ಹಾಲ್‌ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು.

ಕರ್ನಾಟಕದಲ್ಲಿ ರೇರಾ ಕಾಯ್ದೆಯ ಅಸಮರ್ಪಕ ಅನುಷ್ಠಾನದ ವಿರುದ್ಧ ಧ್ವನಿ ಎತ್ತುವುದು ಎಲ್ಲರ ಕರ್ತವ್ಯವಾಗಿದೆ. ಭ್ರಷ್ಟ ಬಿಲ್ಡರ್ಸ್ , ಡೆವಲಪರ್ಸ್ ಪರ ಇರುವ ಕಾಯ್ದೆಯನ್ನು ಖಂಡಿಸಿದ್ದಾರೆ. ಹಾಗೆಯೇ ರೇರಾ ತೀರ್ಪಿನ ರಿಕವರಿ ವಾರೆಂಟ್‌ಗಳ ಮೇಲೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಆಲಸ್ಯವನ್ನು ವಿರೋಧಿಸಿ ಪ್ರತಿಭಟಿಸಿದರು.

ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ

ರೇರಾ ಕಾಯ್ದೆ ಕಾರಿಗೆ ಅನ್ವಯವಾಗುತ್ತದೆ: ಬಡಾವಣೆಯಾಗಿದ್ದಲ್ಲಿ ರಸ್ತೆ,ಬೀದಿ ದೀಪ, ಮೂಲಸೌಕರ್ಯಗಳನ್ನು ನಿರ್ವಹಣೆಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು. ಅಪಾರ್ಟ್‌ಮೆಂಟ್ ಅಥವಾ ಬಡಾವಣೆ ನಿರ್ಮಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಯೋಜನೆಯ ಅನ್ವಯವೇ ನಿರ್ಮಾಣ ಮಾಡಬೇಕು. ಶೇ. 60ರಷ್ಟು ನಿವೇಶನ, ಫ್ಲ್ಯಾಟ್‌ಗಳನ್ನು ಕ್ರಯಪತ್ರ ಮಾಡಿ ಕೊಡದೆ ಇದ್ದಲ್ಲಿ ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ಸ್ವಾಧೀನ ಪತ್ರಕ್ಕಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರಬೇಕು.

ಪ್ರತಿಭಟನೆಯಲ್ಲಿ ನೂರಾರು ಗ್ರಾಹಕರು ಪಾಲ್ಗೊಂಡಿದ್ದರು. ಪೀಪಲ್ ಕಲೆಕ್ಟೀವ್ ಎಫರ್ಟ್ಸ್ ಫೋರಮ್‌ನ ಕಾರ್ಯದರ್ಶಿ ಎಂಎಸ್ ಶಂಕರ್ ಅವರು ಹೇಳುವ ಪ್ರಕಾರ, ರೇರಾ ಕಾಯ್ದೆಯು ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ. ಹಾಗೆಯೇ ಅದರಲ್ಲಿ ಪಾರದರ್ಶಕತೆಯೂ ಇಲ್ಲ ಎಂದಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ರೇರಾ ಕಾಯ್ದೆ ಕುರಿತು ಒಂದೇ ಒಂದು ಜಾಗೃತಿ ಅಭಿಯಾನವನ್ನು ಕೂಡ ಕರ್ನಾಟಕ ರೇರಾ ಆಯೋಜಿಸಿಲ್ಲ. ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ, ಸಬ್‌ ರಿಜಿಸ್ಟ್ರಾರ್‌ಗಳು, ಕೋ-ಆಪರೇಟಿವ್ ಸೊಸೈಟಿಗಳಿಗೆ ತರಬೇತಿಯನ್ನು ನೀಡಬೇಕಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ರಾಜ್ಯದಲ್ಲಿ ರೇರಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ಇರುವುದರಿಂದ ಮನೆ ಕೊಂಡುಕೊಳ್ಳಲು ಜನರು ಮುಂದಾಗುತ್ತಿಲ್ಲ, ಇದರಿಂದ ಉದ್ಯಮಕ್ಕೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ನ್ಯಾಯಾಲಯಗಳ ಆದೇಶದಂತೆ ರೇರಾ ಕಾಯ್ದೆಯನ್ನು ಅನುಷ್ಠಾನ ಮಾಡಬೇಕು ಎಂದು ಸಚಿವ ಯುಟಿ ಖಾದರ್ ಅವರಿಗೆ ಬಿಲ್ಡರ್‌ಗಳ ನಿಯೋಗ ಮನವಿ ಮಾಡಿದೆ.

ಇದಲ್ಲದೆ ರೇರಾ ಕಾಯ್ದೆಯನ್ನು ಉಲ್ಲಂಘಿಸುವಂತಹ ಬಿಲ್ಡರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಕೂಡ ನಿಯಮ ರೂಪಿಸಬೇಕು ಹಾಗೆಯೇ ರೇರಾ ಪ್ರಾಧಿಕಾರವು ಧನಾತ್ಮಕವಾಗಿ ಕಾರ್ಯೋನ್ಮುಖವಾಗಬೇಕೆಂದು ನಿಯೋಗವು ಸಚಿವರಿಗೆ ಮನವಿ ಮಾಡಿದೆ.

ನಿವೇಶನ, ಫ್ಲ್ಯಾಟ್ ಖರೀದಿಸುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ ರೇರಾ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ವನ್ನು ಜುಲೈನಲ್ಲಿ ಸರ್ಕಾರ ಪ್ರಕಟಿಸಿತ್ತು.

ರೇರಾ ಕಾಯ್ದೆ ಜಾರಿಯಿಂದ ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ, ಲೂಟಿಗೆ ಕಡಿವಾಣ ಬೀಳಲಿದೆ. ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಅವರನ್ನು ರೇರಾ ಕಾಯ್ದೆ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಸರ್ಕಾರ ನೇಮಕಗೊಳಿಸಲು ಆದೇಶ ಹೊರಡಿಸಿತ್ತು.

ಇನ್ನು ರೇರಾ ವೆಬ್​ ಪೋರ್ಟಲ್ ಆರಂಭಿಸಲಾಗಿದ್ದು, ಈ ವೆಬ್​ ಪೋರ್ಟಲ್​'ನಲ್ಲಿ ರೇರಾ ಯೋಜನೆಗಳು,ನಿವೇಶನ ನೋಂದಣಿ, ಎಸ್ಟೇಟ್ ಏಜೆಂಟರ್ ಬಗ್ಗೆ ದೂರು ಸಲ್ಲಿಸಲು ಅವಕಾಶವಿದೆ. ಆದರೆ ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಬಿಲ್ಡರ್‌ಗಳು ಮನವಿ ಮಾಡಿದ್ದಾರೆ.

English summary
Homebuyers duped by unscrupulous builders assemble at Town Hall,Bengaluru to protest non-implementation of strong Real Estate Regulatory Authority rules in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X