Get Updates
Get notified of breaking news, exclusive insights, and must-see stories!

ಆರ್‌ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್‌ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್

IPL 2026 RCB: ಐಪಿಎಲ್ 2026 ಹಬ್ಬ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್ ತಂಡಗಳು ಸೆಣಸಲಿವೆ. ಇನ್ನೂ ಆರ್‌ಸಿಬಿ ಈ ಬಾರಿಯೂ ಭರ್ಜರಿ ಪ್ರದರ್ಶನ ನೀಡಿ ಮತ್ತೊಮ್ಮೆ ಟ್ರೋಫಿ ಗೆಲ್ಲಲ್ಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಆರ್‌.ಅಶ್ವಿನ್ ಅವರು, ಆರ್‌ಸಿಬಿ ತಂಡದ ಗೆಲುವಿನ ಸಾಧ್ಯತೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ತಂಡವು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲು ಬೇಕಾದ ಎಲ್ಲಾ ರೀತಿಯ ಸಾಮರ್ಥ್ಯ ಮತ್ತು ಬಲಿಷ್ಠ ಆಟಗಾರರನ್ನು ಹೊಂದಿದೆ ಎಂದು ಅಶ್ವಿನ್ ಹೇಳಿದ್ದಾರೆ. ಪ್ರಸ್ತುತ ಇರುವ ತಂಡವನ್ನ ಗಮನಿಸಿದರೆ, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ravichandran Ashwin Backs RCB for IPL 2026 Glory Calls Hazlewood Absence a Blessing in Disguise

ಆರ್‌ಸಿಬಿ ತಂಡದ ಬಗ್ಗೆ ಆರ್‌.ಅಶ್ವಿನ್ ಮೆಚ್ಚುಗೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, "ಈಗಿರುವ ತಂಡದೊಂದಿಗೆ ಆರ್‌ಸಿಬಿ ಮುಂದಿನ ಎರಡು ವರ್ಷಗಳಲ್ಲಿ ಮತ್ತೊಂದು ಪ್ರಶಸ್ತಿಯನ್ನು ಗೆಲ್ಲಬಹುದು. ಐಪಿಎಲ್ ಗೆಲ್ಲುವುದು ಅಷ್ಟು ಸುಲಭವಲ್ಲ, ಆದರೆ ಅವರು ಹೊಂದಿರುವ ಭದ್ರ ಬುನಾದಿ ಮತ್ತು ಒಬ್ಬ ಆಟಗಾರನಿಗೆ ಪರ್ಯಾಯವಾಗಿ ಅಷ್ಟೇ ಸಮರ್ಥರಾದ ಆಟಗಾರರನ್ನು ಹೊಂದಿರುವುದು ಗಮನಾರ್ಹ. ತಂಡದ ಸಂಯೋಜನೆಯಲ್ಲಿದ್ದ ಲೋಪದೋಷಗಳನ್ನು ಅವರು ಸರಿಪಡಿಸಿಕೊಂಡಿರುವ ರೀತಿ ಅದ್ಭುತವಾಗಿದೆ," ಎಂದು ಹೇಳಿದ್ದಾರೆ.

ಆರ್‌ಸಿಬಿಗೆ ಆರ್‌.ಅಶ್ವಿನ್ ಮಹತ್ವದ ಸಲಹೆ

ಈ ಸೀಸನ್‌ನಲ್ಲಿ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ ಇನ್ನೂ ತಂಡವನ್ನು ಸೇರಿಕೊಂಡಿಲ್ಲ ಮತ್ತು ಟೂರ್ನಿಯ ಆರಂಭಿಕ ಹಂತದ ಪಂದ್ಯಗಳಿಗೆ ಅವರು ಅಲಭ್ಯರಾಗುವ ಸಾಧ್ಯತೆಯಿದೆ. ಇದು ಆರ್‌ಸಿಬಿ ತಂಡಕ್ಕೆ ಸದ್ಯದ ಹಿನ್ನಡೆಯಂತೆ ಕಂಡರೂ, ಅಶ್ವಿನ್ ಅವರ ದೃಷ್ಟಿಯಲ್ಲಿ ಇದು ಒಂದು ಅನಿರೀಕ್ಷಿತ ವರದಾನ. ಇದು ಹೇಗೆ ಅಂತಲೂ ಅವರು ತಿಳಿಸಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಆರ್‌ಸಿಬಿ ತಂಡಕ್ಕೆ ಒಂದು ಅನಿರೀಕ್ಷಿತ ವರದಾನ. ಒಂದು ವೇಳೆ ಹ್ಯಾಜಲ್‌ವುಡ್ ಲಭ್ಯವಿಲ್ಲದಿದ್ದರೆ ಮತ್ತು ಫಿಲ್ ಸಾಲ್ಟ್ ಅವರ ಫಾರ್ಮ್ ಬಗ್ಗೆ ಅವರಿಗೆ ಚಿಂತೆಯಿದ್ದರೆ, ಅವರು ಸಾಲ್ಟ್ ಮತ್ತು ಬೆಥೆಲ್ ಇಬ್ಬರನ್ನೂ ಆಡಿಸಬಹುದು. ಮುಂದೆ ಹ್ಯಾಜಲ್‌ವುಡ್ ತಂಡಕ್ಕೆ ಮರಳಿದ ನಂತರ, ತಂಡಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿರುತ್ತದೆ," ಎಂದು ಆರ್‌.ಅಶ್ವಿನ್ ಅವರು ಹೇಳಿದ್ದಾರೆ.

"ಇನ್ನೂ ವೆಂಕಟೇಶ್ ಅಯ್ಯರ್ ಅವರು ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಜಾಕೋಬ್ ಬೆಥೆಲ್ ತಂಡದಲ್ಲಿದ್ದಾರೆ. ಇವರೇ ತಂಡದ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ. ಇದು ಅತ್ಯಂತ ಬಲಿಷ್ಠವಾದ ವಿದೇಶಿ ಆಟಗಾರರ ಸಂಯೋಜನೆ. ಬಹುಶಃ ಈ ಬಾರಿಯ ಟೂರ್ನಿಯಲ್ಲೇ ಇದು ಅತ್ಯುತ್ತಮ ನಾಲ್ಕು ವಿದೇಶಿ ಆಟಗಾರರ ಕಾಂಬಿನೇಷನ್ ಆಗಿರಬಹುದು," ಎಂದು ಹೇಳಿ ಗಮನ ಸೆಳೆದಿದ್ದಾರೆ.

ಯಾವಾಗಲೂ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅವರನ್ನು ಟೀಕೆ ಮಾಡುತ್ತಿದ್ದ ಆರ್.ಅಶ್ವಿನ್ ಅವರು ಈ ಹೇಳಿಕೆ ನೀಡುವ ಅಚ್ಚರಿ ಹುಟ್ಟುಹಾಕಿದ್ದಾರೆ. ಈ ಬಾರಿ ಟ್ರೋಫಿ ಗೆಲ್ಲುವ ತಂಡಗಳ ರೇಸ್‌ನಲ್ಲಿ ಆರ್‌ಸಿಬಿ ಮುಂಚೂಣಿಯಲ್ಲಿ ಎಂದು ಹೇಳುವ ಮೂಲಕ ಗಮನ ಸೆಳದಿದ್ದಾರೆ. ಇನ್ನೂ ರಾಯಲ್‌ ಚಾಲೆಂಜರ್ಸ್‌ ಬೆಂಗಳರು ತಂಡವು ತನ್ನ ಅಭಿಯಾನವನ್ನು ಮಾರ್ಚ್ 28 ರಂದು ಆರಂಭಿಸಲಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಮತ್ತೊಂದೆಡೆ ಅಭಿಮಾನಿಗಳು ಈಗಾಗಲೇ ದೇವಸ್ಥಾನಗಳ ಮೊರೆ ಹೋಗುತ್ತಿದ್ದು, ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಿರುವ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಅಷ್ಟರ ಮಟ್ಟಿಗೆ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ತಂಡ ಆರ್‌ಸಿಬಿ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+