ಝಗಮಗಿಸುವ ರಾಜ ಧಿರಿಸು, ಝಳಪಿಸುವ ಖಡ್ಗ: ಸಿದ್ದು ವಿಭಿನ್ನ ಪೋಸು!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 11: ಸದಾ ಬಿಳಿ ಜುಬ್ಬಾ, ಲುಂಗಿ, ಹೆಗಲಮೇಲೊಂದು ಶಾಲು ಹಾಕಿಕೊಂಡು ಸರಳ ಮುಖ್ಯಮಂತ್ರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ನ.10 ರಂದು ಕೆಲ ಕಾಲ ಸ್ವಲ್ಪ ಭಿನ್ನವಾಗಿಯೇ ಕಂಡರು!

"ಸಿದ್ದರಾಮಯ್ಯನವರ ಅಹಂಕಾರ ತೃಪ್ತಿ ಪಡಿಸೋದಕ್ಕೆ ಟಿಪ್ಪು ಜಯಂತಿ!"

ಝಗಮಗಿಸುವ ರಾಜ ಧಿರಿಸು ತೊಟ್ಟು, ಝಳಪಿಸುವ ಖಡ್ಗ ಹಿಡಿದು, ತಲೆ ಮೇಲೊಂದು ಕಿರೀಟ ಇಟ್ಟುಕೊಂಡು ಒಂದು ಚಣ ಗುರುತೇ ಸಿಕ್ಕಂದಂತೆ ಕಂಡರು ಅಹಿಂದ ನಾಯಕ ಸಿದ್ದರಾಮಯ್ಯ!

'ಟಿಪ್ಪು ಜಯಂತಿಗೆ ವಿರೋಧ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತಕರಾರಿಲ್ಲ'

ನ.10 ರಂದು ರಾಜ್ಯದಾದ್ಯಂತ ವಿವಾದಗಳ ನಡುವಲ್ಲೂ ನಡೆದ ಟಿಪ್ಪು ಜಯಂತಿಯಂದು ಸಿದ್ದರಾಮಯ್ಯ ಟಿಪ್ಪು ವೇಷ ಧರಿಸಿದ್ದರು. ಯಾವ ಅಹಿತಕರ ಘಟನೆಯಿಲ್ಲದೆ ಕೊನೆಗೂ ತಮ್ಮ ಹಠ ಸಾಧಿಸಿಕೊಂಡ ಸಿದ್ದರಾಮಯ್ಯ ನಿನ್ನೆ ಸಂಜೆ ವಿಧಾನ ಸೌಧದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು.

ಈ ಪೋಸಿನ ಅರ್ಥವೇನು..?

ಈ ಪೋಸಿನ ಅರ್ಥವೇನು..?

ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆ, 2018 ರ ವಿಧಾನ ಸಭೆ ಚುನಾವಣೆ, ಅಲ್ಪಸಂಖ್ಯಾತರ ಮತ, ಬಲಪಂಥೀಯರ ಕೆಂಗಣ್ಣು... ಈ ಎಲ್ಲವುಗಳನ್ನು ಇಂಥ ಪೋಸು ನೀಡುವ ಮೂಲಕ ಎದುರಿಸುತ್ತಿದ್ದಾರಾ ಮುಖ್ಯಮಂತ್ರಿ ಸಿದ್ದರಾಮಯ್ಯ?

ಕೊನೆಗೂ ಕೈಗೆಟಕಿತು ಜಿಎಸ್ ಟಿ!

ಕೊನೆಗೂ ಕೈಗೆಟಕಿತು ಜಿಎಸ್ ಟಿ!

23 ನೇ ಜಿಎಸ್ ಟಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆಯ ಸ್ಲಾಬ್ ಗಳನ್ನು ಪರಿಶೀಲಿಸಿ, ಕಡಿತಗೊಳಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಕ್ರಮವ್ನು ಸ್ವಾಗತಿಸಿ ಪಾಟ್ನಾದಲ್ಲಿ ಜನಸಾಮಾನ್ಯರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ್ದು ಹೀಗೆ. 177 ವಸ್ತುಗಳ ಮೇಲಿನ ಜೆಸ್ಟಿಯನ್ನು ಇಳಿಕೆ ಮಾಡಿ ನಿನ್ನೆ ಅರುಣ್ ಜೇಟ್ಲಿ ಆದೇಶ ಹೊರಡಿಸಿದ್ದರು.

ಕಾಶ್ಮೀರಿ ಸಂತ್ರಸ್ಥರಿಗೆ ಸಾಂತ್ವನದ ಸ್ಪರ್ಶ

ಕಾಶ್ಮೀರಿ ಸಂತ್ರಸ್ಥರಿಗೆ ಸಾಂತ್ವನದ ಸ್ಪರ್ಶ

ಕಾಶ್ಮೀರಿ ಸಂತ್ರಸ್ಥರಿಗಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿಯವರು ಹಮ್ಮಿಕೊಂದಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಕಂಡಿದ್ದು ಹೀಗೆ. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸೆಯಿಂದಾಗಿ ಸಂಕಷ್ಟ ಪಡುತ್ತಿರುವ ಸಂತ್ರಸ್ಥರ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ, ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸಲಾಯಿತು.

ರಾಜಕೀಯ ಸೇರ್ತೀರಂತೆ, ಹೌದಾ..?!

ರಾಜಕೀಯ ಸೇರ್ತೀರಂತೆ, ಹೌದಾ..?!

"ಹೆಲೋ, ಕಮಲ್, ರಾಜಕೀಯ ಸೇರ್ತಿದ್ದೀರಂತ ಸುದ್ದಿ ಬಂತು... ಹೌದಾ? ರಾಜಕೀಯದಲ್ಲೇ ಇನ್ನೂ ಚೆನ್ನಾಗಿ ನಟನೆ ಮಾದ್ಬಹುದು ಅಂತಾನಾ..?!" ಎಂದು ಕಮಲ್ ಹಾಸ್ ಅವರನ್ನು ಬಾಲಿವುಡ್ ಬಿಗ್ ಬಿ ರೇಗಿಸುತ್ತಿದ್ದಾರಾ..? ಕಮಲ್ ಹಾಸನ್ ರಾಜಕೀಯಕ್ಕೆ ಸೇರುತ್ತಾರಂತೆ ಅನ್ನೋ ಸುದ್ದಿಗೂ ಈ ಇಬ್ಬರು ದಿಗ್ಗಜರ ಈ ನಗುವಿಗೂ ಸಂಬಂಧ ಕಲ್ಪಿಸಬಹುದಾ..? ಕೋಲ್ಕತ್ತಾದಲ್ಲಿ ನಡೆಯುತ್ತಿರುವ 23 ನೇ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸ್ ಹಾಸ್ಯಚಟಾಕಿಗೆ ನಕ್ಕು ಹಗುರಾಗಿದ್ದು ಹೀಗೆ! ನಿನ್ನೆ(ನ.10)ಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದೇಶದ ಪ್ರಸಿದ್ಧ ಸಿನಿ ತಾರೆಯರು ಭಾಗವಹಿಸಿದ್ದಾರೆ.

ramp ಮೇಲೆ ಬಳಕುವ ಬಳ್ಳಿ!

ramp ಮೇಲೆ ಬಳಕುವ ಬಳ್ಳಿ!

ನ.10 ರಂದು ಪಾಕಿಸ್ಥಾನ ಕರಾಚಿಯಲ್ಲಿ ನಡೆದ "ಮೇಡ್ ಇನ್ ಪಾಕಿಸ್ತಾನ್ ಫ್ಯಾಷನ್ ಶೋಕಾಸ್ 2017" ರಲ್ಲಿ ದೀಪಿಕಾ ಪೆರ್ವಾನಿ ಎಂಬ ವಸ್ತ್ರ ವಿನ್ಯಾಸಕಿ ವಿನ್ಯಾಸಗೊಳಿಸಿದ ಉಡುಗೆ ತೊಟ್ಟು ರೂಪದರ್ಶಿಯೊಬ್ಬರು ramp ವಾಕ್ ಮಾಡಿದ್ದು ಹೀಗೆ.

ಬ್ಯಾನ್ ಟ್ರಂಪ್!

ಬ್ಯಾನ್ ಟ್ರಂಪ್!

ಏಶ್ಯಾದ ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಅಮಅಎರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು(ನ.11) ಫಿಲಿಪೈನ್ಸ್ ಗೆ ಭೇಟಿ ನೀಡಲಿದ್ದಾರೆ. ಆದರೆ ಇಲ್ಲಿನ ಮನಿಲಿಯಾದಲ್ಲಿರುವ ಕೆಲವು ಟ್ರಂಪ್ ವಿರೋಧಿಗಳು ತಮ್ಮ ದೇಶಕ್ಕೆ ಟ್ರಂಪ್ ಭೇಟಿ ನೀಡುವುದು ಬೇಡ ಎಂದು, ಟ್ರಂಪ್ ಚಿತ್ರಕ್ಕೆ ಕೆಂಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru : Karnataka Chief Minister Siddaramaiah holds the sword and wear a crown like Hazrat Tipu Sultan during the celebration of Tippu Jayanti at Vidhan Soudha in Bengaluru on Nov 11th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ