Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ

ಬೆಂಗಳೂರು: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿದರದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಯುದ್ಧದ ಪರಿಣಾಮ, ಡಾಲರ್ ಮೌಲ್ಯ ಕುಸಿತ ಹಾಗೂ ಇನ್ನಿತರ ಕಾರಣಗಳಿಂದ ಬಂಗಾರದ ಬೆಲೆಯು ಏರಿಕೆ ಆಗಲಿದೆ ಎಂದು ಕೆಲವರು ಅಂದಾಜಿಸಿದ್ದರು. ಆದರೆ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಚಿನ್ನ-ಬೆಳ್ಳಿ ಎರಡು ಲೋಹಗಳಲ್ಲಿ ತೀವ್ರ ಇಳಿಕೆ ಆಗಿದ್ದು, ಗ್ರಾಹಕರು ಇವುಗಳ ಖರೀದಿಗೆ ಉತ್ಸಾಹ ತೋರುವಂತಾಗಿದೆ. ಆದರೆ ಹೂಡಿಕೆದಾರರಿಗೆ ನಷ್ಟದ ಆತಂಕ ಎದುರಾಗಿದೆ. ಕೆಲವು ಚಿನ್ನ ಬೆಳ್ಳಿಯಲ್ಲಿ ಹಾಲಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ನಿರಂತರ ನಾಲ್ಕು ದಿನಗಳಿಂದ ಇಳಿಕೆ ಕಂಡು ಬಂದಿದೆ. ಇಂದು (ಮಾ.21) ಶನಿವಾರ 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 2940 ರೂಪಾಯಿ ಕುಸಿಯುವ ಮೂಲಕ ಅದರ ಬೆಲೆಯು 1,45,970 ರೂಪಾಯಿ ತಲುಪಿದೆ.

Gold Price Today

ಅದೇ ರೀತಿ 22 ಕ್ಯಾರಟ್‌ನ 10 ಗ್ರಾಂ ಬಂಗಾರದ ದರವು ಇಂದು 2750 ರೂಪಾಯಿ ಕುಸಿಯುವ ಮೂಲಕ 1,33,800 ರೂಪಾಯಿಗೆ ಮುಟ್ಟಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ಸಹ ಕಡಿಮೆ ಆಗಿದ್ದು, ಚಿನ್ನಾಭರಣಗಳ ಬೇಡಿಕೆ ಮೊದಲಿನಷ್ಟಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಚಿನ್ನ ಬೆಳ್ಳಿ ಹೂಡಿಕೆದಾರರು ತಮ್ಮ ಹೂಡಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಕೆಲವು ಗ್ರಾಹಕರು ಇನ್ನಷ್ಟು ದರ ಇಳಿಕೆ ಆಗಿ ಒಂದು ವರ್ಷದ ಹಿಂದಿನ ಬೆಲೆ ಸಿಗಬಹುದೆಂದು ಕಾಯುತ್ತಿದ್ದಾರೆ.

ಬೆಳ್ಳಿ ದರ 30,000 ರೂಪಾಯಿ ಕುಸಿತ

ಗರಿಷ್ಠ 4,20,000 ರೂಪಾಯಿಗೆ ಏರಿಕೆ ಆಗಿದ್ದ ಒಂದು ಕೆಜೆ ಬೆಳ್ಳಿಯು ಕೆಲವೇ ವಾರಗಳಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಕಳದ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 30,000 ರೂಪಾಯಿಯ ಭರ್ಜರಿ ಇಳಿಕೆ ದಾಖಲಿಸಿದೆ. ಇಂದು ಶನಿವಾರ ಒಂದೇ ದಿನಕ್ಕೆ ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ, ನೆನ್ನೆ ಶುಕ್ರವಾರ ಹಾಗೂ ಗುರುವಾರ ತಲಾ 5,000 ರೂ. ಹಾಗೂ ಮಾರ್ಚ್ 18 ರಂದು ಬುಧವಾರ 10,000 ರೂಪಾಯಿ ಇಳಿಕೆ ಆಗಿತ್ತು.

ಚಿನ್ನ ಬೆಳ್ಳಿಯು ನಿರಂತರವಾಗಿ ಇಳಿಕೆ ಆಗಿದೆ. ಇದೆಲ್ಲ ನೋಡಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಇಳಿಕೆ ಆಗುವ ಸಾಧ್ಯತೆಯು ಇದೆ. ಹಿಂದೆ ಯುದ್ಧಗಳು ಸಂಭವಿಸಿದಾಗ, ಡಾಲರ್ ಮೌಲ್ಯ ಕುಸಿತ ಇನ್ನಿತರ ರಾಜತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿದ್ದಂತೆ ಹೂಡಿಕೆದಾರರು ಚಿನ್ನ-ಬೆಳ್ಳಿ ಖರೀದಿಯಂತಹ ಸುರಕ್ಷಿತ ಮಾರ್ಗವನ್ನು ಅನುಸರಿಸುತ್ತಿದ್ದರು. ಇದೀಗ ಅಂತಹ ಅವಕಾಶ ಇಲ್ಲದಾಗಿದೆ. ಕಾರಣ ಈ ಎರಡು ಲೋಹಗಳ ದರವು ಗಣನೀಯವಾಗಿ ಕುಸಿಯುತ್ತಿದೆ. ನಗರವಾರು ಚಿನ್ನದ ಇಂದಿನ ಮಾಹಿತಿ ಇಲ್ಲಿದೆ.

22k 1ಗ್ರಾಂ ಚಿನ್ನ ಬೆಲೆ ವಿವರ

ಚೆನ್ನೈ: 13,620 ರೂಪಾಯಿ

ಮುಂಬೈ: 13,380 ರೂಪಾಯಿ

ದೆಹಲಿ: 13,395 ರೂಪಾಯಿ

ಕೊಲ್ಕತ್ತಾ: 13,380 ರೂಪಾಯಿ

ಬೆಂಗಳೂರು: 13,380 ರೂಪಾಯಿ

ಹೈದರಾಬಾದ್: 13,380 ರೂಪಾಯಿ

ಕೇರಳ: 13,380 ರೂಪಾಯಿ

ಪುಣೆ: 13,380 ರೂಪಾಯಿ

ವಡೋದರ: 13,385 ರೂಪಾಯಿ

ಅಹಮದಾಬಾದ್: 13,385 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+