ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಗೆಲುವಿನ ರಹಸ್ಯ ಬಿಚ್ಚಿಟ್ಟ ವಕ್ತಾರ ಪ್ರಕಾಶ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗದ್ದುಗೆ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸೋಲಿನ ಕಾರಣಗಳು ಸ್ಪಷ್ಟವಾಗುತ್ತಿದೆ. ಜೊತೆಗೆ ಬಿಜೆಪಿಗೆ ಮತದಾರ ಪ್ರಭು ಮತ್ತೊಮ್ಮೆ ಮನ್ನಣೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ಉತ್ತರ ನೀಡಿದ್ದಾರೆ.

ಹಾಗೆ ನೋಡಿದರೆ ಬಿಜೆಪಿ ಗೆಲುವಿನ ಹಿಂದೆ ಅಂಥಾ ರಹಸ್ಯವೇನು ಅಡಗಿಲ್ಲ. ಮತದಾರರಲ್ಲಿ ಹೆಚ್ಚಿನ ಗೊಂದಲ ಮೂಡಿಸದಂತೆ ನಮ್ಮ ತಪ್ಪು ನೆಪ್ಪುಗಳನ್ನು ಅವರ ಮುಂದಿಟ್ಟೆವು. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳಲ್ಲಿ ಹೆಚ್ಚಿನ ಪಾಲು ನಗರದ ಮೂಲ ಸೌಕರ್ಯ ಅಭಿವೃದ್ಧಿಯತ್ತ ಸುತ್ತಾ ಹೆಣೆಯಲಾಗಿದೆ.[ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗ್ರೆಸ್ಸಿಗೆ ಮುಖಭಂಗ]

ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ

ಬಿಬಿಎಂಪಿಯ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ಹಾಗೂ ವೈಜ್ಞಾನಿಕ ರೀತಿ ಕ್ರಮದ ಬಗ್ಗೆ ಜನರಿಗೆ ಭರವಸೆ ಮೂಡಿದೆ. ಲೋಕಸಭೆ, ಅಸೆಂಬ್ಲಿ ಚುನಾವಣೆ ನಂತರ ದಕ್ಷಿಣ ಭಾರತದಲ್ಲಿ 'ಮೋದಿ ಅಲೆ' ಇಲ್ಲ ಎಂದು ಅಣಕವಾಡಿದವರಿಗೆ ಈ ಫಲಿತಾಂಶ ತಕ್ಕ ಉತ್ತರ ನೀಡಿದೆ ಎಂದು ಪ್ರಕಾಶ್ ಹೇಳಿದರು. ಇನ್ನಷ್ಟು ಪ್ರಶ್ನೋತ್ತರ ಮುಂದಿದೆ.

ಆಡಳಿತಾರೂಢ ಪಕ್ಷವನ್ನು ಜನತೆ ತಿರಸ್ಕರಿದ್ದೇಕೆ?

ಆಡಳಿತಾರೂಢ ಪಕ್ಷವನ್ನು ಜನತೆ ತಿರಸ್ಕರಿದ್ದೇಕೆ?

ಕಾಂಗ್ರೆಸ್ ಪಕ್ಷ ಸತತವಾಗಿ ಎರಡು ವರ್ಷದಿಂದ ನೀಡಿರುವ ದುರಾಳಡಳಿತದಿಂದ ಬೇಸತ್ತಿದ್ದಾರೆ.ಈಗ ಬಂದಿರುವ ಫಲಿತಾಂಶಕ್ಕೆ ನಮ್ಮ ಕಾರ್ಪೊರೇಟರ್ ಗಳ ಕಾರ್ಯವೂ ಕಾರಣ. ಸಿದ್ದರಾಮಯ್ಯ ಸರ್ಕಾರ ಬೆಂಗಳೂರನ್ನು ಒಡೆಯಲು ಯತ್ನಿಸಿದ್ದು ಅವರಿಗೆ ಮುಳುವಾಯಿತು. ಮನೆ ಒಡೆಯುವುದನ್ನು ಯಾರು ಒಪ್ಪುವುದಿಲ್ಲ.

 ಬಿಜೆಪಿಗೆ ಈ ಪರಿ ಜಯದ ನಿರೀಕ್ಷೆ ಇತ್ತಾ?

ಬಿಜೆಪಿಗೆ ಈ ಪರಿ ಜಯದ ನಿರೀಕ್ಷೆ ಇತ್ತಾ?

2010ರಲ್ಲಿ ನಮ್ಮ ಕಾರ್ಪೊರೇಟರ್ ಗಳ ಕಾರ್ಯವೈಖರಿ ಹಾಗೂ ಸಮಸ್ಯೆಗಳತ್ತ ಕೈಗೊಂಡ ಕ್ರಮಗಳು ಇಂದಿಗೂ ಸಾರ್ವಜನಿಕರಿಗೆ ನೆನಪಿದೆ ಹಾಗೂ ಈ ಕಾರ್ಯಗಳಿಗೆ ಸಿದ್ದರಾಮಯ್ಯ ಸರ್ಕಾರ ತಂದ ವಿಘ್ನಗಳು ಹೇಗೆ ಮಾರಕವಾಯಿತು ಎಂಬುದು ಜನರಿಗೆ ಅರಿವಾಗಿದೆ. ಹೀಗಾಗಿ ಈ ಬಾರಿ ಜಯದ ನಿರೀಕ್ಷೆ ಇತ್ತು.

ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕುತ್ತುಂಟಾಗುತ್ತದೆಯೆ?

ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕುತ್ತುಂಟಾಗುತ್ತದೆಯೆ?

ಸಿದ್ದರಾಮಯ್ಯ ಅವರ ಸ್ಥಾನದ ಬಗ್ಗೆ ಕಾಂಗ್ರೆಸ್ ಸೂಕ್ತ ನಿರ್ಧಾರ ಕೈಗೊಳ್ಳಲಿ. ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಅವರ ಆಂತರಿಕ ವಿಚಾರ. ಕಾಂಗ್ರೆಸ್ ಸೋಲು, ಸಿದ್ದರಾಮಯ್ಯ ಕುರ್ಚಿ ಬಗ್ಗೆ ವಿಚಾರ ಬೇಡ.

ಬಿಬಿಎಂಪಿಗೆ ಫಂಡ್ ಸಮಸ್ಯೆಯಾಗುವುದಿಲ್ಲವೇ?

ಬಿಬಿಎಂಪಿಗೆ ಫಂಡ್ ಸಮಸ್ಯೆಯಾಗುವುದಿಲ್ಲವೇ?

ಹಾಗೇನಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಅನುದಾನ ಹಾಗೂ ಯೋಜನೆಗಳಿಗೆ ಸಹಕಾರ ನೀಡಿದರೆ ಜನತೆ ಪಕ್ಷಾತೀತವಾಗಿ ಎಲ್ಲರನ್ನು ಹರಸುತ್ತಾರೆ. ಇಲ್ಲದಿದ್ದರೆ ಎಲ್ಲಾ ಪಕ್ಷಕ್ಕೂ ತೊಂದರೆ ತಪ್ಪಿದ್ದಲ್ಲ. ಬೆಂಗಳೂರಿನಲ್ಲಿ ನಮ್ಮ ಮೂವರು ಸಂಸದರಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ಮುಂದಿನ ಮೇಯರ್ ಯಾರಾಗಬಹುದು?

ಮುಂದಿನ ಮೇಯರ್ ಯಾರಾಗಬಹುದು?

ಮೀಸಲಾತಿ ಪ್ರಕಟವಾದ ಮೇಲೆ ಮೇಯರ್ ಗೆ ಯಾರು ಸೂಕ್ತ ಎಂಬುದನ್ನು ಅನುಭವದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈಗಲೇ ಯಾರ ಹೆಸರನ್ನು ಸೂಚಿಸಲು ಸಾಧ್ಯವಿಲ್ಲ. ಸೂಕ್ತ ಸಮಯಕ್ಕೆ ಸೂಕ್ತ ನಿಧಾರ ಕೈಗೊಳ್ಳಲಾಗುತ್ತದೆ.

English summary
The BJP is celebrating in Bengaluru after winning the prestigious BBMP elections. We will do a good job like we did earlier says, Prakash Sesharaghavachar, the spokesperson of the BJP. In this interview with OneIndia, Sesharaghavachar says that the people of Bengaluru have once again restored their faith in Narendra Modi and BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X