ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ
ಬೆಂಗಳೂರು: ಖ್ಯಾತ ಆಧ್ಯಾತ್ಮಿಕ ಚಿಂತಕ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಎಂ (ಮುಮ್ತಾಜ್ ಅಲಿ) ಅವರ ಲೇಖನಿಯಿಂದ ಮೂಡಿಬಂದಿರುವ 'ಉಪನಿಷತ್ತುಗಳು ಮತ್ತು ಜೆ. ಕೃಷ್ಣಮೂರ್ತಿ' ಎಂಬ ನೂತನ ಕೃತಿಯು ಇಂದು (ಏಪ್ರಿಲ್ 13ರಂದು) ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಪ್ರಾಚೀನ ಭಾರತೀಯ ಜ್ಞಾನಪರಂಪರೆ ಮತ್ತು ಆಧುನಿಕ ತತ್ವಚಿಂತನೆಗಳ ನಡುವಿನ ಸೇತುವೆಯಂತಿರುವ ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು 'ದಿ ಸತ್ಸಂಗ್ ಫೌಂಡೇಶನ್' ಮತ್ತು 'ಪೆಂಗ್ವಿನ್ ಇಂಡಿಯಾ' ಜಂಟಿಯಾಗಿ ಆಯೋಜಿಸಿವೆ.
ಕಾರ್ಯಕ್ರಮದಲ್ಲಿ ಶ್ರೀ ಎಂ ಮತ್ತು ಖ್ಯಾತ ವಾಸ್ತುಶಿಲ್ಪಿ, ಸಿಎನ್‌ಟಿ ಆರ್ಕಿಟೆಕ್ಟ್ಸ್ ಮುಖ್ಯಸ್ಥ ಪ್ರೇಮ್ ಚಂದಾವರ್ಕರ್ ನಡುವಿನ ಸಂವಾದ ಪ್ರಮುಖ ಆಕರ್ಷಣೆಯಾಗಿದ್ದು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವೂ ಇರಲಿದೆ. ಈ ಸಂವಾದವು ಉಪನಿಷತ್ತುಗಳ ಪ್ರಾಚೀನ ಜ್ಞಾನ ಮತ್ತು ಜೆ. ಕೃಷ್ಣಮೂರ್ತಿ ಅವರ ಆಧುನಿಕ ತತ್ವಶಾಸ್ತ್ರದ ನಡುವಿನ ಸಂಬಂಧವನ್ನು ಪರಿಚಯಿಸಲಿದೆ.

ಈ ಕೃತಿ ಉಪನಿಷತ್ತುಗಳ ಪಾರಂಪರಿಕ ಜ್ಞಾನ ಮತ್ತು ಜೆ.ಕೃಷ್ಣಮೂರ್ತಿ ಅವರ ತತ್ತ್ವ ಚಿಂತನೆಗಳ ನಡುವಿನ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಆಳವಾಗಿ ಪರಿಶೀಲಿಸುತ್ತದೆ. ಹಿಂದೂ, ಇಸ್ಲಾಂ, ಕ್ರೈಸ್ತ ಮತ್ತು ಬೌದ್ಧ ಧರ್ಮಗಳ ಕುರಿತು ಶ್ರೀ ಎಂ ಅವರ ವಿಶಾಲ ಅನುಭವದ ಆಧಾರದ ಮೇಲೆ ಈ ಪುಸ್ತಕವು ಧರ್ಮ, ಸತ್ಯ ಮತ್ತು ಆತ್ಮಾನ್ವೇಷಣೆ ಕುರಿತು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತದೆ.
ಕಾರ್ಯಕ್ರಮದ ವಿವರ
ಈ ವಿಶೇಷ ಕಾರ್ಯಕ್ರಮವು ಇಂದು ಸಂಜೆ ನಡೆಯಲಿದೆ. ಮಲ್ಲೇಶ್ವರಂನ 16ನೇ ಕ್ರಾಸ್‌ನಲ್ಲಿರುವ ಐತಿಹಾಸಿಕ ಚೌಡಯ್ಯ ಸ್ಮಾರಕ ಭವನ ಈ ಬೌದ್ಧಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ವೇದಿಕೆಯಾಗಲಿದೆ. ಕಾರ್ಯಕ್ರಮವು ಸಂಜೆ 6 ಶುರುವಾಗಲಿದೆ. ಕೃತಿ ಬಿಡುಗಡೆಯ ಜೊತೆಗೆ ಲೇಖಕ ಶ್ರೀ ಎಂ ಅವರೊಂದಿಗೆ ವಿಶೇಷ ಸಂವಾದವನ್ನು ಏರ್ಪಡಿಸಲಾಗಿದೆ. ಆಧ್ಯಾತ್ಮಿಕ ಆಸಕ್ತರು ಮತ್ತು ಓದುಗರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನವಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಘಟಕರನ್ನು 9844307580 ಅಥವಾ 9980984608 ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ. ಸಾಹಿತ್ಯ ಮತ್ತು ಆಧ್ಯಾತ್ಮದ ಕುರಿತು ಆಳವಾದ ಒಳನೋಟಗಳನ್ನು ಪಡೆಯಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ.
ಶ್ರೀ ಎಂ ಅವರ ಕುರಿತು
ಕೇರಳದಲ್ಲಿ ಮುಮ್ತಾಜ್ ಅಲಿ ಎಂಬ ಹೆಸರಿನಲ್ಲಿ ಜನಿಸಿದ ಶ್ರೀ ಎಂ, ಆಧ್ಯಾತ್ಮಿಕ ಗುರು, ಶಿಕ್ಷಣತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದಾರೆ. ಅವರು ಸ್ಥಾಪಿಸಿದ ಸತ್ಸಂಗ್ ಫೌಂಡೇಶನ್ ಶಿಕ್ಷಣ, ಆತ್ಮವಿಕಾಸ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಇವರು ನಿರ್ಮಿಸಿರುವ ಆಧ್ಯಾತ್ಮಿಕ ಕೇಂದ್ರ ಮತ್ತು ಶಾಲೆಗಳು ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಏಳಿಗೆಗಾಗಿ ಶ್ರಮಿಸುತ್ತಿವೆ. ಇವರು ಯೋಗ, ಧ್ಯಾನ ಮತ್ತು ಉಪನಿಷತ್ತುಗಳ ಸಾರವನ್ನು ಅತ್ಯಂತ ಸರಳವಾಗಿ ಸಾಮಾನ್ಯ ಜನರಿಗೆ ಉಣಬಡಿಸುತ್ತಿದ್ದಾರೆ.
2015-16ರಲ್ಲಿ ನಡೆದ 'ವಾಕ್ ಆಫ್ ಹೋಪ್' ಮೂಲಕ ದೇಶದಾದ್ಯಂತ 7,500 ಕಿಲೋಮೀಟರ್ ಪಾದಯಾತ್ರೆ ನಡೆಸಿ ಸಾಮರಸ್ಯ ಮತ್ತು ಶಾಂತಿಗೆ ಸಂದೇಶ ಸಾರಿದ ಅವರು, ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. 2020ರಲ್ಲಿ ಸಮಾಜ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಶ್ರೀ ಎಂ ಅವರು ಕೇವಲ 19ನೇ ವಯಸ್ಸಿನಲ್ಲಿ ಸತ್ಯಾನ್ವೇಷಣೆಗಾಗಿ ಹಿಮಾಲಯಕ್ಕೆ ತೆರಳಿದರು. ಅಲ್ಲಿನ ವ್ಯಾಸ ಗುಹೆಯಲ್ಲಿ ತಮ್ಮ ಗುರುಗಳಾದ ಮಹೇಶ್ವರ್ ನಾಥ್ ಬಾಬಾಜಿ ಅವರ ಮಾರ್ಗದರ್ಶನದಲ್ಲಿ ಮೂರೂವರೆ ವರ್ಷಗಳ ಕಾಲ ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆ ಮಾಡಿದರು. ಜಾತಿ, ಧರ್ಮಗಳ ಹಂಗಿಲ್ಲದೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವುದೇ ಇವರ ಸಿದ್ಧಾಂತ. ಶ್ರೀ ಎಂ ಅವರ ಆತ್ಮಕಥೆಯಾದ 'ಅಪ್ರೆಂಟಿಸ್ ಟು ಎ ಹಿಮಾಲಯನ್ ಮಾಸ್ಟರ್' (Apprentice to a Himalayan Master) ಜಾಗತಿಕ ಮಟ್ಟದಲ್ಲಿ ಭಾರಿ ಮೆಚ್ಚುಗೆ ಪಡೆದಿದೆ. ಇದು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು, ಆಧ್ಯಾತ್ಮಿಕ ಆಸಕ್ತರಿಗೆ ದಾರಿದೀಪವಾಗಿದೆ.
-
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ












Click it and Unblock the Notifications