Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಗೋಪಾಲಕೃಷ್ಣ ಕುಂಟಿನಿ ಬರಹ
Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಬರಹಗಾರ ಗೋಪಾಲಕೃಷ್ಣ ಕುಂಟಿನಿ ಅವರ ಬರಹ ಇಲ್ಲಿದೆ.
ನೇಪಾಳದಲ್ಲಿ ಹೊಸ ಸರ್ಕಾರ ಬಂದಿದ್ದು ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗಲಿಲ್ಲ. ಆದರೆ ನಿಜಕ್ಕೂ ಆದ್ಯದಲ್ಲಿ ಸುದ್ದಿಯಾಗಬೇಕಾದ ಸುದ್ದಿ ಇದು. ಏಕೆಂದರೆ ಜಗತ್ತಿನಲ್ಲಿ ಅತ್ಯಂತ ಎಳೆ ವಯಸ್ಸಿನ ತಂಡವೊಂದು ದೇಶದ ಆಡಳಿತ ಹಿಡಿದಿದೆ. ಆ ಮಂತ್ರಿ ಮಂಡಲವನ್ನು ನೋಡಿದಾಗ ಅಚ್ಚರಿ, ಸಂತೋಷ ಮತ್ತು ಅಸೂಯೆ ಎಲ್ಲ ಒಟ್ಟೊಟ್ಟಿಗೇ ಆಗುತ್ತದೆ. ಇನ್ನೂ ರೀಲ್ಸ್ ಮಾಡಿಕೊಂಡು, ಕ್ರಿಕೆಟ್‌ಗೆ ಬಿದ್ದುಕೊಂಡು, ಆ ವೇರ್ ಈ ವೇರ್ ಎಂದೆಲ್ಲ ಹಗಲೂ ಇರುಳೂ ದುಡಿದುಕೊಂಡು, ಪಿಝ್ಝಾ, ಬರ್ಗರ್, ಬಿಯರ್, ದುಕಾಟಿ, ಹಾರ್ಲೆ ಡೇವಿಡ್ಸನ್, ಕವಾಸಕಿ ನಿಂಜಾ ಅಂತ ಮೋಟಾರು ಬೈಕುಗಳಲ್ಲಿ ಹಿಮಾಲಯ ಸುತ್ತಾಡಿಕೊಂಡು, ಇನ್ಸ್ಟಾದಲ್ಲಿ ಕಲರ್ ಕಲರ್ ಕಾಗೆ ಹಾರಿಸಿಕೊಂಡು, ಒಟ್ರಾಸಿ ಭ್ರಮಾಲೋಕದಲ್ಲಿ ವಿಹರಿಸುತ್ತಿರಬೇಕಾದ ತರುಣ ತರುಣಿಯರು ದೇಶ ಕಟ್ಟುವ ಕಾಯಕಕ್ಕೆ ಬಂದಿಳಿದಿದ್ದಾರೆ. ಬನ್ನಿ ಮಕ್ಕಳೇ ದೇಶ ಕಟ್ಟಿ ಬೆಳೆಸಿ ಎಂದು ನೇಪಾಳದ ಜನ ಅವರ ಕೈಗೆ ಅಧಿಕಾರ ಕೊಟ್ಟೇ ಬಿಟ್ಟಿದ್ದಾರೆ.

ಜೆನ್ ಜೀಗಳ ಕ್ರಾಂತಿಯ ಬಳಿಕ ನೇಪಾಳದ ಸರ್ಕಾರ ಉದುರಿ ಬಿದ್ದಿತು. ಚುನಾವಣೆ ನಡೆಯಿತು. ನಾಲ್ಕೇ ನಾಲ್ಕು ವರ್ಷ ತುಂಬಿದ್ದ ಆರ್‌ಎಸ್‌ಪಿ ಇನ್ನಿಲ್ಲದ ಜಯ ಗಳಿಸಿತು. ಪಾರ್ಲಿಮೆಂಟ್ ಒಳಗೆ 275 ಸೀಟುಗಳಲ್ಲಿ 182 ಸೀಟು ತುಂಬಿಕೊಂಡಿತು. ಹದಿನೈದು ಮಂದಿಯ ತಂಡದ ನೇಪಾಳದ ಸರ್ಕಾರದ ಪ್ರಧಾನಿ ಬಾಲೇಂದ್ರ ಶಾ ಹಸಿಹಸಿ ಯುವಕ. ವಯಸ್ಸು 35. ಇವನು ಓದಿದ್ದು ಬೆಂಗಳೂರಿನಲ್ಲಿ. ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಅವನೊಬ್ಬನೇ ಅಲ್ಲ. ಅವನ ಕ್ಯಾಬಿನೆಟ್ ನಲ್ಲಿರುವ ಮತ್ತೆ ಐವರು ಭಾರತದಲ್ಲೇ ಓದಿದವರು.
Nepal: ನೇಪಾಳ ಸರಕಾರದಲ್ಲಿ ಎಲ್ಲರೂ ಎಳೆಯರೇ
ನೇಪಾಳ ಸರಕಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಎಳೆ ವಯಸ್ಸಿನವರೇ. ಗೃಹ ಮಂತ್ರಿ ಸುದನ್ ಗುರುಂಗ್ ವಯಸ್ಸು 38. ಕಾನೂನು ಮಂತ್ರಿ ಶೋಬಿತಾ ಗೌತಮ್ ವಯಸ್ಸು 30. ಸಾಮಾನ್ಯ ಆಡಳಿತ ಇಲಾಖೆಯ ಮಂತ್ರಿ ಪ್ರತಿಭಾ ರಾವೆಲ್‌ಗೆ 32 ವರ್ಷ. ಕೃಷಿ ಸಚಿವೆ ಗೀತಾ ಚೌಧುರಿ 33 ವರ್ಷ ವಯಸ್ಸಿನ ಹೆಣ್ಮಗಳು. ಕಾರ್ಮಿಕ ಮಂತ್ರಿ ದೀಪಕ್ ಶಾಗೆ 34 ವರ್ಷ. ಶಿಕ್ಷಣ ಮಂತ್ರಿ ಸಸ್ಮಿತಾ ಪೋಖಾರೆಲ್ 29 ವರ್ಷದ ಹುಡುಗಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾದಿಗೆ 30 ವರ್ಷ ವಯಸ್ಸು. ಆರೋಗ್ಯ ಸಚಿವ ನಿಶಾ ಮೊಹಾತೋಗೆ 38 ವರ್ಷ ವಯಸ್ಸು. ಸಾರಿಗೆ ಮಂತ್ರಿ ಸುನೀಲ್ ಲಾಮ್ಸಾಲ್‌ಗೆ 35.
ಹೆಚ್ಚಿನ ಎಲ್ಲರೂ ಮಾಸ್ಟರ್ಸ್ ಓದಿದವರು, ಪಿಎಚ್ ಡಿ ಮಾಡಿದವರು. ಒಟ್ಟಾರೆ High Academic Profile ಉಳ್ಳವರು. ತರುಣ ಕನಸುಗಳು ದೊಡ್ಡದು. Every great accomplishment starts with a youthful dream ಅಂತಾರಲ್ಲ ಹಾಗೆ. ನೇಪಾಳದಂತಹ ಬೆಟ್ಟಗಾಡು ಹಿಮಪರ್ವತದ ನಾಡನ್ನು ಆಳುವುದಕ್ಕೆ ಒಂದು ವಿಚಿತ್ರ ತವಕ ಮತ್ತು ಸೊಗಡು ಬೇಕು. ಈ ತರುಣ ತಂಡದಲ್ಲಿ ಅದು ತುಂಬಿಕೊಂಡಂತಿದೆ. This is a time for bold measures, This is the country, and we are the generation ಎನ್ನುತ್ತಾ ನೂರಂಶದ ಕಾರ್ಯಕ್ರಮವನ್ನು ಯುವ ಸರ್ಕಾರ ಪ್ರಕಟಿಸಿದೆ.
ನೇಪಾಳದ ಶಿಷ್ಟಾಚಾರ ಹೇಗೆ ಎಂದರೆ ಪ್ರಧಾನಿ ಅಧಿಕಾರ ಸ್ವೀಕರಿಸಿದ ಬಳಿಕ ತನ್ನ ಮೊದಲ ವಿದೇಶ ಪ್ರವಾಸವನ್ನು ಭಾರತದಿಂದ ಆರಂಭಿಸುವುದು. ಹಿಂದಿನ ಪ್ರಧಾನಿ ಓಲಿ ಆ ಶಿಷ್ಟಾಚಾರವನ್ನು ಮುರಿದು ಚೀನಾಕ್ಕೆ ಹೋಗಿದ್ದ. ಕಾರಣ ಆತನದ್ದು ಸಿಪಿಎನ್ -ಯುಎಂಎಲ್ ಎಂಬ ಕಮ್ಯುನಿಸ್ಟ್ ಪಕ್ಷ. ಸಹಜವಾಗಿಯೇ ಆತ ಚೀನಾ ಪರ ಒಲವು ಹೊಂದಿದವನಾಗಿದ್ದ. ಅದನ್ನು ಬಳಸಿಕೊಂಡು ಚೀನಾ ನೇಪಾಳದೊಳಗೆ ಕಡ್ಡಿ ಆಡಿಸುತ್ತಿತ್ತು. ಈಗ ಹೊಸ ಹುಡುಗರ ತಂಡ ಬಂದಿದೆ. 74 ವರ್ಷದ ಓಲಿಯನ್ನು ಜೈಲಿಗೆ ಹಾಕಿದೆ. ಭಾರತದ ಪರವಾಗಿ ಈ ತರುಣ ತರುಣಿಯರ ಸರಕಾರ ಹೇಗೆ ಇರಲಿದೆ ಎಂಬುದನ್ನು ನೋಡಬೇಕು. ಯಾವುದಕ್ಕೂ ಒಂದು ಆಲ್ ದ ಬೆಸ್ಟ್ ಹೇಳಿಬಿಡೋಣ.
ಬರಹ: ಗೋಪಾಲಕೃಷ್ಣ ಕುಂಟಿನಿ
-
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್ -
Amruthadhare Serial: ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲ್ಲಿ ಮದುವೆ ಬಳಿಕ ಹೊಸ ತಿರುವು, ಜೆಡಿ ಪ್ಲ್ಯಾನ್ಗೆ ಸುನೀಲ್ ವಿಲನ್ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ












Click it and Unblock the Notifications