ವಾಯುಮಾಲಿನ್ಯ : ಬೆಂಗಳೂರು ಸಹ ಅಪಾಯದ ಅಂಚಿನಲ್ಲಿ!

Posted By: Nayana
Subscribe to Oneindia Kannada

ಬೆಂಗಳೂರು-ನವೆಂಬರ್ 10 : ನಿರಂತರವಾಗಿ ಸುರಿದ ಮಳೆಯಿಂದ ಬೆಂಗಳೂರು ನಗರದ ಹವಮಾನ ದ ಗುಣಮಟ್ಟ ದೇಶದ ರಾಜಧಾನಿ ದೆಹಲಿಗಿಂತ ಉತ್ತಮವಾಗಿದೆ. ಆದರೆ, ಚಳಿಗಾಲ ಸಮೀಪಿಸುತ್ತಿದ್ದಂತೆ ದಟ್ಟವಾದ ಮಂಜು ಕವಿಯುವ ಸಾಧ್ಯತೆ ಇದೆ.

ದೆಹಲಿ ಮಾಲಿನ್ಯ: ನಿರ್ಮಾಣ ಕಾರ್ಯ, ಟ್ರಕ್ ಪ್ರವೇಶಗಳಿಗೆ ನಿರ್ಬಂಧ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಳಿಗಾಲ ಬೆಂಗಳೂರು ಜನರಿಗೆ ಆರೋಗ್ಯಕರವಲ್ಲ ಎಂದು ಎಚ್ಚರಿಕೆ ನೀಡಿದೆ. ನಗರದ ವಾಹನ ಸಂಚಾರದಿಂದ ಶೇ.42, ದಟ್ಟ ಮಂಜಿನಿಂದ ಶೇ.20, ಕಟ್ಟಡ ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳಿಂದ ಶೇ.14 ಹಾಗೂ ತ್ಯಾಜ್ಯದಿಂದ ಶೇ.೩ರಷ್ಟು ಮಾಲಿನ್ಯ ವಾತಾವರಣದ ಮೇಲೆ ಪರಿಣಾಮ ಬೀರಲಿದೆ.

Rising air pollution worried Bengaluru too!

ರಾಜಧಾನಿಯ 70ಲಕ್ಷ ವಾಹನಗಳು ನಗರದ ಇಡೀ ವಾಯುಗುಣವನ್ನು ಹಾಳು ಮಾಡುತ್ತಿದೆ ಎಂದು ಎಚ್ಚರಿಸಲಾಗಿದೆ. ಬೆಂಗಳೂರು ನಗರದ ರಸ್ತೆಗಳ ಧೂಳು ಹಾಗೂ ವಾಹನಗಳು ಹೊರ ಹಾಕುವ ಹೊಗೆಯನ್ನು ನಿಯಂತ್ರಿಸದಿದ್ದಲ್ಲಿ ನಗರದಲ್ಲಿ ಕನಿಷ್ಠ ತಾಪಮಾನವನ್ನು ಉಳಿಸುವುದು ಸವಾಲಾಗಬಹುದು ಎಂದು ಮಂಡಳಿ ಹೇಳಿದೆ.

ಮುಂದಿನ ದಿನಗಳಲ್ಲಿ ವಿಪರೀತ ಸೆಖೆ ಹಾಗೂ ಕನಿಷ್ಠ ತಾಪಮಾನ ಹೆಚ್ಚಾಗಿ ವಾಯು ಮಾಲಿನ್ಯದ ಪ್ರಮಾಣ ದೆಹಲಿಗಿಂತಲೂ ಭೀಕರವಾದರೆ ಅಚ್ಚರಿ ಪಡಬೇಕಿಲ್ಲ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ದೇಶದ ಅತಿ ಹೆಚ್ಚು ಮಲಿನಗೊಂಡಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸದ್ಯ 7ನೇ ಸ್ಥಾನ ಪಡೆದುಕೊಂಡಿದೆ.

ದೇಶದ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಮನುಷ್ಯನು ಜೀವಿಸಲು ಅಸಾಧ್ಯವಾದ 10 ರಿಂದ 25 ಪರ್ಟಿಕ್ಯುಲೇಟ್ ಮ್ಯಾಟರ್ 10 ವಾಯು ಮಾಲಿನ್ಯ ದಾಖಲಾಗಿರುವುದು ಈಗಾಗಲೇ ಪ್ರಕೃತಿ ಮನುಷ್ಯನಿಗೆ ರವಾನಿಸಿರುವ ಎಚ್ಚರಿಕೆಯ ಸಂದೇಶವಾಗಿದೆ.

ಕನಿಷ್ಟ 100ರಷ್ಟು ಪ್ಯಾರಾಮೀಟರ್ ವಾಯುಮಾಲಿನ್ಯಕ್ಕೆ ವಿರುದ್ಧವಾಗಿ ಯಲಹಂಕ 140ರಷ್ಟು ಹಾಗೂ ಸೆಂಟ್ರಲ್‌ ಸಿಲ್ಕ್ ಬೋರ್ಡ್ ಪ್ರದೇಶದಲ್ಲಿ 133ರಷ್ಟು ದಾಖಲಾಗಿದೆ. ಇದನ್ನು ನಿಯಂತ್ರಿಸದಿದ್ದರೆ ಇಂತಹ ಪ್ರದೇಶಗಳಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರಲಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ 51 ರಿಂದ 100 ಪ್ಯಾರಾಮೀಟರ್ ವರೆಗಿನ ಪ್ರದೇಶಗಳು ದಾಖಲಾಗಿರುವುದು ಬೆಂಗಳೂರಿನ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru may have good air quality than Delhi NCR. Karnataka Pollution control board has warned that the city could be headed for fogger days as dry winter sets in. ಚಳಿಗಾಲ ಬೆಂಗಳೂರು ಜನತೆಗೆ ಆರೋಗ್ಯಕರವಾಗಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ