ಬೆಂಗಳೂರು, ನವೆಂಬರ್ 14 : ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಹಾಗೂ ಟಿಪ್ಪು ಸುಲ್ತಾನರ ಸಂಘಟನೆಗಳ ಒಕ್ಕೂಟದ ವತಿಯಿಂದ ಟಿಪ್ಪು ಜಯಂತಿ ಅಂಗವಾಗಿ ಟಿಪ್ಪು ಸುಲ್ತಾನರ 8ನೇ ಪೀಳಿಗೆಯ ಮರಿ ಮೊಮ್ಮಕ್ಕಳಿಗೆ ಮಂಗಳವಾರ(ನ.14)ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುಲ್ತಾನ್ ಏಕತಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಝಗಮಗಿಸುವ ರಾಜ ಧಿರಿಸು, ಝಳಪಿಸುವ ಖಡ್ಗ: ಸಿದ್ದು ವಿಭಿನ್ನ ಪೋಸು!
ಟಿಪ್ಪುವಿನ 8ನೇ ಮರಿಮೊಮ್ಮಕ್ಕಳಾದ ಬಿಲಾಲ್ ಅಲಿ ಷಾ, ಸುಲ್ತಾನ್ ಮತ್ತು ಫರಾಜ್ ಆಲಿ ಷಾ ಸುಲ್ತಾನ್ ಅವರನ್ನು ಜೂನಿಯರ್ ಟಿಪ್ಪು ಎಂದು ಪರಿಗಣಿಸಿ ಸುಲ್ತಾನ್ ಏಕತಾ ಪ್ರಶಸ್ತಿ ನೀಡಿದರು.
ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಸಂಚಾಲಕ ಸೂಫಿ ಬಲಿದಾ, ಕರ್ನಾಟಕ ಅನುದಾನ ರಹಿತ ಅಲ್ಪ ಸಂಖ್ಯಾತರ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗುಲ್ಫಾನ್ ಅಹಮದ್, ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖ್ ಅಹಮದ್ ಉಪಸ್ಥಿತರಿದ್ದರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!