ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೃತಿಯ ಲಿಂಗಿಗೂ ಟಿಕೆಟ್ ಕೊಟ್ಟ ಎಂಇಪಿ: 149 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಎಂಇಪಿ ಅಭ್ಯರ್ಥಿಗಳು ಬಲಿಷ್ಠ ರಾಗಿದ್ದು ಈ ಬಾರಿ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಖ್ ವ್ಯಕ್ತಪಡಿಸಿದ್ದಾರೆ.

ಖಾಸಗಿ ಹೋಟೆಲ್‌ವೊಂದರಲ್ಲಿ 20 ಜಿಲ್ಲೆಗಳ 149 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಮೊದಲ ಪಟ್ಟಿಯಲ್ಲಿ ತೃತೀಯ ಲಿಂಗಿಗೂ ಒಂದು ಸ್ಥಾನವನ್ನು ನೀಡಲಾಗಿದೆ.

ಎಂಇಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಯೋಜನೆಎಂಇಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಯೋಜನೆ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾತಿ, ಸಮುದಾಯ, ಧರ್ಮದ ಆಧಾರ ಮೇಲೆ ಟಿಕೆಟ್ ಹಂಚಿಕೆ ಮಾಡಿಲ್ಲ ಲಂಚ ಮತ್ತು ವಸೂಲಿ ಬಾಜಿ, ಮಧ್ಯವರ್ತಿಗಳ ಹಾವಳಿಗೆ ಅವಕಾಶ ಕೊಟ್ಟಿಲ್ಲ ಸಮೀಕ್ಷೆ ಮಾಡಿಸಿ, ಪಾರದರ್ಶಕ ವಾಗಿ ಟಿಕೆಟ್ ನೀಡಲಾಗಿದೆ ಎಂದರು.

MEP announces 149 candidates including a transgender

ಕೇವಲ 3 ತಿಂಗಳ ಅವಧಿಯಲ್ಲೇ ಎಂಇಪಿ ರಾಜ್ಯದ ಉದ್ದಗಲಕ್ಕೂ ಹೊಸ ಸಂಚಲನ ಮೂಡಿಸಿದ್ದು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿದೆ. ಭಾರತ ಬದಲಾಗಬೇಕು, ರಾಜಕೀಯದಲ್ಲಿ ಹೊಸ ನೀರು ಹರಿಯಬೇಕು. ದೇಶ ಎಂದೂ ಕೋಮುಜ್ವಾಲೆಯಲ್ಲಿ ಸಿಕ್ಕಿ ನರಳುವಂತಾಗಬಾರದು ಎಂದು ಹೇಳಿದರು.

ಜನರಿಂದ ನಾಯಕರಾಗುತ್ತಾರೆ ನಮ್ಮ ವಿರುದ್ಧ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಭಾರೀ ಹಣವಂತರಾಗಿದ್ದರೂ ಜನ ನಮ್ಮ ಸರಳತೆ, ಕಾರ್ಯಕ್ರಮ ನೋಡಿ ಎಂಇಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಜನ ಬಲದ ಮುಂದೆ ಹಣಬಲ ನಡೆಯುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ, ಗದಗ, ಧಾರವಾಡ, ಉತ್ತರಕನ್ನಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಸೇರಿದಂತೆ ಇಪ್ಪತ್ತು ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

MEP announces 149 candidates including a transgender

ಉಳಿದ 10ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿ ನಾಳೆ ಪ್ರಕಟವಾಗಲಿದೆ, . ಈಗ ಬಿಡುಗಡೆ ಮಾಡಿರುವ ಪಟ್ಟಿ ಅಂತಿಮವಾಗಿದ್ದು ಬದಲಾವಣೆಗೆ ಅವಕಾಶ ಇಲ್ಲ, ಒಂದು ವೇಳೆ ಅಪರಾಧ ಹಿನ್ನೆಲೆ ಪ್ರಕರಣಗಳು ಸಾಬೀತು ಆದಲ್ಲಿ ಅಂತಹ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಒಟ್ಟಾರೆ 224 ಕ್ಷೇತ್ರಗಳ ಪೈಕಿ ಮಹಿಳೆಯರಿಗೆ 40, ದಲಿತರಿಗೆ 51, ರೈತರಿಗೆ 7 ಹಾಗೂ ತೃತೀಯ ಲಿಂಗಿಗೆ ಒಂದು ಟಿಕೆಟ್ ನೀಡಲಾಗುತ್ತಿದೆ ಎಂದು ವಿವರಿಸಿದರು.

English summary
Mahila Empower Party chief Dr Nowheera Sheikh has announced candidates for 149 constituencies of state assembly elections. The party has given 40 tickets to women, 51 dalits, 7 farmers also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X