ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಲಭವಾಗಿ ಜನನ-ಮರಣ ಪ್ರಮಾಣ ಪತ್ರ ಪಡೆಯಿರಿ

|
Google Oneindia Kannada News

ಬೆಂಗಳೂರು, ಫೆ.11 : ಬೆಂಗಳೂರಿಗರಿಗೆ ಇದು ಸಿಹಿ ಸುದ್ದಿ. ನಗರದ ಆಸ್ಪತ್ರೆಗಳಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯುವುದು ಮತ್ತಷ್ಟು ಸುಲಭವಾಗಿದೆ. ಜನನ ಪ್ರಮಾಣಪತ್ರ ಪಡೆಯಲು ಪೋಷಕರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ತ್ವರಿತವಾಗಿ ವಿಲೇವಾರಿ ಮಾಡಲು ಆನ್‌ಲೈನ್ ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೆ ತಂದಿದೆ.

ಈ ಯೋಜನೆ ಕುರಿತು ಮಾಹಿತಿ ಬಿಬಿಎಂಪಿ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕ ಡಿ.ಶಂಕರಪ್ಪ, ಸಾರ್ವಜನಿಕರು ಇನ್ನು ಮುಂದೆ ಜನನ ಪ್ರಮಾಣ ಪತ್ರವನ್ನು ತಾವು ದಾಖಲಾಗಿರುವ ಆಸ್ಪತ್ರೆಯಲ್ಲೇ ಪಡೆಯಬಹುದಾಗಿದೆ. ಆಸ್ಪತ್ರೆಯಿಂದ ಅವರು ಬಿಡಗಡೆಯಾಗುವ ಮುನ್ನವೇ ಅವರ ಕೈ ಸೇರಲಿದೆ ಎಂದರು ಹೇಳಿದರು.

BBMP

ಮರಣ ಪ್ರಮಾಣ ಪತ್ರವನ್ನು ಪಡೆಯುವುದನ್ನು ಸರಳೀಕರಿಸಲಾಗಿದೆ. ವ್ಯಕ್ತಿ ಸಾವಿಗೀಡಾದ ಮೂರು ದಿನಗಳಲ್ಲಿ ಮೃತರ ಸಂಬಂಧಿಗೆ ಪತ್ರ ದೊರೆಯಲಿದೆ. ಜನರು ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬೇಕಿಲ್ಲ. ಅದಕ್ಕಾಗಿ ಕಚೇರಿಗಳಿಗೆ ಅಲೆಯುವ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 1480 ಖಾಸಗಿ ಆರೋಗ್ಯ ಸಂಸ್ಥೆಗಳಿವೆ. ಇವುಗಳು ತಮ್ಮಲ್ಲಿ ಆಗುವ ಜನನ ಮತ್ತು ಮರಣದ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆದು ಬಿಬಿಎಂಪಿ ನೋಂದಾಣಿ ವಿಭಾಗಕ್ಕೆ ರವಾನಿಸುತ್ತವೆ. ನೋಂದಣಿ ವಿಭಾಗದಲ್ಲಿ ವಿಳಾಸ ಮತ್ತು ಪೋಷಕರ ವಿವರ ಖಾತ್ರಿಪಡಿಸಿ, ಪ್ರಮಾಣ ಪತ್ರ ರೂಪದಲ್ಲಿ ವಾಪಸ್ ಅದೇ ಆಸ್ಪತ್ರೆಗಳಿಗಳಿಗೆ ಕಳಿಸಲಾಗುತ್ತದೆ. ಇದು ಉಚಿತವಾಗಿದ್ದು ಯಾವುದೇ ಶುಲ್ಕ ಕಟ್ಟಬೇಕಿಲ್ಲ ಎಂದು ಅವರು ಸ್ಟಷ್ಟಪಡಿಸಿದರು.

ಆನ್‌ಲೈನ್‌ನಲ್ಲಿ ಜನನ, ಮರಣ ನೋಂದಣಿ ವ್ಯವಸ್ಥೆ 2010ರ ಜ.1ರಿಂದ ಜಾರಿಯಲ್ಲಿದೆ. ಇದೀಗ ನ್ಯಾಷನಲ್ ಇನ್‌ಫರ್ಮೇಟಿಕ್ಸ್ ಸೆಂಟರ್ ಸಹಯೋಗದಲ್ಲಿ ಸುಧಾರಿತ ತಂತ್ರಾಂಶ ಬಳಸಿ ಇ-ಟ್ರಾನ್ಸ್‌ಫರ್ ಡೇಟಾ ವಿಧಾನದಡಿ ಮೂರು ದಿನದಲ್ಲಿ ಆಸ್ಪತ್ರೆಗಳಲ್ಲೇ ಜನನ, ಮರಣ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಫೆ.1ರಿಂದ ಆರಂಭಿಸಲಾಗಿದೆ ಎಂದು ತಿಳಿಸಿದರು.

ಎಲ್ಲಿ ಈ ಸೌಲಭ್ಯ : ನಗರ ವ್ಯಾಪ್ತಿಯ 1,480 ಖಾಸಗಿ ಆಸ್ಪತ್ರೆಗಳು, ಪಾಲಿಕೆಯ ಆರು ರೆಫರಲ್ ಆಸ್ಪತ್ರೆ, 22 ಹೆರಿಗೆ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಕೆ ಸಿ ಜನರಲ್ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಗೌಸಿಯಾ ಆಸ್ಪತ್ರೆ. ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲೂ ನೋಂದಣಿ ಕೇಂದ್ರ ತೆರೆಯಲು ಬಿಬಿಎಂಪಿ ಸಿದ್ಧತೆ ನಡೆಸಿದೆ. [ಬಿಬಿಎಂಪಿ ವೆಬ್ ಸೈಟ್ ನೋಡಿ]

ತಪ್ಪಿದ್ದರೆ ತಿದ್ದುಪಡಿ : ಬಿಬಿಎಂಪಿ ಈಗಾಗಲೇ 2010ರ ಜ.1ರ ನಂತರ ಸಂಭವಿಸಿದ ಜನನ, ಮರಣದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸಿದೆ. ಸಂಬಂಧಪಟ್ಟ ಉಪನೋಂದಣಾಧಿಕಾರಿ ಕಚೇರಿ ಹಾಗೂ ಬೆಂಗಳೂರು ಒನ್ ಕೇಂದ್ರದಲ್ಲಿ ಪ್ರಮಾಣಪತ್ರ ಪಡೆಯಬಹುದು.[ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಕಟ್ಟಿ]

ಜನನ ಪ್ರಮಾಣಪತ್ರದಲ್ಲಿ ಯಾವುದೇ ರೀತಿಯ ತಿದ್ದುಪಡಿ, ಹೆಸರು ಸೇರ್ಪಡೆ ಮುಂತಾದವುಗಳಿಗಾಗಿ ಉಪ್ಪಾರಪೇಟೆ ಪೊಲೀಸ್ ಠಾಣೆ ಸಮೀಪದ ಪಾಲಿಕೆ ವಾಣಿಜ್ಯ ಸಂಕೀರ್ಣದಲ್ಲಿನ ಸಾಂಖ್ಯಿಕ ಇಲಾಖೆಯನ್ನು ಸಂಪರ್ಕಿಸಬೇಕು. ಆ ಡಿಜಿಟಲ್ ವಿಧಾನದಡಿ ದಾಖಲಾಗಿದ್ದರೆ ಮೂರು ದಿನದಲ್ಲಿ ಪ್ರಮಾಣಪತ್ರ ಸಿಗಲಿದೆ. ಇಲ್ಲದಿದ್ದರೆ ಐದು ದಿನದಲ್ಲಿ ನೀಡಲಾಗುತ್ತದೆ.

English summary
The Bruhat Bangalore Mahanagara Palike (BBMP) has introduced ‘e-transfer’, a first-of-its-kind initiative that hastens issue of birth certificates. Similarly, death certificates can be obtained by blood relatives of the deceased within three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X