ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ ಹೈಕೋರ್ಟ್ ತಡೆ

|
Google Oneindia Kannada News

ಬೆಂಗಳೂರು, ಮಾರ್ಚ್ 14: ವಿವಾದಿತ ಎಲಿವೇಟೆಡ್ ಕಾರಿಡಾರ್ ಯೋಜನೆ ಕಾಮಗಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ವಿವಾದಿತ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ತಡೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಿಟಿಜನ್ಸ್ ಆಕ್ಷನ್ ಫೋರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಾರಾಯಣಸ್ವಾಮಿ, ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ಪೀಠ ಸೂಚನೆ ನೀಡಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ತರಾತುರಿಯಲ್ಲಿ ಟೆಂಡರ್ ಕರೆದು ಈ ಟೆಂಡರ್‌ನ್ನು ಹೈಕೋರ್ಟ್ ತಡೆ ಹಿಡಿದಿದೆ. ತೀರ್ಪನ್ನು ಮಾರ್ಚ್ 19ಕ್ಕೆ ಮುಂದೂಡಿದೆ. ಎರಡನೇ ಮೂರು ಭಾಗದಷ್ಟು ಚುನಾಯಿತ ಕಾರ್ಪೊರೇಟರ್‌ಗಳು, ಮೆಟ್ರೋ ಪೊಲಿಟನ್ ಪ್ಲಾನಿಂಗ್ ಕಮಿಟಿ ಸಮ್ಮುಖದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಹಾಗಾಗಿ ಹೈಕೋರ್ಟ್ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ತಡೆ ನೀಡಿದೆ.

HC asks government to halt elevated corridor project

ಲಿವೇಟೆಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಟೆಂಡರ್ ಕರೆಯಲು ಕೆಆರ್‌ಸಿಡಿಎಲ್ ಒಲವು ತೋರಿದೆ. ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ವ್ಯಾಪ್ತಿಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯಡಿ ಲೂಪ್ ಮಾದರಿಯಲ್ಲಿ ಮೇಲು ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.

 ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ

ಉತ್ತರ-ದಕ್ಷಿಣ ಕಾರಿಡಾರ್ ಮಾರ್ಗದಲ್ಲಿನ ಸಿಬಿಡಿ ಪ್ರದೇಶದಲ್ಲಿನ ವಾಣಿಜ್ಯ ಚಟುವಟಿಕೆಯಿಂದಾಗಿ ಸದಾ ಟ್ರಾಫಿಕ್ ಪ್ರಮಾಣ ಹೆಚ್ಚಿರುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಸಂಚಾರ ದಟ್ಟಣೆಯಲ್ಲೇ ಕಾಲ ಕಳೆಯಬೇಕಿದೆ. ವಸತಿ ಸಮುಚ್ಚಯವಿರುವ ಪ್ರದೇಶವಾಗಿರುವ ಕಾರಣ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಂಚಾರ ದಟ್ಟಣೆಯಾಗುವುದನ್ನು ಗಮನಿಸಿ ಕೆಲ ಮುಖ್ಯ ರಸ್ತೆಗಳನ್ನು ಲೂಪ್ ಮಾದರಿಯ ಮೇಲು ರಸ್ತೆಗೆ ಸಂಪರ್ಕಿಸಲಾಗುತ್ತದೆ.

ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ

ಈಗಾಗಲೇ ಮೊದಲ ಹಂತದ ಕಾರಿಡಾರ್ ಗೆ ಮೂರು ಪ್ಯಾಕೇಜ್‌ನಡಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಲೂಪ್ ಮಾದರಿಯ ಮೇಲು ರಸ್ತೆಯನ್ನು ಸೇರ್ಪಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರುವ ಕೆಆರ್‌ಡಿಸಿಎಲ್ ಹೊಂದಿದೆ.

English summary
The controversial elevated corridor project in Bengaluru for which the Karnataka Road Development Corporation Limited had hurriedly floated tenders, has been halted in its tracks by the Karnataka High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X