Akshara Gupta: 15ನೇ ವಯಸ್ಸಿನಲ್ಲಿ ಅಜೇಯ 306 ರನ್ ಸಿಡಿಸಿ ಅಮೋಘ ಸಾಧನೆ ಮಾಡಿದ ಅಕ್ಷರಾ ಗುಪ್ತಾ ಯಾರು?

Akshara Gupta: ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರು ಐಪಿಎಲ್‌ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟವಾಡಿ ಇಡೀ ಕ್ರಿಕೆಟ್‌ ಜಗತ್ತೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ದರು. ಇದೀಗ ಬಿಹಾರದ ಮತ್ತೊಬ್ಬ ಯುವ ಪ್ರತಿಭೆ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ವೈಭವ್ ಸೂರ್ಯವಂಶಿ ಅವರ ನಂತರ ಬಿಹಾರದ ಮತ್ತೊಬ್ಬ ಯುವ ಪ್ರತಿಭೆ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಈ ಬಾರಿ ದೇಶದ ಗಮನ ಸೆಳೆದಿರುವ ಆಟಗಾರ್ತಿ ಅಕ್ಷರಾ ಗುಪ್ತಾ. ಭಾಗಲ್ಪುರದ ಸ್ಯಾಂಡಿಸ್ ಕಾಂಪೌಂಡ್ ಮೈದಾನದಲ್ಲಿ ಗುರುವಾರ ನಡೆದ ಬಿಸಿಎ ಮಹಿಳಾ ಅಂಡರ್-19 ಏಕದಿನ ಟ್ರೋಫಿ ಪಂದ್ಯಾವಳಿಯಲ್ಲಿ ಈ ಯುವ ಬ್ಯಾಟರ್ ಅಜೇಯ 306 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.

Akshara Gupta 15-Year-Old Girl Smashes 306 Runs for 126 Bihar Finds Another Cricket Sensation

306 ರನ್ ಗಳಿಸಿದ ಅಕ್ಷರಾ ಗುಪ್ತಾ

ಅಕ್ಷರಾ ಗುಪ್ತಾ ಅವರು ತಮ್ಮ ಈ ಇನ್ನಿಂಗ್ಸ್‌ನಲ್ಲಿ ಕೇವಲ 126 ಎಸೆತಗಳಲ್ಲಿ ಬರೋಬ್ಬರಿ 55 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ಸಹಿತ ಅಜೇಯ 306 ರನ್ ಗಳಿಸಿದ್ದಾರೆ. ಇವರು ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ (50 ರನ್) ಪೂರೈಸಿದರೆ, ಕೇವಲ 34 ಎಸೆತಗಳಲ್ಲಿ ಶತಕದ (100 ರನ್) ಗಡಿ ದಾಟಿದರು. ಬಿಹಾರದ ಈ ಯುವ ಆಟಗಾರ್ತಿಯ ಅಬ್ಬರದ ಬ್ಯಾಟಿಂಗ್ ಪ್ರದರ್ಶನವು ಪ್ರಸ್ತುತ ದೇಶೀಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಯಾರು ಈ ಅಕ್ಷರಾ ಗುಪ್ತಾ?

ಈ 15 ವರ್ಷದ ಯುವ ಕ್ರಿಕೆಟ್ ಪ್ರತಿಭೆ ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸೌಲ್ ಮೂಲದವರಾಗಿದ್ದಾರೆ. ಪ್ರಸ್ತುತ ಇವರು ಬಿಹಾರ ಅಂಡರ್-19 ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ. ಭಾಗಲ್ಪುರದಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಇವರು ಕೇವಲ ಎರಡು ವರ್ಷಗಳಲ್ಲಿ ಬಿಸಿಸಿಐ ಆಯೋಜಿಸಿದ ಸತತ ನಾಲ್ಕು ಮಹಿಳಾ ಟೂರ್ನಿಗಳಲ್ಲಿ ಆಡಿದ ಬಿಹಾರದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಿಹಾರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹೇಳಿದ್ದೇನು?

ಅಕ್ಷರಾ ಗುಪ್ತಾ ಅವರ ಈ ಐತಿಹಾಸಿಕ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವ ಬಿಹಾರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ್ ಅವರು, ಬಿಹಾರದ ಮಹಿಳಾ ಕ್ರಿಕೆಟರ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶನಗಳ ಮೂಲಕ ರಾಜ್ಯಕ್ಕೆ ನಿರಂತರವಾಗಿ ಕೀರ್ತಿ ತರುತ್ತಿದ್ದಾರೆ' ಎಂದು ಶ್ಲಾಘಿಸಿದ್ದಾರೆ ಎಂದು ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ. ಇದೇ ವೇಳೆ ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಜಿಯಾವುಲ್ ಅರ್ಫಿನ್ ಅವರೂ ಸಹ ಅಕ್ಷರಾ ಅವರ ಈ ಅಪೂರ್ವ ಸಾಧನೆಗೆ ಶುಭ ಹಾರೈಸಿದ್ದಾರೆ.

ಕ್ರಿಕೆಟ್‌ನಲ್ಲಿ ಸದ್ಯ ಬಿಹಾರದ ಯುವ ಪ್ರತಿಭೆ ಅಕ್ಷರಾ ಗುಪ್ತಾ ಅವರು ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಬಿಹಾರದ ತಾಜ್‌ಪುರ ಮೂಲದವರಾದ ವೈಭವ್ ಸೂರ್ಯವಂಶಿ ಅವರು ಕೇವಲ 15 ನೇ ವಯಸ್ಸಿನಲ್ಲಿಯೇ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜೂನ್ 26 ರಿಂದ ಆರಂಭವಾಗಲಿರುವ ಟಿ20 ಸರಣಿಗಾಗಿ ಅವರು ಭಾರತ ತಂಡದೊಂದಿಗೆ ಐರ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಆನಂತರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಗೂ ತಂಡದ ಭಾಗವಾಗಿದ್ದಾರೆ. ಪ್ರಸ್ತುತ ವೈಭವ್ ಅವರು ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಆಡುತ್ತಿದ್ದಾರೆ. ಒಟ್ಟಿನಲ್ಲಿ ಇದೀಗ ಬಿಹಾರ ಮೂಲದ ಅಕ್ಷರಾ ಗುಪ್ತಾ ಅವರು ಆಕ್ರಮಣಕಾರಿ ಆಟದ ಮೂಲಕ ಸಂಚಲ ಮೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+