ನೀರಾವರಿ, ಮಹಿಳಾ ಕಲ್ಯಾಣ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ: ವಿಪಕ್ಷಗಳಿಗೆ ಸಿಎಂ ತಿರುಗೇಟು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ಕಳೆದಿದ್ದು, ತುಮಕೂರಿನಲ್ಲಿ ಅದ್ಧೂರಿ 'ಸಾಧನಾ ಸಮಾವೇಶ' ನಡೆದಿದೆ. ಇದಕ್ಕೆ ವಿಪಕ್ಷ ನಾಯಕರು ಒಂದಷ್ಟು ಟೀಕೆಗಳನ್ನು ಮಾಡಿದ್ದರು. ಇದೀಗ ಅದಕ್ಕೆಲ್ಲ ಉತ್ತರ ಎಂಬಂತೆ ಸಿದ್ದಾಮಯ್ಯ ಅವರು ಮಹಿಳಾ ಸಬಲೀಕರಣ, ನೀರಾವರಿಯಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ಮಾಡಿದ್ದು, ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿದ್ದೇವೆ. ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

CM Siddaramaiah

ರಾಜ್ಯದ ನೀರಾವರಿ ಸೌಕರ್ಯ ವೃದ್ಧಿಗೆ ಆದ್ಯತೆ

ರಾಜ್ಯದ ಬಯಲುಸೀಮೆಯ 7 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದಲ್ಲಿ ಲಿಫ್ಟ್‌ ಘಟಕ ಕಾಮಗಾರಿಗಳು ಮತ್ತು ವಿದ್ಯುತ್‌ ಘಟಕ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿದ್ದೇವೆ.

ಬೆಂಗಳೂರಿನ ಈ ಅಂಡರ್‌ಪಾಸ್‌ ವಾಹನ ಸಂಚಾರಕ್ಕೆ ಯೋಗ್ಯವಲ್ಲ: ಪಾಲಿಕೆ ಅಲರ್ಟ್‌
ಬೆಂಗಳೂರಿನ ಈ ಅಂಡರ್‌ಪಾಸ್‌ ವಾಹನ ಸಂಚಾರಕ್ಕೆ ಯೋಗ್ಯವಲ್ಲ: ಪಾಲಿಕೆ ಅಲರ್ಟ್‌

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ಕೆಲಸ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ವಿಶೇಷ ವಿಭಾಗ ಮತ್ತು ಉಪವಿಭಾಗ ಕಚೇರಿಗಳ ರಚಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅನುಷ್ಟಾನಕ್ಕಾಗಿ ಭೂ ಪರಿಹಾರವನ್ನು ಪಡೆಯಲು ಒಪ್ಪಿದ ಮುಳುಗಡೆ ಹೊಂದಲಿರುವ 8 ಗ್ರಾಮಗಳ ರೈತರಿಗೆ 446.40 ಕೋಟಿ ರೂ.ಮೊತ್ತದ ಭೂ ಪರಿಹಾರದ ಚೆಕ್‌ ವಿತರಿಸಲು ಕ್ರಮವಹಿಸಿದ್ದೇವೆ.

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಒತ್ತು

ಇಡಿಗಂಟು ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂಪಾಯಿ ಮತ್ತು ಸಹಾಯಕಿಯರಿಗೆ 30,000 ರೂಪಾಯಿ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ 31 ಜಿಲ್ಲೆಗಳಲ್ಲಿ ಅಕ್ಕಪಡೆ ಸ್ಥಾಪಿಸಿದ್ದೇವೆ. ಪ್ರತಿ ಜಿಲ್ಲೆಯ 2 ಸರ್ಕಾರಿ ಕಚೇರಿಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 2 ತಾಲೂಕುಗಳಲ್ಲಿ ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ 123 ಶಿಶುಪಾಲನಾ ಕೇಂದ್ರಗಳು ಆರಂಭಿಸಲಾಗಿದೆ ಎಂದು ಅವರು ವಿವರಿಸಿದರು.

ದಿವ್ಯಾಂಗರಿಗೆ ಸರ್ಕಾರ ಆಸರೆ

ರಾಜ್ಯ ಕಾಂಗ್ರೆಸ್ ಸರ್ಕಾರ ಈ ಮೂರು ವರ್ಷಗಳಲ್ಲಿ ದಿವ್ಯಾಂಗರಿಗೆ ನೆರವು ನೀಡಿದ್ದೇವೆ. ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆಯಡಿ 49.08 ರೂಪಾಯಿ ಕೋಟಿ ವೆಚ್ಚದಲ್ಲಿ 4,888 ರೂಪಾಯಿ ತೀವ್ರತರನಾದ ದೈಹಿಕ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಿಸಲಾಗಿದೆ.

ಕಳೆದ 3 ವರ್ಷಗಳಲ್ಲಿ 8.67 ಕೋಟಿ ವೆಚ್ಚದಲ್ಲಿ 953 ವಿಕಲಚೇತನರಿಗೆ ಟಾಕಿಂಗ್‌ ಲ್ಯಾಪ್‌ಟಾಪ್‌ಗಳ ವಿತರಿಸಿದ್ದು, 1.62 ಕೋಟಿ ವೆಚ್ಚದಲ್ಲಿ 703 ಫಲಾನುಭವಿಗಳಿಗೆ ಬ್ರೈಲ್‌ ಕಿಟ್‌ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+