New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ

ನವದೆಹಲಿ: ಭಾರತಾದ್ಯಂತ ರೈಲ್ವೆ ಜಾಲ ವಿಸ್ತರಿಸುತ್ತಿದೆ. ಕೊನೆಯ ಮೈಲಿಗಲ್ಲು ವರೆಗೂ ಸಂಪರ್ಕ ಕಲ್ಪಿಸುವ ಮತ್ತು ಬಡ ಮತ್ತು ಸೇವಾ ಅವಕಾಶ ಪಡೆಯದ ಪ್ರದೇಶಗಳಿಗೆ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆ ಇಲಾಖೆಯು 'ಪ್ರಧಾನಮಂತ್ರಿ ಗತಿ ಶಕ್ತಿ' ಯೋಜನೆಯಡಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಪರಿವರ್ತನಾತ್ಮಕ ವಿಸ್ತರಣೆ ಕೈತ್ತಿಕೊಂಡಿದೆ. ಕಳೆದ ವರ್ಷಕ್ಕಿಂತ ಶೇ.114ರಷ್ಟು ಉದ್ದ ರೈಲ್ವೆ ವಿಸ್ತರಣೆ ಹಾಗೂ ಹೊಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ಭಾರತೀಯ ರೈಲ್ವೆ 2025-26ರ ಹಣಕಾಸು ವರ್ಷದಲ್ಲಿ ಹೊಸ ಮಾರ್ಗಗಳು, ದ್ವಿಗುಣಗೊಳಿಸುವಿಕೆ, ಮಲ್ಟಿಟ್ರ್ಯಾಕಿಂಗ್ ಮತ್ತು ಇತರ ಕೆಲಸಗಳನ್ನು ಒಳಗೊಂಡ 100 ರೈಲ್ವೆ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಭವಿಷ್ಯ ದೃಷ್ಟಿಯಿಂದ ಮಾಡುತ್ತಿರುವ ಜಾಲ ವಿಸ್ತರಣೆಗೆ ಈ ಯೋಜನೆಗಳು, ಅನುಮೋದನೆಗಳು ಭದ್ರ ಅಡಿಪಾಯ ಹಾಕಿವೆ.

Indian Railways

ರೈಲ್ವೆ ಸಚಿವಾಲಯ ಪ್ರಕಾರ, 2025-26ರಲ್ಲಿ ದಾಖಲೆಯ 6000 ಕಿಮೀ ಉದ್ದದ ರೈಲ್ವೆ ವಿಸ್ತರಣೆಗೆ ಅನುಮೋದನೆ ನೀಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 114 ಕ್ಕಿಂತ ಹೆಚ್ಚು ಅಧಿಕವಾಗಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ರೈಲು ಮಾರ್ಗ ವಿಸ್ತರಣೆ ಕೆಲಸಗಳು ಪ್ರಗತಿಯಲ್ಲಿದ್ದು, ಅದಕ್ಕೆ ಮತ್ತೆ 6000 ಕಿಮೀ ಸೇರಿಕೊಳ್ಳಲಿದೆ.

100 ಯೋಜನೆಗಳಿಗೆ 1.53 ಲಕ್ಷ ಕೋಟಿ ರೂ.

ಮುಖ್ಯವಾಗಿ 2025-26ನೇ ಹಣಕಾಸು ವರ್ಷದಲ್ಲಿ 100 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಅದಕ್ಕಾಗಿ ಒಟ್ಟು 1.53 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.110 ಕ್ಕಿಂತ ಅಧಿಕ ವಾಗಿದೆ. ಇದು ಭಾರತದಲ್ಲಿ ವಿಶ್ವ ದರ್ಜೆಯ ಉನ್ನತ-ಸಾಮರ್ಥ್ಯದ ರೈಲು ಜಾಲವನ್ನು ಅಭಿವೃದ್ಧಿಪಡಿಸುತ್ತಿರುವ ಪ್ರಮಾಣ 56ರಷ್ಟು ಏರಿಕೆ ಆಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಬುಡಕಟ್ಟು ಪ್ರದೇಶಗಳಲ್ಲಿ ಹೊಸ ಮಾರ್ಗಗಳನ್ನು ನಿರ್ಮಿಸುವ ವೆಚ್ಚದಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಸಮಯಪಾಲನೆಯನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಅತಿ ಸಾಂದ್ರತೆ ಮಾರ್ಗಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ.

ಕೈಗಾರಿಕೆಗಳಿಗೆ ಉತ್ತೇಜನ, ಉದ್ಯೋಗ ಸೃಷ್ಟಿ

ಕಾರ್ಯಾಚರಣಾ ದಕ್ಷತೆಯನ್ನು ಸುಧಾರಿಸಲು, ಪ್ರಯಾಣದ ಸಮಯವನ್ನು ಕಡಿಮೆ ಮಾಡಲು, ಉದ್ಯೋಗಗಳನ್ನು ಸೃಷ್ಟಿಸಲು, ಪ್ರಮುಖ ಕೈಗಾರಿಕೆಗಳನ್ನು ಹೆಚ್ಚಿಸಲು ಮತ್ತು ಸಾಗಾಣಿಕೆ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವ ಯೋಜನೆಗಳು ಇವಾಗಿವೆ ಎಂದು ಸಚಿವಾಲಯ ಪ್ರತಿಪಾದಿಸಿದೆ.

ದೇಶಾದ್ಯಂತ ಪ್ರಯಾಣಿಕರ ಮತ್ತು ಸರಕು ಸೇವೆಗಳನ್ನು ಸುಧಾರಿಸಲು ಹೆಚ್ಚಿನ ಸಾಂದ್ರತೆಯ ರಾಜ್ಯಗಳ ಮೇಲೆ ಕಾರ್ಯತಂತ್ರದ ಗಮನ ಕೇಂದ್ರೀಕರಿಸುವ ಎಲ್ಲ ಪ್ರಮುಖ ರಾಜ್ಯಗಳನ್ನು ಒಳಗೊಮಡು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್ ಮತ್ತು ಮಧ್ಯಪ್ರದೇಶಗಳಲ್ಲಿ ಸರಕು ಕಾರಿಡಾರ್‌ ಗಳು, ಕೈಗಾರಿಕಾ ಸಂಪರ್ಕ ಮತ್ತು ಪ್ರಯಾಣಿಕರ ಚಲನೆ ಹೆಚ್ಚಿಸಲಿದೆ.

35 ಕ್ಕೂ ಅಧಿಕ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ

1,000 ಕೋಟಿ ರೂ. ಮೀರಿದ 35 ಕ್ಕೂ ಹೆಚ್ಚು ಯೋಜನೆಗಳು ಜಾರಿಯಾಗಲಿವೆ. ಅದರಲ್ಲಿ ಇಟಾರ್ಸಿ-ನಾಗ್ಪುರ ಮತ್ತು ಸಿಕಂದರಾಬಾದ್-ವಾಡಿ ಜೊತೆಗೆ ಕಸಾರಾ-ಮನ್ಮಾಡ್, ಖಾರ್ಸಿಯಾ-ನಯಾ ರಾಯ್ಪುರ್-ಪರ್ಮಲ್ಕಾಸಾವನ್ನು ಮೇಲ್ದರ್ಜೆಗೇರಿಸುವುದು ಪ್ರಮುಖ ಕಾಮಗಾರಿಗಳಾಗಿರಲಿವೆ. ಸರಕಿನಲ್ಲಿ 3000 ಎಂಟಿ ಕೇಂದ್ರೀಕೃತ ಮಿಷನ್‌ ನೊಂದಿಗೆ, ಇಂಧನ ಭದ್ರತೆ, ಬಂದರು ಸಂಪರ್ಕ, ವೇಗದ ಕಲ್ಲಿದ್ದಲು ಸಾಗಣೆ, ಜಾಲ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ದೇಶದ ಕರಾವಳಿ ವ್ಯಾಪಾರ ವಹಿವಾಟು ಹೆಚ್ಚಿಸಲು ಈ ರೈಲು ಯೋಜನೆಗಳು ಸಹಕಾರಿಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+