Get Updates
Get notified of breaking news, exclusive insights, and must-see stories!

E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು

E-Khata: ಬೆಂಗಳೂರಿನ ಆಸ್ತಿದಾರರಿಗೆ ಮತ್ತೊಂದು ಗುಡ್‌ನ್ಯೂಸ್ ಕೊಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳಿಗೂ ಇ ಖಾತಾ - ಡಿಜಿಟಲ್ ರೂಪಾದ ಆಸ್ತಿ ನೀಡುತ್ತಿದೆ. ಬೆಂಗಳೂರಿನಲ್ಲಿ ಇದನ್ನು ಮೊದಲು ಪ್ರಾಯೋಗಿಕವಾಗಿ ಪ್ರಾರಂಭ ಮಾಡಿದರೂ ಸಹ ಮುಂದೆ ಇದನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ವಿಸ್ತರಣೆ ಮಾಡಲಾಗಿದೆ. ಆದರೆ ಪ್ರಾರಂಭಿಕವಾಗಿ ಪ್ರಾರಂಭಿಸಿದ ಬೆಂಗಳೂರಿನಲ್ಲಿಯೇ ಲಕ್ಷಾಂತರ ಜನರಿಗೆ ಇಲ್ಲಿಯ ವರೆಗೆ ಇ ಖಾತಾ ಸೇವೆ ಸಿಕ್ಕಿಲ್ಲ. ಇದೀಗ ಇ ಖಾತಾದಲ್ಲಿ ಇರುವ ಗೊಂದಲಗಳು ಹಾಗೂ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಇ ಖಾತಾ ಜನಸೇವಕ ಎನ್ನುವ ಯೋಜನೆಯನ್ನು ಪರಿಚಯಿಸಿದೆ.

E-Khata: ಏನಿದು ಇ ಖಾತಾ - ಜನ ಸೇವಕ ಯೋಜನೆ

ಬೆಂಗಳೂರಿನ ಆಸ್ತಿದಾರರಿಗೆ ಅನುಕೂಲವಾಗುವಂತೆ ಹಾಗೂ ಸುಲಭವಾಗಿ ಇ ಖಾತಾ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುಂತೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇ ಖಾತಾದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಅದರಲ್ಲಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪರಿಚಯಿಸಲಾಗಿರುವ ಇ ಖಾತಾ - ಜನ ಸೇವಕ ಯೋಜನೆಯು ಸಹ ಪ್ರಮುಖವಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪರಿಚಯಿಸಿರುವ ಜನಸೇವಕ ಯೋಜನೆಯ ಮೂಲಕ ನೀವು ಇನ್ಮುಂದೆ ನಿಮ್ಮ ಮನೆಯಲ್ಲಿಯೇ ಇ-ಖಾತಾ ಪಡೆದುಕೊಳ್ಳುವುದಕ್ಕೆ ಅವಕಾಶ ಇಲಿದೆ.

E-Khata

E-Khata: ಮನೆಯಲ್ಲೇ ಇ ಖಾತಾಗೆ ಇರುವ ಆಯ್ಕೆಗಳು

ಜನಸೇವಕರಿಗಾಗಿ ನೀವು ದೂರವಾಣಿ ಸಂಖ್ಯೆ 080-49203888ಕ್ಕೆ ಕರೆ ಮಾಡಬಹುದಾಗಿದೆ.

ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳುವುದಕ್ಕೆ: https://Janasevaka.karnataka.gov.in ಎನ್ನುವ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಇ ಖಾತಾಗೆ ಎಷ್ಟು ಹಣ

ಕರ್ನಾಟಕ ಸರ್ಕಾರವು ಜನಸೇವಕರನ್ನು ತಮ್ಮಮನೆಗೆ ಕಳುಹಿಸಲಿದ್ದು, ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಇ-ಖಾತಾಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು 160 ರೂಪಾಯಿ ಆಗಲಿದೆ.

ವೈಬ್‌ಸೈಟ್: https://bbmpeAasthi.karnataka.gov.in ಮೂಲಕ ಇ ಖಾತಾ ಡೌನ್‌ಲೋಡ್ ಮಾಡಿಕೊಳ್ಳಲು 125 ರೂಪಾಯಿ ಪಾವತಿ ಮಾಡಬೇಕು.

ಬೆಂಗಳೂರು ಒನ್ ಕೇಂದ್ರದಲ್ಲಿ ಈ ಹಿಂದೆ ನೀಡಲಾದ ಇ-ಖಾತಾ ಮುದ್ರಣಕ್ಕೆ 45 ರೂಪಾಯಿ ಮತ್ತು ಇತ್ತೀಚಿನ ಇ-ಖಾತ ಮುದ್ರಣಕ್ಕೆ 170 ರೂಪಾಯಿ.

ಮನೆಗೆ ಭೇಟಿ ನೀಡುವ ಮೂಲಕ ಜನಸೇವಕರಿಂದ ಇ-ಖಾತಾ ಮಾಡಿಸಲು 125 ರೂಪಾಯಿ + ಆನ್‌ಲೈನ್ ಶುಲ್ಕ 45 ರೂಪಾಯಿ+ 115 ರೂಪಾಯಿ ಸೇರಿ ಒಟ್ಟು 160 ರೂಪಾಯಿ ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ</a><a class= " title="Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ " loading="lazy" width="100" height="56" />
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ

ಮನೆಯಿಂದಲೇ ಇ ಖಾತಾ ಬೇಕಾಗುವ ದಾಖಲೆಗಳು

1. ಮಾಲೀಕರ ಆಧಾರ್ ಕಾರ್ಡ್

2. ಆಸ್ತಿ ತೆರಿಗೆ SMS ಅರ್ಜಿ ಸಂಖ್ಯೆ

3. ಆಸ್ತಿ ಮಾರಾಟ/ನೋಂದಣಿ ಡೀಡ್ ಸಂಖ್ಯೆ - ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುವುದು.

4. ಬೆಸ್ಕಾಂ ಅರ್ಜಿ ಸಂಖ್ಯೆ - ಖಾಲಿ ನಿವೇಶನಗಳಿಗೆ ಐಚ್ಛಿಕ

5. ಆಸ್ತಿಯ ಫೋಟೋ

ಇ-ಖಾತಾ ಸಾರ್ವಜನಿಕರಿಗೆ ಸಹಾಯವಾಣಿ ಸಂಖ್ಯೆ: 94806 83695

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+