FDA ಪ್ರಶ್ನೆ ಪತ್ರಿಕೆ ಲೀಕ್ : ದಾರಿದೀಪ ಕೋಚಿಂಗ್ ಸೆಂಟರ್ ಮಾಲೀಕ ಸೆರೆ
ಬೆಂಗಳೂರು, ಫೆಬ್ರವರಿ 17: ಕೆಪಿಎಸ್ ಸಿ FDA ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿದೆ ಒಂದು ರೋಚಕ ಲವ್ ಸ್ಟೋರಿ!
ಶಿವಲಿಂಗ ಪಾಟೀಲ್ ಬಂಧಿತ ಆರೋಪಿ. ಬೆಳಗಾವಿ ಮೂಲದ ಈತ ದಾರಿದೀಪ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ. ವರ್ಷದ ಹಿಂದೆ ಅದನ್ನು ಕ್ಲೋಸ್ ಮಾಡಿದ್ದ. ಲೀಕ್ ಆದ ಪ್ರಶ್ನೆ ಪತ್ರಿಕೆ ರಾಚಪ್ಪನ ಕೈ ಸೇರಿದ್ದೇ ತಡ ಇದೇ ಶಿವಲಿಂಗ ಪಾಟೀಲ್ ಸಂಪರ್ಕಿಸಿದ್ದ.
ಕೋಚಿಂಗ್ ಸೆಂಟರ್ ಮೂಲಕ ವಿದ್ಯಾರ್ಥಿಗಳ ಸಂಪರ್ಕ ಹೊಂದಿದ್ದ ಶಿವಲಿಂಗ ಪಾಟೀಲ್ ಎಲ್ಲರನ್ನೂ ಸಂಪರ್ಕಿಸಿ ಹಣಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ್ದ. ಲಕ್ಷಾಂತರ ಹಣವನ್ನು ಸಂಗ್ರಹಿಸಿದ್ದ.
ಬಂಧಿತ ರಾಚಪ್ಪ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಶಿವಲಿಂಗ ಪಾಟೀಲ್ ನನ್ನು ಬಂಧಿಸಲಾಗಿದೆ. ಇದರೊಂದಿಗೆ ಕೆಪಿಎಸ್ ಸಿ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 26 ಕ್ಕೇರಿದೆ. ಶಿವಲಿಂಗ ಪಾಟೀಲ್ ಬಳಿ ಪ್ರಶ್ನೆ ಪತ್ರಿಕೆ ಪಡೆದ ಮತ್ತಷ್ಟು ಮಂದಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.