• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹ್ಯಾಕರ್ ಶ್ರೀಕಿ ಆಶೀರ್ವಾದ : ರೈಸ್ ಮಿಲ್ ನಡೆಸುತ್ತಿದ್ದವ ರಾತ್ರೋ ರಾತ್ರಿ ಮಿಲೇನಿಯರ್ ಆಗಿಬಿಟ್ಟ !

|

ಬೆಂಗಳೂರು, ಜನವರಿ 20: ಆತ ಕೋಲ್ಕತಾ ಮೂಲದ ಯುವಕ. ಬದುಕಿನ ಬಂಡಿ ನಡೆಸಲಿಕ್ಕೆ ರೈಸ್ ಮಿಲ್ ಇಟ್ಟುಕೊಂಡಿದ್ದ. ಮಿಲ್ ನಲ್ಲಿ ಲಾಸ್‌ ಆಗಿ ಬೀದಿಗೆ ಬಿದ್ದಿದ್ದವ ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಮಿಲೇನಿಯರ್ ಆಗಿದ್ದ ! ಮಿಲ್ ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡು ಬೀದಿಗೆ ಬಿದ್ದದ್ದ ಯುವಕ ಕೋಟ್ಯಾಧಿಪತಿ ಆಗಿರುವ ಹಿಂದೆ ರೋಚಕ ಸಂಗತಿ ಇದೆ. ಅದು ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಕತೆ. ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದ ಆರೋಪಿ ಶ್ರೀಕಿಯ ಬಿಟ್ ಕಾಯಿನ್ ವ್ಯವಹಾರದ ಸಂಗತಿ ಸಿಸಿಬಿ ತನಿಖೆಯಲ್ಲಿ ಹೊರ ಬಿದ್ದಿದೆ.

ರೈಸ್ ಮಿಲ್ ನಡೆಸುತ್ತಿದ್ದ ಕೋಲ್ಕತಾ ಮೂಲದ ರಾಬಿನ್ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದೇ ಹ್ಯಾಕರ್ ಶ್ರೀಕಿಯಿಂದ. ರೈಸ್ ಮಿಲ್ ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ರಾಬಿನ್ ಬಿಟ್ ಕಾಯಿನ್ ವ್ಯವಹಾರಕ್ಕೆ ಇಳಿದಿದ್ದ. ಬಿಟ್ ಕಾಯಿನ್ ವಹಿವಾಟಿನ ಭಾಗವಾಗಿ ಹ್ಯಾಕರ್ ಶ್ರೀಕೃಷ್ಣ ಪರಿಚಯವಾಗಿದ್ದ. ಬಿಟ್ ಕಾಯಿನ್ ಜಂಕ್ಷನ್ ಗಳನ್ನು ಬ್ಲಾಕ್ ಮಾಡುವಲ್ಲಿ ನಿಪುಣತೆ ಸಾಧಿಸಿದ್ದ ಶ್ರೀಕಿ ಹ್ಯಾಕ್ ಮಾಡಿ ಸಂಪಾದಿಸುತ್ತಿದ್ದ ಬಿಟ್ ಕಾಯಿನ್ ಎಕ್ಸ್‌ ಚೇಂಜ್ ಮಾಡಲಿಕ್ಕೆ ಪರದಾಡುತ್ತಿದ್ದ. ಬಿಟ್ ಕಾಯಿನ್ ಎಕ್ಸ್‌ ಚೇಂಜ್ ಕೆಲಸವನ್ನು ರಾಬಿನ್ ಮಾಡುತ್ತಿದ್ದ. ಹೀಗೆ ರಾಬಿನ್ ಪರಿಚಯದ ಬಳಿಕ ಶ್ರೀಕಿ ಹ್ಯಾಕ್ ಮಾಡುತ್ತಿದ್ದ ಬಿಟ್ ಕಾಯಿನ್ ಕರೆನ್ಸಿಯನ್ನು ಆತನ ಮೂಲಕವೇ ಬದಲಾವಣೆ ಮಾಡಿಸುತ್ತಿದ್ದ. ಬಿಟ್ಟಿಯಾಗಿ ಹ್ಯಾಕ್ ಮಾಡಿ ಗಳಿಸುತ್ತಿದ್ದ ಬಿಟ್ ಕಾಯಿನ್ ನ್ನು ಬದಲಾವಣೆ ಮಾಡಿಸಿಕೊಟ್ಟಿದ್ದಕ್ಕಾಗಿ ಲಕ್ಷಾಂತರ ರೂಪಾಯಿ ಕಮೀಷನ್ ರಾಬಿನ್ ಗೆ ಕೊಡುತ್ತಿದ್ದ.

   ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

   ಹೀಗೆ ಬಿಟ್ ಕಾಯಿನ್ ಎಕ್ಸ್ ಚೇಂಜ್ ವ್ಯವಹಾರ ನಡೆಸಿದ ರಾಬಿನ್ ರಾತ್ರೋ ರಾತ್ರಿ ಕೋಟ್ಯಾಧೀಶ್ವರನಾಗಿದ್ದ. ರೈಸ್ ಮಿಲ್ ವಹಿವಾಟಿನ ಹೆಸರಿನಲ್ಲಿ ಅಕ್ರಮವಾಗಿ ಕೋಟಿಗಳನ್ನು ಗಳಿಸಿದ್ದ. ರಾಬಿನ್ ನೋಡ ನೋಡುತ್ತಿದ್ದಂತೆ ಶ್ರೀಮಂತನಾಗಿದ್ದನ್ನು ನೋಡಿ ಎಲ್ಲರೂ ಬೆರಗಾಗಿದ್ದರು. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶ್ರೀಕಿ, ಅಲಿಯಾಸ್ ಶ್ರೀಕೃಷ್ಣನ ವಿಚಾರಣೆ ವೇಳೆ ಇದನ್ನು ಬಾಯಿಬಿಟ್ಟಿದ್ದಾನೆ. ಶ್ರೀಕಿ ಮೂಲಕವೇ ಕರೆ ಮಾಡಿಸಿ ಖಾಸಗಿ ಹೋಟೆಲ್ ಗೆ ರಾಬಿನ್ ನನ್ನು ಕರೆಸಿಕೊಂಡು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಬಿಟ್ ಕಾಯಿನ್ ವಹಿವಾಟು ನಡೆಸಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳು ಲಭ್ಯವಾಗಿವೆ. ಸಿಸಿಬಿ ವಶದಲ್ಲಿರುವ ರಾಬಿನ್ ನೀಡುವ ಮಾಹಿತಿ ಮೇರೆಗೆ ಶ್ರೀಕಿಯ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.

   English summary
   Bengaluru : Hacker Sriki alias Srinivas taking help from rice mill owner to exchange Bitcoins, he became millionaire.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X