ದೆಹಲಿ ಮಾಲಿನ್ಯ: ನಿರ್ಮಾಣ ಕಾರ್ಯ, ಟ್ರಕ್ ಪ್ರವೇಶಗಳಿಗೆ ನಿರ್ಬಂಧ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 09: ರಾಜಧಾನಿ ದೆಹಲಿಯ ಜನರನ್ನು ಕಂಗೆಡಿಸಿರುವ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನಿರ್ಮಾಣ ಕಾರ್ಯ ಮತ್ತು ಟ್ರಕ್ ಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ(EPCA) ಆದೇಶೀಸಿದೆ.

ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ, ಭಾನುವಾರದವರೆಗೆ ಶಾಲೆಗಳು ಬಂದ್

ಇಪಿಸಿಎಯ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಮ್ಮತಿ ಸೂಚಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಈ ನಿರ್ಧಾರವನ್ನು ಸಸ್ವಾಗತಿಸಿದ್ದಾರೆ.

Polluttion: Ban on civil construction works and entry of trucks in Delhi

ರಾಜ್ಯದಲ್ಲಿ ಕಟ್ಟಡ ನಿರ್ಮಾಣ, ಮೂಲಸೌಕರ್ಯ ನಿರ್ಮಾಣ ಸೇರಿದಂತೆ ಇತರೆ ನಿರ್ಮಾಣ ಕಾರ್ಯಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಅತ್ಯವಶ್ಯಕ ವಸ್ತುಗಳನ್ನು ಹೊತ್ತು ತರುವ ಟ್ರಕ್ ಗಳನ್ನು ಬಿಟ್ಟರೆ ಬೇರೆ ಟ್ರಕ್ ಗಳಿಗೆ ರಾಜಧಾನಿಗೆ ಪ್ರವೇಶವಿಲ್ಲ ಎಂದು ಇಪಿಸೆ ಸ್ಪಷ್ಟಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Authorities in Delhi ordered an immediate halt on civil construction works and banned the entry of trucks, except those carrying essential commodities, in the city as the EPCA announced that pollution levels have hit 'severe plus'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ