• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರುː ಆನ್ ಲೈನ್ ಶಾಪಿಂಗ್ ವಂಚಕರ ಬಂಧನ

|

ಬೆಂಗಳೂರು, ನ. 16 : ನೀವು ಪ್ರಖ್ಯಾತ ಅಂತರ್ಜಾಲ ತಾಣದಲ್ಲಿ ಏನನ್ನೋ ಹುಡುಕುತ್ತಿದ್ದೀರಿ. ತಕ್ಷಣ ಕಂಪ್ಯೂಟರ್ ಪರದೆಯ ಮೇಲೆ 'ನೀವು ಕೇವಲ 599 ರೂ.ಗೆ ಐಫೋನ್ ಮೊಬೈಲ್ ಗೆದ್ದಿರುವಿರಿ ಎಂಬ ಸಂದೇಶ ಬರುತ್ತದೆ. ಅದನ್ನು ನಂಬಿ ಲಿಂಕ್ ಒಪನ್ ಮಾಡಿ ಅವರು ಸೂಚಿಸಿದಂತೆ ಹಣ ಕಟ್ಟಿದರೆ ಐಫೋನ್ ಬದಲು ಯಾವೂದಾದರೂ ಉಪಯೋಗಕ್ಕೆ ಬರದ ಸಾಮಗ್ರಿ ಕೊಳ್ಳಬೇಕಾಗುತ್ತದೆ.

ಇಂಥ ಅನುಭವ ನಗರದ ಅನೇಕರಿಗೆ ಈಗಾಗಲೇ ಆಗಿದ್ದರೂ ಆಶ್ಚರ್ಯವಿಲ್ಲ. ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದ 'ಬಿಐಜಿ ಎಸ್‌ಓಪಿ.ಕಾಮ್‌' ನ 6 ಪದವಿಧರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.[ಬೆಂಗಳೂರು ಪೊಲೀಸರ ಬಲಗೆ ಬಿದ್ದ ನಕಲಿ ಜ್ಯೋತಿಷಿ]

ಎಂಬಿಎ ಹಾಗೂ ಬಿಬಿಎಂ ಪದವಿಧರರಾದ ಬಿಹಾರ ಮತ್ತು ಜಾರ್ಖಂಡ್ ಮೂಲದ ಸುರೇಂದ್ರ ಗುಪ್ತಾ, ಪ್ರಿಯಾಂಶು ಕುಮಾರ್, ಪ್ರಕಾಶ್ ಕುಮಾರ್ ಸಿಂಗ್, ಕುಮಾರ್ ದಿಗ್ವಿಜಯ್, ಸೌಮೇನ್ ರಾಯ್ ಹಾಗೂ ಅಮರ್‌ನಾಥ್ ಬಂಧಿತ ಆರೋಪಿಗಳು.

ಇಂಟರ್ನೆಟ್ ಬಳಕೆದಾರರು ಜನಪ್ರಿಯ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ಬಿಐಜಿಎಸ್‌ಓಪಿ.ಕಾಮ್ ವೆಬ್‌ಸೈಟ್‌ನ್ನು ಈ ಆರೋಪಿಗಳು 'ಪಾಪ್ ಅಪ್‌' ಮಾಡುತ್ತಿದ್ದರು. ವಿಂಡೊದಲ್ಲಿ 'ನೀವು ಅದೃಷ್ಟವಂತರಾಗಿದ್ದು, ಕೇವಲ ರೂ.599ಕ್ಕೆ ಐಫೋನ್ ಸಿಗಲಿದೆ' ಎನ್ನುವ ಸಂದೇಶ ಬರುತ್ತಿತ್ತು. ಇದನ್ನು ನಂಬುತ್ತಿದ್ದ ಗ್ರಾಹಕರು ವೆಬ್‌ಸೈಟ್‌ಗೆ ಭೇಟಿ ನೀಡಿದರೆ ನಿಜಕ್ಕೂ ಮೊಬೈಲ್ ಫೋನ್ ಗೆದ್ದಿರುವಂತೆ ಮತ್ತೊಂದು ಸಂದೇಶ ಕಳಿಸಲಾಗುತ್ತಿತ್ತು.[ಪುರಾತನ ವಿಗ್ರಹ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದ ಸಿಸಿಬಿ]

ಗ್ರಾಹಕರು ಇದನ್ನು ನಂಬಿ, ಆನ್‌ಲೈನ್ ಮೂಲಕ ಹಣ ಪಾವತಿಸುತ್ತಿದ್ದರು. ಅದಕ್ಕಾಗಿ ಗ್ರಾಹಕರ ಸಂಪರ್ಕಕ್ಕೆ ಬಿಪಿಒ ಹಾಗೂ ಹಣಕಾಸಿನ ವಹಿವಾಟು ಮಾಡಲು ಐಸಿಐಸಿಐ ಗೇಟ್ ವೇ ವ್ಯವಸ್ಥೆ ಸಹ ಮಾಡಿಕೊಂಡಿದ್ದರು.

ಆದರೆ, ಗ್ರಾಹಕರ ಹಣ ಅಕೌಂಟಿಗೆ ಪಾವತಿಯಾಗುತ್ತಿದ್ದಂತೆ, 'ಸ್ವಲ್ಪ ತಡವಾಗಿದ್ದರಿಂದ ನಿಮಗೆ ಐಫೋನ್ ಮಿಸ್ ಆಗಿದೆ. ಹೀಗಾಗಿ ಬೇರೇನಾದರೂ ಆಯ್ಕೆ ಮಾಡಿಕೊಳ್ಳಿ. ಹಣ ವಾಪಸ್ ಮಾಡಲಾಗುವುದಿಲ್ಲ' ಎಂದು ಕಡಿಮೆ ಬೆಲೆಯ ಅಥವಾ ಕಳಪೆ ವಸ್ತುಗಳನ್ನು ಕೊಳ್ಳುವಂಥ ಅನಿವಾರ್ಯ ಸ್ಥಿತಿಯನ್ನು ಗ್ರಾಹಕರಿಗೆ ಸೃಷ್ಟಿಸಲಾಗುತ್ತಿತ್ತು.

ಟ್ವಿಟ್ಟರ್ ನಲ್ಲಿ ದೂರು

ಈ ರೀತಿ ವಂಚನೆಗೊಳಗಾದವರೊಬ್ಬರು ಟ್ವಿಟ್ಟರ್ ಮೂಲಕ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯನಿರತರಾದ ಪೊಲೀಸರು ಬೇಗೂರಿನ ಅಗರದಲ್ಲಿ ಬಿಜಿಐಎಸ್ ಓಪಿ.ಕಾಮ್ ಕಚೇರಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 75 ಲ್ಷ ರೂ. ವಂಚನೆ ನಡೆದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Central Crime Branch (CCB) sleuths claim to have busted a fake online shopping scam by arresting six accused who were cheating gullible customers under the pretext of selling iPhones for just Rs 599. After receiving a complaint on Twitter on Saturday, CCB sleuths managed to locate and raid BIGSOP.com, a fake online shopping portal at Agara in HSR Layout police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more