Bengaluru Cost of Living: ಬೆಂಗಳೂರಿನಲ್ಲಿ ಕುಟುಂಬದ ಮಾಸಿಕ ಖರ್ಚು ₹1.47 ಲಕ್ಷ; ದುಬಾರಿ ಜೀವನದ ಬಗ್ಗೆ ಚರ್ಚೆ
Bengaluru Cost of Living: ಬೆಂಗಳೂರಿನಲ್ಲಿ ಜೀವನ ವೆಚ್ಚ ಹಾಗೂ ನಿರ್ವಹಣೆ ದುಬಾರಿ ಆಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತು ಹಾಗೂ ಸೇವೆಗಳು ದುಬಾರಿ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜೀವನ ವೆಚ್ಚ ಏರಿಕೆ ಆಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ಚರ್ಚೆ ಶುರುವಾಗಿದೆ.
ಕುಟುಂಬವೊಂದು ಬೆಂಗಳೂರಿನಲ್ಲಿ ಮಾಸಿಕ ಬಜೆಟ್ ಮೊತ್ತವು 1.47 ಲಕ್ಷ ರೂಪಾಯಿ ಎಂದು ಹೇಳಿದ ಮೇಲೆ ಈ ಚರ್ಚೆ ಜೋರಾಗಿದೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ, ಮಕ್ಕಳ ಆರೈಕೆ, ಮನೆಕೆಲಸ, ದಿನಸಿ, ವಿಮೆ ಮತ್ತು ನಿಯಮಿತ ವೆಚ್ಚಗಳಿಗೆ ಈ ಹಣವನ್ನು ವ್ಯಯಿಸುತ್ತಿರುವುದಾಗಿ ಕುಟುಂಬದವರು ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ನಾವು ಯಾವುದೇ ದುಂದು ವೆಚ್ಚ ಸಹ ಮಾಡುತ್ತಿಲ್ಲ ಎಂದೂ ಕುಟುಂಬದವರು ಹೇಳಿದ್ದಾರೆ. ಆದರೆ, ಯಾವುದೇ ದುಂದು ವೆಚ್ಚವಿಲ್ಲದೆ ಬೆಂಗಳೂರಿನಲ್ಲಿ ಇಷ್ಟೊಂದು ಹಣ ಖರ್ಚಾಗುತ್ತಿರುವುದ್ಯಾಕೆ ಎಂದು ಹೇಳಲಾಗಿದೆ.

ಬೆಂಗಳೂರು ತುಂಬಾ ದುಬಾರಿಯಾಗಿದೆ ಎನ್ನುವ ಸಾಲುಗಳೊಂದಿಗೆ ರೆಡ್ಡಿಟ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗಿದೆ. ತಮ್ಮ ಸಂಗಾತಿ ಮತ್ತು ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿರುವುದಾಗಿ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದು, ತಮ್ಮ ಮಾಸಿಕ ವೆಚ್ಚಗಳ ವಿವರವನ್ನು ಹಂಚಿಕೊಂಡಿದ್ದಾರೆ ಮತ್ತು ಬೆಂಗಳೂರಿನಲ್ಲಿ ನೀವು ನಿಮ್ಮ ಹಣವನ್ನು ಹೇಗೆ ಮ್ಯಾನೇಜ್ ಮಾಡುತ್ತೀರಿ ಎಂದು ಅವರು ಕೇಳಿದ್ದಾರೆ.
ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಕುಟುಂಬವು ತಮ್ಮ ತಿಂಗಳ ಬಜೆಟ್‌ನಲ್ಲಿ ದಾದಿಗೆ 20,000 ರೂ.ಗಳು, ಅಡುಗೆ ಮಾಡುವವರಿಗೆ 9,000 ರೂ.ಗಳು, ಸೇವಕಿಗೆ 3,000 ರೂ. ಮತ್ತು ಕಾರು ಸ್ವಚ್ಛಗೊಳಿಸುವವರಿಗೆ 1,000 ರೂ. ಕೊಡುತ್ತಿರುವುದಾಗಿ ಹೇಳಿದ್ದಾರೆ. ಬಾಡಿಗೆ 45,000 ರೂ. ನಿರ್ವಹಣೆಗೆ 4,000 ರೂ. ಆಗುತ್ತಿದೆ. ಕುಟುಂಬದ ಆಹಾರ ಮತ್ತು ದಿನಸಿಗಾಗಿ 20,000 ರೂ.ಗಳನ್ನು, ವಿಮೆಗಾಗಿ 25,000 ರೂ.ಗಳನ್ನು ಮತ್ತು ತಮ್ಮ ವೈಯಕ್ತಿಕ ಖರ್ಚುಗಳಿಗಾಗಿ 20,000 ರೂ.ಗಳನ್ನು ಖರ್ಚು ಮಾಡುತ್ತಿರುವುದಾಗಿ ಹೇಳಿದ್ದಾರೆ.
ಒಟ್ಟಾರೆ ತಿಂಗಳಿಗೆ 1.47 ಲಕ್ಷ ರೂಪಾಯಿ ಅಥವಾ ವರ್ಷಕ್ಕೆ ಸುಮಾರು 17.64 ಲಕ್ಷ ರೂ. ವೆಚ್ಚ ಮಾಡುತ್ತಿರುವುದಾಗಿ ಕುಟುಂಬವು ಹೇಳಿಕೊಂಡಿದೆ. ಅಲ್ಲದೆ ಬೆಂಗಳೂರಿನಲ್ಲಿ ಬಾಡಿಗೆಗೆ ದುಬಾರಿ ಮೊತ್ತವನ್ನು ಖರ್ಚು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಮನೆಕೆಲಸ ಮತ್ತು ಮಕ್ಕಳ ಆರೈಕೆಯು ಮಾಸಿಕ ಬಜೆಟ್‌ನಲ್ಲಿ ಭಾರೀ ಮೊತ್ತದ ಹಣ ಖರ್ಚಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
Bengaluru Cost of Living: ಬೆಂಗಳೂರಿನ ದುಬಾರಿ ವೆಚ್ಚದ ಬಗ್ಗೆ ಚರ್ಚೆ
ಇನ್ನು ಬೆಂಗಳೂರಿನಲ್ಲಿ ದುಬಾರಿ ವೆಚ್ಚದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಭಾರೀ ಹೆಚ್ಚಾಗಿದೆ. ಆದರೆ, ಇಷ್ಟೊಂದು ಬಾಡಿಗೆ ನೀಡುವ ಅವಶ್ಯಕತೆ ಇಲ್ಲ. ನೀವು ಐಷಾರಾಮಿ ಜೀವನ ನಡೆಸಬೇಕು ಎಂದರೆ ಇಷ್ಟೊಂದು ಹಣ ಖರ್ಚಾಗುತ್ತದೆ. ಸರಳ ಜೀವನ ನಡೆಸುವುದಕ್ಕೆ ಅಷ್ಟೊಂದು ಹಣ ಖರ್ಚಾಗುವುದಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications
