BMTC Good News: ಬೆಂಗಳೂರಿನ ಈ ಭಾಗದ ಪ್ರಯಾಣಿಕರಿಗೆ ಬಿಎಂಟಿಸಿ ಭರ್ಜರಿ ಗುಡ್ನ್ಯೂಸ್
ಬೆಂಗಳೂರು: ಬೆಂಗಳೂರಿನ ಮೆಟ್ರೋ ಮತ್ತು ಬಸ್ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ಹೊಸ ಬಸ್ ಸೇವೆ ಹಾಗೂ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಮ್ಮ ಮೆಟ್ರೋದ ಯೆಲ್ಲೋ ಲೈನ್ ಮಾರ್ಗವು ಬೆಂಗಳೂರಿನ ಮಧ್ಯ ಭಾಗ ಮತ್ತು ದಕ್ಷಿಣದ ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಇದೀಗ ಈ ಮಾರ್ಗದಲ್ಲಿ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಗಡಿಪ್ರದೇಶ ವ್ಯಾಪ್ತಿಯಲ್ಲಿ ಬಸ್ಗಳ ಸೇವೆಯನ್ನು ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇದೆ. ತಮಿಳುನಾಡು ಗಡಿ ಮತ್ತು ಇತರ ಉಪನಗರಗಳ ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇದೆ. ಬಿಎಂಟಿಸಿ ಫೀಡರ್ ಸೇವೆಗಳನ್ನು ನೀಡಲು ಮೊದಲಿನಿಂದಲೂ ಬೇಡಿಕೆ ಇದೆ.

ಇದೀಗ ಬೆಂಗಳೂರಿನ ದಕ್ಷಿಣ ಉಪನಗರವಾದ ಆನೇಕಲ್ ಪ್ರದೇಶದಲ್ಲಿ ಪ್ರಯಾಣಿಕರಿಂದ ಬಸ್ ಬೇಡಿಕೆ ಹೆಚ್ಚಳವಾಗಿದ್ದು, ಬಿಎಂಟಿಸಿಯು ಹೊಸ ಅಪ್ಡೇಟ್ಸ್ ಕೊಟ್ಟಿದೆ. 361C ಮತ್ತು 356M ಬಸ್ ಮಾರ್ಗಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಆನೇಕಲ್ಗೆ ಹೆಚ್ಚುವರಿ ಫೀಡರ್ ಬಸ್ಗಳ ಸೇವೆ ಕಲ್ಪಿಸಬೇಕು ಎನ್ನುವ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.
ಬಿಎಂಟಿಸಿಯು ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಆನೇಕಲ್ ಬಸ್ ನಿಲ್ದಾಣದಿಂದ ಚಿಕ್ಕ ಹೆಗ್ದೆ ಕ್ರಾಸ್, ಇಗ್ಗಲೂರು ಹಾಗೂ ಚಂದಾಪುರ ಮಾರ್ಗವಾಗಿ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾರ್ಗ ಸಂಖ್ಯೆ ಎಂ.ಎಫ್-22ಡಿ ರಲ್ಲಿ ಬಸ್ ಸಂಚಾರ ಸೇವೆಯನ್ನು ಜನವರಿ 5 ರಿಂದ ಹೆಚ್ಚಿಸಿದೆ.
ಆನೇಕಲ್ ಬಸ್ ನಿಲ್ದಾಣ - ಬೊಮ್ಮಸಂದ್ರ ಮೆಟ್ರೋ (ಸ್ಟೇಷನ್ ಬಿಡುವ ವೇಳೆ)
5:35, 5:55, 6:15, 6:35, 7:00, 7:20, 7:45, 8:05, 8:35, 8:55, 9:10, 9:30, 9:50, 10:45, 10:55, 11:05. 12:50, 14:45, 14:50, 15:10, 15:35, 15:55, 16:20, 16;40, 17:20. 17:40. 18:10, 18:30, 19;05, 19;25, 19:55, 20:15, 21:00, 21:20 5:35, 5:55, 6:15, 6:35, 7:00, 7:20, 7:45, 8:05, 8:35, 8:55, 9:30, 9:50, 10:05, 10:45, 11:05. 12;05, 14:00, 15:35, 15:50, 15:55, 16:20, 16:40, 17:20, 17:40, 18:10, 18:30, 19:05, 19:25, 19;55, 20:15, 21:00, 21:20
ಪೀಕ್ ಅವರ್ನಲ್ಲಿ ಸಮಸ್ಯೆ
ಬೆಂಗಳೂರಿನ ಈ ಪ್ರದೇಶ ಹಾಗೂ ಹೊರ ವಲಯಗಳಲ್ಲಿ ಪೀಕ್ ಅವರ್ನಲ್ಲಿ ಬಸ್ಗಳು ಸಿಗದೆ ಸಮಸ್ಯೆ ಆಗುತ್ತಿದೆ. ಆನೇಕಲ್ ತಲುಪಲು ಚಂದಾಪುರಕ್ಕೆ ಹೋಗಿ ಅಲ್ಲಿಂದ ಮತ್ತೊಂದು ಬಸ್ ಮೂಲಕ ಹೋಗಬೇಕಾದ ಅನಿವಾರ್ಯತೆ ಇದೆ. ಬೊಮ್ಮಸಂದ್ರ ಮತ್ತು ಆನೇಕಲ್ ನಡುವೆ ಫೀಡರ್ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಪೀಕ್ ಸಮಯದಲ್ಲಿ ಲಭ್ಯತೆಯ ಕೊರತೆಯಿಂದಾಗಿ ಸಮಸ್ಯೆ ಆಗುತ್ತಿದೆ ಎಂದು ಈ ಭಾಗದ ಜನ ದೂರಿದ್ದರು. ಕೊನೆಯ ಬಸ್ ಸಂಜೆ 4 ಗಂಟೆಗೆ ಹೊರಡುತ್ತದೆ. ಇದು ಪೀಕ್ ಸಮಯದಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಇರುವುದಿಲ್ಲ. ಇದರಿಂದ ಈ ಭಾಗದಲ್ಲಿ ಪ್ರಯಾಣ ಮಾಡುವುದು ಕಷ್ಟವಾಗುತ್ತದೆ ಎಂದು ಈ ಭಾಗದ ಜನ ಬಿಎಂಟಿಸಿಗೆ ಮನವಿ ಮಾಡಿದ್ದರು. ಇದೀಗ ಈ ಭಾಗದ ಜನರ ಬೇಡಿಕೆಗೆ ಕೊನೆಗೂ ಬಿಎಂಟಿಸಿ ಸ್ಪಂದಿಸಿದೆ.
ಭವಿಷ್ಯದಲ್ಲಿ ಫೀಡರ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಮೆಟ್ರೋ ಸೇವೆ ವಿಸ್ತರಣೆ ಆಗುತ್ತಿದ್ದು ಈ ಭಾಗಗಳಲ್ಲಿ ಬಿಎಂಟಿಸಿ ಫೀಡರ್ ಸೇವೆಯನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಇದರಿಂದ ಬೆಂಗಳೂರಿನಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ( ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಮೂಹ ಸಾರಿಗೆ) ಮೂಲಕ ಹೋಗುವುದಕ್ಕೆ ಅನುಕೂಲವಾಗಿದೆ.
-
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
Bengaluru: ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಮುಂದಾದ ಜಿಬಿಎ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ












Click it and Unblock the Notifications