ರಾಗಿ ಆರೋಗ್ಯದ ಗಣಿ ನಿಜ, ಈ ಹೊತ್ತಿನಲ್ಲಿ ಸೇವಿಸಿದರೆ ಮಾತ್ರ ಸಮಸ್ಯೆ ತಪ್ಪಿದ್ದಲ್ಲ

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕರ ಆಹಾರ ಪದ್ಧತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರಲ್ಲಿ ಸೂಕ್ಷ್ಮ ಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ರಾಗಿ, ಜೋಳ, ಸಜ್ಜೆಯಂತಹ ಸೂಕ್ಷ್ಮ ಧಾನ್ಯಗಳು ದೇಹಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತವೆ. ವಿಶೇಷವಾಗಿ ಈ ಧಾನ್ಯಗಳು ದೇಹದ ತೂಕವನ್ನು ಮತ್ತು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮಲ್ಲಿ ಅನೇಕರು ರಾಗಿಯನ್ನು ಸೇವಿಸುತ್ತಾರೆ. ನಿತ್ಯ ರಾಗಿ ಮುದ್ದೆ, ರಾಗಿ ರೊಟ್ಟಿ ಸೇವಿಸುವವರೂ ಇದ್ದಾರೆ.

ರಾಗಿ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಧಾನ್ಯವನ್ನು ಎಲ್ಲಾ ಹೊತ್ತಿನಲ್ಲಿಯೂ ಸೇವಿಸಬಾರದು ಎಂದು ಕೂಡಾ ಹೇಳಲಾಗುತ್ತದೆ. ಹಾಗಾಗಿ ರಾಗಿ ಸೇವಿಸುವವರು ಇದನ್ನು ಯಾವಾಗ ತಿನ್ನಬೇಕು ಎಂಬುದರ ಬಗ್ಗೆಯೂ ಗಮನ ಹರಿಸಬೇಕು ಎನ್ನುತ್ತಾರೆ ಪೌಷ್ಟಿಕತಜ್ಞರು ಹೇಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಈ ಧಾನ್ಯಗಳನ್ನು ಸೇವಿಸುವುದರಿಂದ ಕೆಲವು ಸಮಸ್ಯೆ ಉಂಟಾಗಬಹುದು.

Best Time to Eat Ragi

ರಾತ್ರಿ ಹೊತ್ತು ರಾಗಿ ಸೇವಿಸದಿರುವುದೇ ಒಳ್ಳೆಯದು:

ರಾಗಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಅವು ನಿಧಾನವಾಗಿ ಜೀರ್ಣವಾಗುತ್ತವೆ. ಆದ್ದರಿಂದ, ರಾತ್ರಿ ಹೊತ್ತಿನಲ್ಲಿ ರಾಗಿಯನ್ನು ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು. ರಾತ್ರಿ ವೇಳೆ ರಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಹೊಟ್ಟೆ ಭಾರದಂತಹ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಇದು ಕೆಲವು ಜನರಲ್ಲಿ ನಿದ್ರಾಹೀನತೆ ಅಥವಾ ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡಬಹುದು ಎನ್ನುತ್ತಾರೆ ತಜ್ಞರು.

ಅಂದ ಹಾಗೆ ರಾಗಿಯ ಪರಿಣಾಮವು ಎಲ್ಲರಿಗೂ ಒಂದೇ ರೀತಿ ಆಗಿರುವುದಿಲ್ಲ. ಇದರ ಪರಿಣಾಮವು ಆರೋಗ್ಯ ಸ್ಥಿತಿ, ವಯಸ್ಸು, ವ್ಯಾಯಾಮ ಅಭ್ಯಾಸಗಳು ಮತ್ತು ಆಹಾರ ಪದ್ಧತಿಯನ್ನು ಅವಲಂಬಿಸಿ ಬದಲಾಗುತ್ತದೆ. ರಾತ್ರಿಯಲ್ಲಿ ರಾಗಿ ಸೇವಿಸಲೇ ಬೇಕು ಇಲ್ಲವಾದರೆ ನಿಮ್ಮ ಊಟ ಪೂರ್ಣವಾಗುವುದಿಲ್ಲ ಎನ್ನುವ ಹಾಗಿದ್ದರೆ ಅವುಗಳನ್ನು ಮಿತವಾಗಿ ತಿನ್ನಬಹುದು. ತರಕಾರಿಗಳು ಮತ್ತು ಸೂಪ್‌ನಂತಹ ಸುಲಭವಾಗಿ ಜೀರ್ಣವಾಗುವ ಆಹಾರಗಳೊಂದಿಗೆ ತಿಂದರೆ ಹೆಚ್ಚು ಸೂಕ್ತ.

ಬೆಳಗ್ಗಿನ ಉಪಹಾರದಲ್ಲಿ ಮತ್ತು ಮಧ್ಯಾಹ್ನದ ಭೋಜನದಲ್ಲಿ ರಾಗಿಯನ್ನು ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಇದು ದೀರ್ಘಕಾಲದವರೆಗೆ ಹಸಿವನ್ನು ನಿಗ್ರಹಿಸುತ್ತದೆ. ಆದ್ದರಿಂದ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ರಾಗಿಯನ್ನು ತಿನ್ನುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ಗಮನಿಸಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+